ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ ಬಳಿಕ ಮೊದಲ ಮನ್​ ಕಿ ಬಾತ್​ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ದೇಶದ ಜನರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದು ಪ್ರಧಾನಿ ಅವರ ಮನ್​ ಕಿ ಬಾತ್​​ ಕಾರ್ಯಕ್ರಮದ 111ನೇ ಸಂಚಿಕೆಯಾಗಿದೆ.
ಇದನ್ನು ಓದಿ:ಮನ್​ ಕಿ ಬಾತ್​​​ನಲ್ಲಿ ದೇಶದ ಪ್ರಜೆಗಳಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ; 111ನೇ ಸಂಚಿಕೆಯಲ್ಲಿ ಮಾಡಿದ ಮನವಿ ಏನು ಗೊತ್ತಾ?
ಕಾರ್ಯಕ್ರಮದಲ್ಲಿ ಕಳೆದ 50 ವರ್ಷಗಳಿಂದ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಸಂಸ್ಕೃತ ವಾರ್ತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಸಂಸ್ಕೃತವನ್ನು ಉತ್ತೇಜಿಸುವ ಮತ್ತು ಜನರನ್ನು ಭಾಷೆಗೆ ಸಂಪರ್ಕಿಸುವ ಆಕಾಶವಾಣಿಯ ನಿರಂತರ ಪ್ರಯತ್ನಕ್ಕೆ ಆಲ್​ ಇಂಡಿಯಾ ರೇಡಿಯೋವನ್ನು ಶ್ಲಾಷಿಸಿದರು. ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದ ಪ್ರಗತಿಯಲ್ಲಿ ಸಂಸ್ಕೃತವು ದೊಡ್ಡ ಪಾತ್ರವನ್ನು ವಹಿಸಿದೆ. ಸಂಸ್ಕೃತವನ್ನು ಗೌರವಿಸುವುದು ಮತ್ತು ದೈನಂದಿನ ಜೀವನದೊಂದಿಗೆ ಸಂಪರ್ಕಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಅದೇ ಸಮಯದಲ್ಲಿ ಬೆಂಗಳೂರಿನ ಕಬ್ಬನ್​ ಪಾರ್ಕ್​​ನಲ್ಲಿ ವಾರಂತ್ಯದಲ್ಲಿ ನಡೆಯುವ ವೀಕೆಂಡ್​ ಸಂಸ್ಕೃತ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ ಕಬ್ಬನ್​ ಪಾರ್ಕ್​​ನಲ್ಲಿ ಜನರು ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ. ವಾರಕ್ಕೊಮ್ಮೆ, ಪ್ರತಿ ಭಾನುವಾರ ಮಕ್ಕಳು, ಯುವಕರು ಮತ್ತು ಹಿರಿಯರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಅಷ್ಟೇ ಅಲ್ಲ ಅನೇಕ ಚರ್ಚೆಗಳನ್ನು ಮಾಡುತ್ತಾರೆ. ಇದರಿಂದ ನಾವು ಪ್ರಪಂಚದ ಪ್ರಾಚೀನ ಮತ್ತು ವೈಜ್ಞಾನಿಕ ಜ್ಞಾನದಿಂದ ಬಹಳಷ್ಟು ಕಲಿಯಬಹುದು ಎಂದಿದ್ದಾರೆ.
ಸಂಸ್ಕೃತ ಸಂವಾದ ಕಾರ್ಯಕ್ರಮಗಳ ರೂವಾರಿ ಸಮಷ್ಠಿ ಗುಬ್ಬಿ. ಆನ್​ಲೈನ್​​ ಮೂಲಕ ಹಲವು ಸಂಸ್ಕೃತ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆಸಕ್ತರಿಗೆ ಆನ್​ಲೈನ್​ ಕ್ಲಾಸ್​ ಅನ್ನೂ ತೆಗೆದುಕೊಳ್ಳುತ್ತಾರೆ. ವೆಬ್‌ಸೈಟ್ ಮೂಲಕ ಸಮಷ್ಠಿ ಗುಬ್ಬಿ ಪ್ರಾರಂಭಿಸಿದ ಈ ವೀಕೆಂಡ್ ಸಂಸ್ಕೃತವು ಸಂವಾದ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಎಲ್ಲ ವಯಸ್ಸಿನ ಜನರನ್ನು ಪ್ರೋತ್ಸಾಹಿಸುತ್ತದೆ. ಇದರ ಹೆಚ್ಚುತ್ತಿರುವ ಜನಪ್ರಿಯತೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವು ಕಬ್ಬನ್​ ಪಾರ್ಕ್​ನಲ್ಲಿ ಪ್ರತಿ ಭಾನುವಾರ ಬೆಳಗ್ಗೆ 6:45ಕ್ಕೆ ಆರಂಭವಾಗುತ್ತದೆ. ಸಂಸ್ಕೃತ ಕಲಿಕೆ, ಸಂವಾದ, ಹಾಡು, ಆಟ, ನಲಿ ಕಲಿ ಇತ್ಯಾದಿ ಎಲ್ಲವೂ ಇರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹಿರಿಯ ವಯಸ್ಸಿಗಿಂತ 19ರಿಂದ 32 ವರ್ಷದ ವಯೋಮಾನದವರೆ ಹೆಚ್ಚು ಎಂಬುದು ವಿಶೇಷ. (ಏಜೆನ್ಸೀಸ್​​)
ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 2 =
Remember me
