ನವದೆಹಲಿ:ಡೀಪ್​ಫೇಕ್ ವಿಡಿಯೋ ಸೃಷ್ಟಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಡೀಪ್​ಫೇಕ್ ವಿಡಿಯೋಗಳನ್ನು ಖಂಡಿಸುವಂತೆ ತಾವು ಚಾಟ್​ಜಿಪಿಟಿಗೆ ಸೂಚಿಸಿರುವುದಾಗಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ದೀಪಾವಳಿ ಮಿಲನ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮೋದಿ ಹೇಳಿದರು.
ಇಂಥ ವಿಡಿಯೋಗಳು ಇಂಟರ್​ನೆಟ್​ನಲ್ಲಿ ಪ್ರಸಾರವಾದಾಗ ಆ ಬಗ್ಗೆ ಎಚ್ಚರಿಕೆ ನೀಡುವಂತೆಯೂ ಮೋದಿ ಚಾಟ್​ಜಿಪಿಟಿಗೆ ಸಲಹೆ ಮಾಡಿದ್ದಾರೆ. ಎಐ, ಅದರಲ್ಲೂ ವಿಶೇಷವಾಗಿ ಡೀಪ್​ಫೇಕ್ ಒಂದು ಹೊಸ ಸವಾಲು ಹಾಗೂ ಸಮಸ್ಯೆಯಾಗಿದೆ ಎಂದು ಮೋದಿ ವರ್ಣಿಸಿದರು. ತಾವು ಗರ್ಬಾ ಹಾಡನ್ನು ಹಾಡುವ ಡೀಪ್​ಫೇಕ್ ವಿಡಿಯೋವನ್ನು ಇತ್ತೀಚೆಗೆ ನೋಡಿದ್ದಾಗಿ ಪ್ರಧಾನಿ ಹೇಳಿದರು. ಆನ್​ಲೈನ್​ನಲ್ಲಿ ಇಂಥ ಅನೇಕ ಡೀಪ್​ಫೇಕ್ ವಿಡಿಯೋಗಳಿವೆ. ‘ನನ್ನನ್ನು ಇಷ್ಟಪಡುವವರು ಈ ವಿಡಿಯೋವನ್ನು ನನಗೆ ಫಾರ್ವರ್ಡ್ ಮಾಡಿದ್ದರು’ ಎಂದು ಮೋದಿ ವಿವರಿಸಿದರು. ‘ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸುವುದು ತುಂಬಾ ಮುಖ್ಯವಾಗಿದೆ’ ಎಂದು ಮೋದಿ ಪ್ರತಿಪಾದಿಸಿದರು.
ನನ್ನ ವೀಡಿಯೋವನ್ನು ಅತ್ಯಂತ ನೈಜರೀತಿಯಲ್ಲಿ ಎಡಿಟ್ ಮಾಡಲಾಗಿದೆ. ಚಿಕ್ಕಂದಿನಿಂದಲೂ ನಾನು ಗರ್ಬಾ ಮಾಡಿಲ್ಲ. ಆದರೆ ಎಐ ಬಳಸಿ ಡೀಪ್​ಫೇಕ್ ದೃಶ್ಯ ಸೃಷ್ಟಿಸಲಾಗಿದೆ. ಇದೇ ರೀತಿ ಬೇರೆಯವರ ವಿಡಿಯೋ ಕೂಡ ಡೀಪ್​ಫೇಕ್ ಆಗಿರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಭಾರತೀಯ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಇದೂ ಒಂದು. ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು.
| ನರೇಂದ್ರ ಮೋದಿ, ಪ್ರಧಾನಿ
ತೀವ್ರ ಆಕ್ರೋಶ:ಸಾಮಾಜಿಕ ಮಾಧ್ಯಮದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಕಾಜಲ್ ಅವರ ಡೀಪ್​ಫೇಕ್ ವಿಡಿಯೋಗಳು ಪ್ರತ್ಯಕ್ಷವಾಗಿರುವ ಬೆನ್ನಲ್ಲೇ ಮೋದಿ ಈ ಟಿಪ್ಪಣಿ ಮಾಡಿದ್ದಾರೆ. ನಟಿಯರ ಡೀಪ್​ಫೇಕ್​ಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಕಾನೂನು ಕ್ರಮಕ್ಕೂ ಆಗ್ರಹಿಸಲಾಗಿದೆ. ವಿಶೇಷವಾಗಿ ಸಾರ್ವಜನಿಕ ವ್ಯಕ್ತಿಗಳ ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ತಮ್ಮ ಮುಖಗಳುಳ್ಳ ದೃಶ್ಯಗಳ ವಿಡಿಯೋದಿಂದ ಅವರಿಗೆ ಸಮಸ್ಯೆ ಉಂಟಾಗಬಹುದು ಎಂದು ಹೇಳಲಾಗಿದೆ.
ಲಕ್ಷ ರೂಪಾಯಿ ದಂಡ:ಡೀಪ್​ಫೇಕ್​ಗಳ ಸೃಷ್ಟಿ ಮತ್ತು ಪ್ರಸಾರಕ್ಕೆ -ಠಿ;1 ಲಕ್ಷ ದಂಡ ಮತ್ತು 3 ವರ್ಷ ಸೆರೆವಾಸದ ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ‘ಛತ್ ಪೂಜಾ’ ಒಂದು ರಾಷ್ಟ್ರೀಯ ಹಬ್ಬವಾಗಿ ರೂಪುಗೊಂಡಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದರು. ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವ ತಮ್ಮ ಸಂಕಲ್ಪ ಕೇವಲ ಮಾತುಗಳಲ್ಲ; ಒಂದು ವಾಸ್ತವತೆಯಾಗಿದೆ ಎಂದು ಮೋದಿ ಹೇಳಿದರು.
ಹಿರಿಯ ನಟ ಅಮಿತಾಭ್ ಬಚ್ಚನ್ ಧ್ವನಿ ಅನುಕರಣೆ:ಹಿರಿಯ ನಟ ಅಮಿತಾಭ್ ಬಚ್ಚನ್ ಸಹಿತ ಸಿನಿಮಾ ಕ್ಷೇತ್ರದಲ್ಲಿರುವ ಹಲವರ ಧ್ವನಿಗಳ ಅನುಕರಣೆ ಕೂಡ ಫೇಕ್ ಆಡಿಯೋ ಕುರಿತ ಚರ್ಚೆಯನ್ನು ಹುಟ್ಟು ಹಾಕಿದ್ದು ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ. ಇಂಥ ಡೀಪ್​ಫೇಕ್​ಗಳ ಪ್ರಸಾರದಿಂದ ಎದುರಿಸ ಬೇಕಾಗುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಳೆದ ವಾರವೇ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಲಹೆ ರೂಪದ ಎಚ್ಚರಿಕೆ ನೀಡಿತ್ತು. ಇಂಥ ವಿಡಿಯೋಗಳ ಸೃಷ್ಟಿ ಮತ್ತು ಪ್ರಸಾರಕ್ಕಾಗಿ ದಂಡ ಕಟ್ಟಬೇಕಾದೀತೆಂದೂ ಹೇಳಿತ್ತು.
ಬಿಗಿಯಾಗುತ್ತಾ ರಾಜಾಹುಲಿ ಹಿಡಿತ?; ಬಿಎಸ್​ವೈಗೆ ಬಂತು ಬಲ!

ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
