ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಇಂದು ಬೆಳಗ್ಗೆ ರಾಜಧಾನಿ ದೆಹಲಿಯಿಂದ ಅಮೆರಿಕಕ್ಕೆ ತೆರಳಿದರು. ಇದೊಂದು ಮಹತ್ವದ ಪ್ರವಾಸವಾಗಿದ್ದು, ಸಾಕಷ್ಟು ದ್ವಿಪಕ್ಷೀಯ ಒಪ್ಪಂದಗಳಿಗೆ ಇದು ಸಾಕ್ಷಿಯಾಗಲಿದೆ.
ಮುಂದಿನ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಅಮೆರಿಕದಲ್ಲಿ ಇರಲಿದ್ದಾರೆ. ಈ ವೇಳೆ ಅವರು ಯುಎಸ್​ ಕಾಂಗ್ರೆಸ್​ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಉದ್ಯಮಿಗಳು ಮತ್ತು ಅನಿವಾಸಿ ಭಾರತೀಯರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರೊಂದಿಗೆ ವೈಟ್​ ಹೌಸ್​ನಲ್ಲಿ ವಿಶೇಷ ಭೋಜನಕೂಟದಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ಮೈಸೂರು ಬಳಿ ಭೀಕರ ಅಪಘಾತ ಪ್ರಕರಣ: ಮೃತ 10 ಜನರ ಪೈಕಿ 7 ಮಂದಿಗೆ ಮಾತ್ರ ಪರಿಹಾರ, ವೃದ್ಧೆ ಕಂಗಾಲು
#WATCH| Prime Minister Narendra Modi leaves from Delhi for his first official State visit to the United States.
He will attend Yoga Day celebrations at the UN HQ in New York and hold talks with US President Joe Biden & address to the Joint Session of the US Congress in…pic.twitter.com/y6avSoPpkd
— ANI (@ANI)June 20, 2023

ಗುರುವಾರ ಯುಎಸ್​ ಕಾಂಗ್ರೆಸ್​ ಜಂಟಿ ಸದನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಎರಡನೇ ಬಾರಿಗೆ ಯುಎಸ್​ ಕಾಂಗ್ರೆಸ್​ನಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್, ಪ್ರಧಾನಿ ಭಾಷಣಕ್ಕೆ ಆಹ್ವಾನವನ್ನು ನೀಡಿದೆ.
ಯಾವುದೇ ಭಾರತೀಯ ಪ್ರಧಾನಿಯು ಯುಎಸ್​ ಕಾಂಗ್ರೆಸ್​ನಲ್ಲಿ ಎರಡು ಬಾರಿ ಭಾಷಣ ಮಾಡಿಲ್ಲ. ವಿನ್ಸ್​ಟನ್​ ಚರ್ಚಿಲ್​, ನೆಲ್ಸನ್​​ ಮಂಡೇಲಾ ಬಿಟ್ಟರೆ ವಿಶ್ವ ನಾಯಕರು ಕೂಡ ಎರಡು ಬಾರಿ ಯುಎಸ್​ ಕಾಂಗ್ರೆಸ್​ನಲ್ಲಿ ಮಾತನಾಡಿಲ್ಲ. ಹೀಗಾಗಿ ಪ್ರಧಾನಿ ಭಾಷಣಕ್ಕೆ ತುಂಬಾ ಮಹತ್ವ ಇದೆ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರು ತಿಳಿಸಿದ್ದಾರೆ.
ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ದಕ್ಷಿಣ ಕೊರಿಯಾದ ಯೂನ್ ಸುಕ್ ಯೋಲ್ ನಂತರ ಅಧ್ಯಕ್ಷ ಬಿಡೆನ್ ಅವರು ರಾಷ್ಟ್ರದ ಭೇಟಿ ಮತ್ತು ಭೋಜನಕ್ಕೆ ಆಹ್ವಾನಿಸಿದ ಮೂರನೇ ವಿಶ್ವ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ.
ನಾಳೆ (ಜೂ.21) ವಿಶ್ವ ಯೋಗ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯುವ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಶುಕ್ರವಾರ, ಪ್ರಧಾನಿ ಅವರು ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ವಲಸಿಗ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ:ಜಲ್ಲಿಕಲ್ಲು, ಮರಳು ದುಬಾರಿ?: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್
ಅಮೆರಿಕಕ್ಕೆ ಹೊರಡುವ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ಯುಎಸ್​ಎನಲ್ಲಿ, ನಾನು ಉದ್ಯಮ ನಾಯಕರನ್ನು ಭೇಟಿ ಮಾಡಲು, ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ಮತ್ತು ವಿವಿಧ ನಾಯಕರನ್ನು ಭೇಟಿ ಮಾಡಲು ಅವಕಾಶವನ್ನು ಪಡೆಯುತ್ತಿದ್ದೇನೆ. ವ್ಯಾಪಾರ, ವಾಣಿಜ್ಯ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯುಎಸ್ಎ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ಬಯಸುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್​)
ಗಾಸಿಪ್​ಗೊಂದು ಫುಲ್​ಸ್ಟಾಪ್!; ಗಾಸಿಪ್ ಮಾಡಲು ಕಾರಣ?

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 8 ದಿನದಲ್ಲಿ 3.63 ಕೋಟಿಗೂ ಅಧಿಕ ಮಹಿಳೆಯರ ಪ್ರಯಾಣ, ಖರ್ಚಾಗಿದ್ದೆಷ್ಟು?

ಕುಮಾರ್​ ಬಂಗಾರಪ್ಪ-ಕಾಗೋಡು ತಿಮ್ಮಪ್ಪ ಭೇಟಿ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹೀಗೊಂದು ಚರ್ಚೆ ಶುರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
