ಭೋಪಾಲ್​: ಕರೊನಾ ವೈರಸ್​ನಿಂದ ಚೇತರಿಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದಾರೆ. ನಂತರ ಟ್ವೀಟ್​ ಮೂಲಕ, ಪ್ರಧಾನಮಂತ್ರಿಯವರು ಐದು ಶತಮಾನಗಳ ನಾಯಕ ಎಂದು ಹೊಗಳಿದ್ದಾರೆ.
ಈ ದೇಶ ಅನೇಕ ಸಮರ್ಥ ನಾಯಕರನ್ನು ನೋಡಿದೆ. ಅವರೆಲ್ಲರೂ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ, ದಶಕ, ಶತಮಾನಗಳಿಗೆ ಒಬ್ಬರಂತೆ ಆಗಿ ಹೋದ ನಾಯಕರನ್ನೂ ದೇಶ ಕಂಡಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐದು ಶತಮಾನಗಳ ನಾಯಕ ಎಂದು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ:ದಿಶಾ​ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್​!
ಹಾಗೇ ಇನ್ನೊಂದು ಟ್ವೀಟ್​ನಲ್ಲಿ, ಭಾರತದ ಜನಪ್ರಿಯ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ 500 ವರ್ಷಗಳ ಇತಿಹಾಸ ಇರುವ ವಿವಾದಕ್ಕೆ ತೆರೆಬಿದ್ದಿದೆ. ಹಾಗೇ, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ದಾರಿಯಾಗಿದೆ. ಇವೆಲ್ಲ ಸಾಧ್ಯವಾಗಿದ್ದು ಪ್ರಧಾನಿ ಮೋದಿಯವರ ಇಚ್ಛಾಶಕ್ತಿ ಮತ್ತು ಶ್ರೀರಾಮನ ಆಶೀರ್ವಾದದಿಂದ ಎಂದು ಸಿಎಂ ಚೌಹಾಣ್​ ಹೇಳಿದ್ದಾರೆ.
ಕೊವಿಡ್​ನಿಂದ ಗುಣಮುಖರಾಗಿ ಮನೆಗೆ ಬಂದಿರುವ ಸಿಎಂ ಶಿವರಾಜ್​ ಚೌಹಾಣ್​ ಅವರು ಮನೆಯಲ್ಲೇ ಕುಳಿತು ಶ್ರೀರಾಮಮಂದಿರ ಶಿಲಾನ್ಯಾಸ ಸಮಾರಂಭವನ್ನು ವೀಕ್ಷಿಸಿದ್ದಾರೆ. (ಏಜೆನ್ಸೀಸ್​)
ಪ್ರೇಯಸಿಗೆ ಮದುವೆ ಪ್ರಪೋಸ್​ ಮಾಡಲು ಮನೆಯನ್ನೆಲ್ಲ ಅಲಂಕರಿಸಿದ; ಆದರೆ ಆಕೆಯನ್ನು ಕರೆದುಕೊಂಡು ಬರುವಷ್ಟರಲ್ಲಿ ಕಾದಿತ್ತು ಬಿಗ್ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
