ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ದೇಶಾದ್ಯಂತ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅದೇ ರೀತಿ, ಕನ್ನಡಿಗರೊಬ್ಬರು ದೆಹಲಿಯ ರಸ್ತೆಗಳಲ್ಲಿ ವಿಶೇಷ ಅಭಿಯಾನ ಕೈಗೊಂಡಿದ್ದಾರೆ.
ಇವರ ಹೆಸರು ಮೋಹನ್ ಕುಮಾರ್. ಕರ್ನಾಟಕ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲರು. ಪ್ರಧಾನಿ ಜನ್ಮದಿನದ ಹಿನ್ನೆಲೆಯಲ್ಲಿ ಅವರು ಇಂದು ದೆಹಲಿ ರಸ್ತೆಗಳಲ್ಲಿ ಮತದಾನ ಜಾಗೃತಿ ಓಟ ಕೈಗೊಂಡಿದ್ದರು.
ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈನಲ್ಲಿ ನಾಡ ಧ್ವಜ ಹಿಡಿದು, ದೆಹಲಿಯ ರಸ್ತೆಗಳಲ್ಲಿ ನಿರಂತರ 3 ಗಂಟೆ ಓಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಚಾಣಕ್ಯಪುರಿ, ಕರ್ನಾಟಕ ಭವನ ರಸ್ತೆ, ಅಕ್ಬರ್ ರೋಡ್, ತೀನ್ ಮೂರ್ತಿ ಭವನ್, ಸಂಸದ್ ರೋಡ್, ಇಂಡಿಯಾ ಗೇಟ್ ರಸ್ತೆ ಸೇರಿ ಹಲವೆಡೆ ಇವರ ಓಟ ಸಾಗಿತು.
ನಂತರ ತಮ್ಮ ಓಟದ ಉದ್ದೇಶದ ಬಗ್ಗೆ ವಿವರ ನೀಡಿದ ಮೋಹನ್‌ಕುಮಾರ್, ಮತದಾನದ ದಿನದಂದು ಬಹಳಷ್ಟು ಜನ ಮನೆಯಲ್ಲಿ ಟಿವಿ ನೋಡುತ್ತ ಅಥವಾ ಪ್ರೇಕ್ಷಣೀಯ ಸ್ಥಳಗಳಲ್ಲಿ ವಿಹಾರ ಮಾಡುತ್ತ ಕಾಲ ಕಳೆಯುತ್ತಾರೆ. ಇದನ್ನು ತಪ್ಪಿಸಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಆ ಬಗ್ಗೆ ಜಾಗೃತಿ ಮೂಡಿಸಲು ಇವತ್ತು ಈ ಓಟ ಕೈಗೊಂಡಿದ್ದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 1 =
Remember me
