ತಿರುವನಂತಪುರಂ:ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಇಂದು (ಏಪ್ರಿಲ್​ 25) ಚಾಲನೆ ನೀಡಿದರು.
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ವಂದೇ ಭಾರತ್​ ಎಕ್ಸ್​ಪ್ರೆಸ್ ರೈಲು​ ತಿರುವನಂತಪುರ ಕೇಂದ್ರ ಮತ್ತು ಕಾಸರಗೋಡು ನಡುವೆ ಸಂಚರಿಸಲಿದೆ.
ಇದನ್ನೂ ಓದಿ:ನಾಳೆ ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್‌ ರೋಡ್‌ ಶೋ; ಒಕ್ಕಲಿಗರ ಮತಬೇಟೆಗೆ ಮುಂದಾದ ಬಿಜೆಪಿ!
ಚಾಲನೆಗೂ ಮುನ್ನ ತಂಪನೂರ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ನಿಲ್ಲಿಸಲಾದ ರೈಲಿನ C 2 ಕೋಚ್‌ನಲ್ಲಿ 42 ಆಯ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಸಂವಾದ ನಡೆಸಿದ ಬಳಿಕ ಪ್ರಧಾನಿ ಮೋದಿ ರೈಲಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ರೈಲಿನಲ್ಲಿ ಮೋದಿಗೆ ಸಾಥ್​ ನೀಡಿದರು.
ಇದೇ ಸಂದರ್ಭದಲ್ಲಿ ಲೊಕೊ ಪೈಲಟ್‌ಗಳ ಜತೆಯೂ ಮೋದಿ ಮಾತನಾಡಿದರು. ಮೊದಲ ಪಯಣದಲ್ಲಿ ಧಾರ್ಮಿಕ, ಸಾಮಾಜಿಕ-ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದರು. 1000 ವಿದ್ಯಾರ್ಥಿಗಳು ವಿವಿಧ ನಿಲ್ದಾಣಗಳಿಂದ ಉಚಿತ ಪ್ರಯಾಣ ಅನುಭವಿಸಿದರು.(ಏಜೆನ್ಸೀಸ್​)
#WATCH| Kerala: PM Narendra Modi flags off the Thiruvananthapuram Central-Kasaragod Vande Bharat Express train from Thiruvananthapuram Central railway station.pic.twitter.com/zdqdmwNE3g
— ANI (@ANI)April 25, 2023

ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ: ಮಹಿಳೆ ಮೇಲೆ ಹಲ್ಲೆ ಮಾಡಿ ಬೇಕರಿ ತಿನಿಸು ಬಿಸಾಡಿದ ಪುಡಿರೌಡಿಗಳು

ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!

ಪ್ರಿಯತಮೆ ಮೇಲೆ ಕುದಿಯುವ ಎಣ್ಣೆ ಸುರಿದ ಗೆಳೆಯ; ಪ್ರಿಯಕರನಿಗಾಗಿ ಹುಡುಕಾಟ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
