ನೋಯ್ಡಾ:ಉತ್ತರ ಪ್ರದೇಶದ ಗೌತಮ ಬುದ್ಧನಗರದ ನೋಯ್ಡಾ ಬಳಿಯ ಜೇವರ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಇದು ದೆಹಲಿಯಿಂದ ವಿಮಾನ ನಿಲ್ದಾಣದಿಂದ 80 ಕಿ.ಮೀ. ದೂರದಲ್ಲಿರುವುದರಿಂದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್ ಮೇಲಿನ ಒತ್ತಡ ಕಡಿಮೆ ಆಗಲಿದೆ. ಜತೆಗೆ ರಾಷ್ಟ್ರ ರಾಜಧಾನಿ ಬಳಿಯಲ್ಲೇ ಇನ್ನೊಂದು ಸುಸಜ್ಜಿತ ವಿಮಾನ ನಿಲ್ದಾಣ ದೊರೆಯಲಿದೆ. ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ, ರಾಜ್ಯ ಖಾತೆ ಸಚಿವ ನಂದ ಗೋಪಾಲ್ ಗುಪ್ತಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಇನ್ನಿತರ ಸಚಿವರು ಭಾಗಿಯಾಗಿದ್ದರು. ನೂರಾರು ಜನರು ಬೈಕ್, ಕಾರು, ಟ್ರಾ್ಯಕ್ಟರ್​ಗಳಲ್ಲಿ ಆಗಮಿಸಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
8 ಏರ್​ಪೋರ್ಟ್:ಮುಂದಿನ ಮೂರು ವರ್ಷದಲ್ಲಿ ಜೇವರ್, ಅಯೋಧ್ಯೆ, ಅಲಿಗಢ, ಚಿತ್ರಕೂಟ, ಅಜಂಗಢ, ಮೊರಾದಾಬಾದ್, ಶ್ರಾವಸ್ತಿ, ಮುಯಿರ್ಪರಗಳಲ್ಲಿ ಹೊಸ ಏರ್​ಪೋರ್ಟ್ ಸಿದ್ಧವಾಗಲಿವೆ. ಇತ್ತೀಚೆಗೆ ಕುಶಿನಗರ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nineteen =
Remember me
