ನವದೆಹಲಿ:ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28) ಹೊಸ ಸಂಸತ್​ ಭವನವನ್ನು ಉದ್ಘಾಟಿಸಿದ್ದಾರೆ. ಹೊಸ ಸಂಸತ್ತಿನ ಒಳಗೆ ಪ್ರಧಾನಿ ಮೋದಿ ಪ್ರವೇಶಿಸುತ್ತಿದ್ದಂತೆ ಸದನಸ ಒಳಗಿದ್ದ ಸದಸ್ಯರು ಎದ್ದು ನಿಂತು ಮೋದಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಅಲ್ಲದೆ, ಮೋದಿ ಮೋದಿ ಎಂಬ ಘೋಷಣೆಗಳು ಸಹ ಮೊಳಗಿದವು.
ಬೆಳಗ್ಗೆ 7.30ರಿಂದ ಹೊಸ ಸಂಸತ್​ ಭವನದ ವಿಧಿ-ವಿಧಾನಗಳು ಆರಂಭವಾದವು. ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಮತ್ತು ಪ್ರಧಾನಿ ಮೋದಿ ಪೂಜಾ-ಕೈಂಕರ್ಯದಲ್ಲಿ ಭಾಗಿಯಾದರು. ಬಳಿಕ ಅಧೀನಂ ಶ್ರೀಗಗಳಿಂದ ಪಡೆದ ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಪಕ್ಕದಲ್ಲಿ ಮೋದಿ ಪ್ರತಿಷ್ಠಾಪಿಸಿದರು. ಇದಾದ ಬಳಿಕ ಕೆಲ ಕಾಲ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.
ಇದನ್ನೂ ಓದಿ:ಪೊಲೀಸರು ವಿಚಾರಣೆಗೆ ಕರೆತರುವಾಗ ಮೇಲ್ಸೇತುವೆಯಿಂದ ಹಾರಿ ಸಾಮಾಜಿಕ ಕಾರ್ಯಕರ್ತ ಸಾವು
ಇದೀಗ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಿದೆ. ಹೊಸ ಸಂಸತ್​ ಕಟ್ಟಡದಲ್ಲಿ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಿ ಮೋದಿ ಅವರು ಸಂಸತ್​ ಪ್ರವೇಶಿಸುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸೇರಿದಂತೆ ಅನೇಕ ಸದಸ್ಯರುಗಳು ಎದ್ದು ನಿಂತು ಪ್ರಧಾನಿ ಮೋದಿ ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನೀಡಿದರು. ಸದನದಲ್ಲಿ ಮೋದಿ ಮೋದಿ ಎಂಬ ಘೊಷಣೆಗಳು ಸಹ ಮೊಳಗಿತು.
#WATCH| PM Modi enters new Parliament amid ‘Modi, Modi’ chants and standing ovation.pic.twitter.com/JRNSIImVjm
— ANI (@ANI)May 28, 2023

ಸಮಾರಂಭವನ್ನು ಕಾಂಗ್ರೆಸ್, ಶಿವಸೇನೆ (ಯುಬಿಟಿ), ಎಎಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೆ ದೇಶದ ಪ್ರಥಮ ಪ್ರಜೆಗೆ ಅವಮಾನಿಸಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿವೆ.(ಏಜೆನ್ಸೀಸ್​)
ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್​ಜೆಡಿ: ಇದು ದೇಶದ್ರೋಹವೆಂದ ಬಿಜೆಪಿ

ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲಾಗಿರಲಿ; ಸಂಸತ್ ಭವನ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
