ನವದೆಹಲಿ:ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ರಾಜಕೀಯ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿದ್ದಾರೆ. ಮೋದಿ ವೈಯಕ್ತಿಕ ಖಾತೆಗೆ 7 ಕೋಟಿಗೂ ಹೆಚ್ಚು ಬೆಂಬ ಲಿಗರಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಅತ್ಯಂತ ಸಕ್ರಿಯ ರಾಜಕಾರಣಿ ಎಂಬ ಶ್ರೇಯವನ್ನು ಅವರು ಹೊಂದಿದ್ದಾರೆ.
ಮೋದಿ ಗುಜರಾತ್​ನ ಸಿಎಂ ಆಗಿದ್ದಾಗ (2009) ಟ್ವಿಟರ್​ಗೆ ಸೇರ್ಪಡೆಯಾದರು. 2010ರಲ್ಲಿ ಅವರ ಫಾಲೋಯರ್ಸ್ ಸಂಖ್ಯೆ ಒಂದು ಲಕ್ಷ ಇತ್ತು. ಈಗ ಅದು 7 ಕೋಟಿ ಮೀರಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ 2.63 ಕೋಟಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1.94 ಕೋಟಿ ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ.
ಹೊಸ ಐಟಿ ನಿಯಮ ಪಾಲಿಸಲು ಟ್ವಿಟರ್ ಹಿಂದೇಟು ಹಾಕಿದ ಬಳಿಕ ದೇಶೀಯವಾದ ಮೈಕ್ರೋ ಬ್ಲಾಗಿಂಗ್ ತಾಣ ‘ಕೂ’ ಬಳಕೆಯನ್ನು ಭಾರತ ಸರ್ಕಾರ ಹೆಚ್ಚಿಸಿದೆ. ಸರ್ಕಾರಿ ಇಲಾಖೆಗಳು ಮತ್ತು ಸಚಿವರು ಈಗ ಹೆಚ್ಚಾಗಿ ’ಕೂ’ ಆಪ್​ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಪ್ರಧಾನಿ ಮೋದಿ ಇನ್ನೂ ’ಕೂ’ ಆಪ್​ಗೆ ಸೇರಿಲ್ಲ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ವೈಯಕ್ತಿಕ ಟ್ವೀಟ್ ಖಾತೆಯನ್ನು 3.90 ಕೋಟಿ ಜನರು ಅನುಸರಿಸುತ್ತಿದ್ದಾರೆ. ಅಧ್ಯಕ್ಷರ ಅಧಿಕೃತ ಖಾತೆಗೆ 1.28 ಕೋಟಿ ಫಾಲೋಯರ್ಸ್ ಇದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಮಾಗೆ 1.29 ಕೋಟಿ, ಫ್ರಾನ್ಸ್​ನ ಅಧ್ಯಕ್ಷ ಎಮಾನ್ಯುಯಲ್ ಮೆಕ್ರಾನ್ 70.10 ಲಕ್ಷ ಟ್ವಿಟರ್ ಬೆಂಬಲಿಗರು ಇದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಟ್ವಿಟರ್​ನಲ್ಲಿ ಹೆಚ್ಚು ಸಕ್ರಿಯವಾಗಿದ್ದ ಜಾಗತಿಕ ನಾಯಕರಾಗಿದ್ದರು. ಆಗ ಅವರ ಫಾಲೋಯರ್ಸ್ ಸಂಖ್ಯೆ 8.87 ಕೋಟಿ. ಆದರೆ, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ದೃಢೀಕರಣದ ವೇಳೆಯ (ಜನವರಿ 6) ಹಿಂಸಾಚಾರ ಘಟನೆ ನಂತರ ಅವರ ಖಾತೆಯನ್ನು ಟ್ವಿಟರ್ ಕಾಯಂ ಬಂದ್ ಮಾಡಿದೆ.

‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 3 =
Remember me
