ಅಹಮದಾಬಾದ್:ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಡುವೆ ಉತ್ತಮ ಬಾಂಧವ್ಯ ಇದೆ. ಡೊನಾಲ್ಡ್​ ಟ್ರಂಪ್​ ಯಾವಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಸರಿಸುವಾಗಲೂ ನನ್ನ ಸ್ನೇಹಿತ ಎಂದೇ ಉಲ್ಲೇಖಿಸುತ್ತಾರೆ.
ಹಾಗೇ ಸೋಮವಾರ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಕೂಡ ಈ ಇಬ್ಬರು ದಿಗ್ಗಜರ ನಡುವಿನ ಬಾಂಧವ್ಯ ಎದ್ದು ಕಾಣುತ್ತಿತ್ತು.
ನರೇಂದ್ರ ಮೋದಿಯವರು ಟ್ರಂಪ್​ ಅವರನ್ನು ಯಾವಾಗಿನಂತೆ ಅಪ್ಪಿಕೊಂಡು ಸ್ವಾಗತಿಸಿದರು. ಅದಾದ ಬಳಿಕ ಅಹಮದಾಬಾದ್​ ಕಾರ್ಯಕ್ರಮ ಮುಕ್ತಾಯ ಆಗುವಷ್ಟರಲ್ಲಿ ಇವರಿಬ್ಬರೂ ಆರು ಬಾರಿ ಪರಸ್ಪರ ತಬ್ಬಿಕೊಂಡಿದ್ದಾರೆ.ನರೇಂದ್ರ ಮೋದಿಯವರು ಸ್ವಲ್ಪ ವಿಭಿನ್ನವಾಗಿ ಆಲಿಂಗನ ಮಾಡಿಕೊಳ್ಳುತ್ತಾರೆ. ಹಾಗೇ ಹಸ್ತಲಾಘವ (ಶೇಕ್​​ಹ್ಯಾಂಡ್​) ಮಾಡುವುದರಲ್ಲೂ ಭಿನ್ನತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಏರ್​ಫೋರ್ಸ್​-1 ವಿಮಾನದಿಂದ ಕೆಳಗೆ ಇಳಿಯುತ್ತಲೇ ನರೇಂದ್ರ ಮೋದಿಯವರು ಅವರನ್ನು ಎಂದಿನಂತೆ ಆಲಿಂಗಿಸಿಕೊಂಡು ಸ್ವಾಗತಿಸಿದರು.
ಅದಾದ ಮೇಲೆ ಮೊಟೆರಾ ಸ್ಟೇಡಿಯಂಗೆ ಪ್ರವೇಶ ಮಾಡಿದಾಗ ಎರಡು ಬಾರಿ ಪರಸ್ಪರ ಅಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಭಾಷಣ ಮುಗಿಸಿದಾಗಲೂ ಒಬ್ಬರಿಗೊಬ್ಬರು ಆಲಿಂಗಿಸಿಕೊಳ್ಳುವ ಮೂಲಕ ಶುಭಕೋರಿಕೊಂಡರು. ಒಟ್ಟಿನಲ್ಲಿ ಮೊಟೆರಾ ಕ್ರೀಡಾಂಗಣದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಆರು ಬಾರಿ ಆಲಿಂಗಿಸಿಕೊಂಡಿದ್ದಾರೆ.
ನಿನ್ನೆ ನಡೆದ ನಮಸ್ತೆ ಟ್ರಂಪ್​ ಅದ್ದೂರಿ ಸಮಾರಂಭಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಅವರೆಲ್ಲರ ಸಮ್ಮುಖದಲ್ಲಿ ಟ್ರಂಪ್​ ನರೇಂದ್ರ ಮೋದಿ ಹಾಗೂ ಭಾರತವನ್ನು ಮನಸಾರೆ ಹೊಗಳಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 11 =
Remember me
