ನವದೆಹಲಿ:ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೊಕಾಟೊ ಹೊಟೊಝೆ ಸೆಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಇದನ್ನೂ ಓದಿ:ಬಸ್​ಗಾಗಿ ಕಾಯುತ್ತಿದ್ದ ಮಹಿಳೆಗೆ ಬೈಕ್​ನಲ್ಲಿ ಲಿಫ್ಟ್​ಕೊಟ್ಟು ಅತ್ಯಾಚಾರ?
ಶನಿವಾರ ನಡೆದ ಪುರುಷರ ಶಾಟ್‌ಪುಟ್‌ ಎಫ್‌ 57 ಫೈನಲ್‌ನಲ್ಲಿ ಹೊಕಾಟೊ ಹೊಟೊಜೆ ಸೆಮಾ ಕಂಚಿನ ಪದಕ ಗೆದ್ದರು. ತಮ್ಮ ಅಧಿಕೃತ X ಹ್ಯಾಂಡಲ್‌ ನಲ್ಲಿ ಪ್ರಧಾನಿ ಮೋದಿ ಅವರು ಹೊಕಾಟೊ ಅವರದ್ದು “ನಂಬಲಾಗದ” ಶಕ್ತಿ. ಇದು ರಾಷ್ಟ್ರಕ್ಕೆ “ಹೆಮ್ಮೆಯ ಕ್ಷಣ” ಎಂದು ಅಭಿನಂದಿಸಿದ್ದಾರೆ.
ಹೊಕಾಟೊ ಹೊಟೊಝೆ ಸೆಮಾ ಅವರು ಪುರುಷರ ಶಾಟ್‌ಪುಟ್ ಎಫ್​57 ನಲ್ಲಿ ಕಂಚಿನ ಪದಕವನ್ನು ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯ ಎಂದು ಪ್ರಧಾನಿ ಮೋದಿ X ನಲ್ಲಿ ಬರೆದಿದ್ದಾರೆ.
ಹೊಕಾಟೊ ಅವರು 14.65 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿದರು, ಇದು ಅವರ ವೈಯಕ್ತಿಕ ಶ್ರೇಷ್ಠವಾಗಿದೆ. ಇರಾನ್‌ನ ಯಾಶಿನ್ ಖೋಸ್ರಾವಿ 15.96 ಮೀ ಎಸೆದು ಚಿನ್ನ ಗೆದ್ದರೆ, 15.06 ಮೀ ಎಸೆದ ಬ್ರೆಜಿಲ್‌ನ ಥಿಯಾಗೊ ಪಾಲಿನೊ ಡಾಸ್ ಸ್ಯಾಂಟೋಸ್ ಬೆಳ್ಳಿ ಪಡೆದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಎಫ್ 46 ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಶನಿವಾರ ಭಾರತದ ಪ್ಯಾರಾ ಅಥ್ಲೀಟ್ ಭಾವನಾಬೆನ್ ಚೌಧರಿ ಐದನೇ ಸ್ಥಾನ ಪಡೆದರು. ಭಾವನಾಬೆನ್ ತನ್ನ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ 39.70 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ಹಾಕಿದರೂ ಸ್ಪರ್ಧೆಯಿಂದ ಹೊರಗುಳಿದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ ಭಾರತದ ಪದಕಗಳ ಸಂಖ್ಯೆ 27 ಕ್ಕೆ ಏರಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಅತಿ ಹೆಚ್ಚು ಚಿನ್ನ ಇದಾಗಿದೆ. ವಿಶೇಷವಾಗಿ ಭಾರತದ ಪ್ಯಾರಾ ಅಥ್ಲೀಟ್‌ಗಳು ಮೂರು ಚಿನ್ನ, ಆರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ನೀಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು..ನೆಲದ ಮೇಲೆ ಬಿದ್ದ ಸೋಮನಾಥ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
