ನವದೆಹಲಿ:ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್​ ಗೋಡ್ಸೆಯಲ್ಲಿ ನಂಬಿಕೆ ಇಟ್ಟಿರುವುದನ್ನು ಹೇಳಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದೆಗಾರಿಕೆ ಇಲ್ಲವೆಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇರಳದ ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನಲ್ಲಿ ಸಿಎಎ ವಿರೋಧಿಸಿ ನಡೆದ “ಸಂವಿಧಾನ ರಕ್ಷಣೆ” ಜಾಥದ ಬಳಿಕ ನಡೆದ ಸಮಾವೇಶವನ್ನು ಉದ್ದೇಶಿಸಿ ರಾಹುಲ್​ ಗಾಂಧಿ ಮಾತನಾಡಿದರು.
ಗುರುವಾರ ಮಹಾತ್ಮ ಗಾಂಧಿಯವರ 72ನೇ ಪುಣ್ಯತಿಥಿ ಹಿನ್ನೆಲ್ಲೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾಥುರಾಮ್​ ಗೋಡ್ಸೆಯ ಆದರ್ಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಗಾಂಧಿ ಹಂತಕನಲ್ಲಿ ನಂಬಿಕೆ ಇಟ್ಟಿರುವುದನ್ನು ಒಪ್ಪಿಕೊಳ್ಳಲು ಅವರಲ್ಲಿ ಧೈರ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿಎಎ ವಿರುದ್ಧ ಗುಡುಗಿದ ರಾಹುಲ್​, ಭಾರತೀಯರೆಂದು ಸಾಬೀತು ಪಡಿಸಿಕೊಳ್ಳಲು ಭಾರತೀಯರನ್ನೇ ಪ್ರಧಾನಿ ಮೋದಿ ಬಲವಂತ ಮಾಡುತ್ತಿದ್ದಾರೆ. ಭಾರತೀಯರು ಯಾರೆಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ನಮ್ಮ ಭಾರತೀಯತ್ವವನ್ನು ಪ್ರಶ್ನಿಸಲು ಮೋದಿಗೆ ಲೈಸೆನ್ಸ್​ ಕೊಟ್ಟವರು ಯಾರು? ನಾನೊಬ್ಬ ಭಾರತೀಯ ಎಂಬುದು ನನಗೆ ಗೊತ್ತಿದೆ. ಅದನ್ನು ಯಾರಿಗೂ ಸಾಬೀತು ಮಾಡಬೇಕಿಲ್ಲ. ಹಾಗೆಯೇ 1.4 ಬಿಲಿಯನ್​ ಭಾರತೀಯರು ಕೂಡ ನಿಮ್ಮ ಭಾರತೀಯತ್ವವನ್ನು ಸಾಬೀತು ಮಾಡಿಕೊಳ್ಳಬೇಕಿಲ್ಲ ಎಂದರು.
ಇಂದು ಅಶಿಕ್ಷಿತ ವ್ಯಕ್ತಿಯು ಕೂಡ ಸಿಎಎ ಅನ್ನು ಪ್ರಶ್ನಿಸುತ್ತಿದ್ದಾನೆ. ದೇಶದ ಜನತೆಯ ಶಕ್ತಿ ಪ್ರಧಾನಿ ಮೋದಿಗೆ ತಿಳಿದಿಲ್ಲ. ಗೋಡ್ಸೆ ಮತ್ತು ಮೋದಿ ಆದರ್ಶ ಒಂದೇ ಆಗಿದೆ. ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಇದನ್ನು ಒಪ್ಪಿಕೊಳ್ಳಲು ಅವರಿಗೆ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.(ಏಜೆನ್ಸೀಸ್​)
#WATCHRahul Gandhi, Congress in Kalpetta, Kerala: Nathuram Godse shot Mahatma Gandhi because he did not believe in himself, he loved no one, he cared for nobody, he believed in nobody and that is the same with our Prime Minister, he only loves himself, only believes in himself.pic.twitter.com/itx4GKiVIM— ANI (@ANI)January 30, 2020
#WATCHRahul Gandhi, Congress in Kalpetta, Kerala: Nathuram Godse shot Mahatma Gandhi because he did not believe in himself, he loved no one, he cared for nobody, he believed in nobody and that is the same with our Prime Minister, he only loves himself, only believes in himself.pic.twitter.com/itx4GKiVIM
#WATCHRahul Gandhi, Congress in Kalpetta, Kerala: Nathuram Godse & Narendra Modi believe in the same ideology, there is no difference except Narendra Modi does not have the guts to say he believes in Godse.pic.twitter.com/J7GmOlBW55— ANI (@ANI)January 30, 2020
#WATCHRahul Gandhi, Congress in Kalpetta, Kerala: Nathuram Godse & Narendra Modi believe in the same ideology, there is no difference except Narendra Modi does not have the guts to say he believes in Godse.pic.twitter.com/J7GmOlBW55
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nineteen =
Remember me
