ನವದೆಹಲಿ: ಈಶಾನ್ಯ ರಾಜ್ಯಗಳ ಜನ ಈಗ ಎರಡು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್​ -19 ಸೋಂಕಿನ ಸಂಕಷ್ಟ ಒಂದೆಡೆಯಾದರೆ, ಪ್ರವಾಹ ಪರಿಸ್ಥಿತಿಯ ಸಂಕಷ್ಟ ಎರಡನೇಯದು. ಇಂತಹ ಸಂಕಷ್ಟಮಯ ಸನ್ನಿವೇಶದಲ್ಲಿ ಎಲ್ಲರೂ ನಿಮ್ಮ ಜತೆಗೆ ಇದ್ದೇವೆ. ನಿಮ್ಮ ಕಷ್ಟಕ್ಕೆ ಆಗುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಜನರಿಗೆ ಆಶ್ವಾಸನೆ ನೀಡಿದರು.
ಅವರು ಇಂದು ಮಣಿಪುರ ವಾಟರ್ ಸಪ್ಲೈ ಪ್ರಾಜೆಕ್ಟ್​ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಯೋಜನೆಯು ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಯು ಗ್ರೇಟರ್ ಇಂಫಾಲ ಮತ್ತು ಮಣಿಪುರದ 1,700 ಹಳ್ಳಿಗಳಿಗೆ ಪರಿಶುದ್ಧ ಕುಡಿಯುವ ನೀರನ್ನು ಪೂರೈಸಲಿದೆ. ಈ ಪ್ರದೇಶಗಳ ಜನರ ಜೀವನಾಡಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!
ಈ ಯೋಜನೆಯನ್ನು ಸ್ಥಳೀಯ ಪಂಚಾಯತಿ ಮತ್ತು ಅದರ ವ್ಯಾಪ್ತಿಯ ಜನರ ನೆರವಿಗೆ ಬೇಕಾದಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಅತ್ಯುತ್ತಮ ಉದಾಹರಣೆಯಾಗಬಲ್ಲ ಪ್ರಾಜೆಕ್ಟ್ ಆಗಿದೆ. ಕೋವಿಡ್​ -19 ಲಾಕ್​ಡೌನ್ ಜಾರಿಯಲ್ಲಿತ್ತಾದರೂ ಯಾವುದೇ ಕೆಲಸ ಕಾರ್ಯಗಳು ಮೊಟಕುಗೊಂಡಿಲ್ಲ. ಈ ಯೋಜನೆಯ ರೂಪುರೇಷಗಳು ಸಿದ್ಧವಾಗುತ್ತಿತ್ತು ಎಂದು ಪ್ರಧಾನಿ ಮೋದಿ ವಿವರಿಸಿದರು.
ಇದನ್ನೂ ಓದಿ:ಸಹಾಯವಾಣಿಗೆ ಕರೆ ಬಂದರೆ ಕೂಡಲೇ ಸ್ಪಂದಿಸಿ- ಅಧಿಕಾರಿಗಳಿಗೆ ಸಿಎಂ ತಾಕೀತು
ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ಪ್ರಕಾರ ಮಣಿಪುರದ 1,185 ವಸತಿ ಪ್ರದೇಶಗಳ 1,42,749 ಮನೆಗಳಿಗೆ ಪರಿಶುದ್ಧ ಕುಡಿಯವ ನೀರನ್ನು ಪೂರೈಸಲಿದೆ. ಇದೇ ವೇಳೆ, ಮಣಿಪುರ ವಾಟರ್​ ಸಪ್ಲೈ ಪ್ರಾಜೆಕ್ಟ್​ ಮೂಲಕ ಇಂಫಾಲ್ ಪ್ಲಾನಿಂಗ್ ಏರಿಯಾ, 15 ಪಟ್ಟಣಗಳು, 1,731 ಗ್ರಾಮೀಣ ವಸತಿ ಪ್ರದೇಶಗಳ ಒಟ್ಟು 16 ಜಿಲ್ಲೆಗಳ 2,80,756 ಮನೆಗಳಿಗೆ ಪರಿಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. 2024ನೇ ಇಸವಿಯೊಳಗೆ ಪ್ರತಿ ಮನೆಗೂ ನೀರು ಎಂಬುದು ಜಲ ಜೀವನ್ ಮಿಷನ್​ನ ಘೋಷ ವಾಕ್ಯವಾಗಿದ್ದು, ನ್ಯೂ ಡೆವಲಪ್​ಮೆಂಟ್ ಬ್ಯಾಂಕ್​ನಿಂದ ಇದಕ್ಕೆ ಸಾಲದ ನೆರವೂ ಇದೆ. ಈ ಪ್ರಾಜೆಕ್ಟ್​ನ ಒಟ್ಟು ವೆಚ್ಚ 3054.58 ಕೋಟಿ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)
LIVE: ಜಲಪೂರೈಕೆ ಯೋಜನೆ- ಮಣಿಪುರದ ಮಹಿಳೆಯರಿಗೆ ರಕ್ಷಾಬಂಧನದ ಉಡುಗೊರೆ- ಪ್ರಧಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
