ನವದೆಹಲಿ:ದೇಶದ ಮೂರು ಹೈಟೆಕ್​ ಕೊವಿಡ್​-19 ಟೆಸ್ಟ್ ಲ್ಯಾಬ್​​ಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್​ ಆಗಿ ಉದ್ಘಾಟನೆ ಮಾಡಿದರು.
ನೊಯ್ಡಾ, ಮುಂಬೈ ಮತ್ತು ಕೋಲ್ಕತ್ತ ಗಳಲ್ಲಿನ ಹೈಟೆಕ್​ ಲ್ಯಾಬ್​ಗಳ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್​, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳ ಮುಖ್ಯಮಂತ್ರಿಗಳೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಿದ್ದರು.
ನೊಯ್ಡಾದ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ಕ್ಯಾನ್ಸರ್​ ಪ್ರಿವೆನ್ಷನ್​ ಆ್ಯಂಡ್​ ರಿಸರ್ಚ್​, ಮುಂಬೈನ್ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ರಿಸರ್ಚ್​ ಇನ್​ ರಿಪ್ರೊಡಕ್ಟಿವ್​ ಹೆಲ್ತ್​ ಮತ್ತು ಕೋಲ್ಕತ್ತರ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ಕಾಲರಾ ಮತ್ತು ಎಂಟರಿಕ್ ಡಿಸೀಸಸ್​ ಸಂಸ್ಥೆಗಳಲ್ಲಿ ಕೊವಿಡ್​-19 ಟೆಸ್ಟ್​ ಹೈಟೆಕ್​ ಲ್ಯಾಬ್​ಗಳನ್ನು ಪ್ರಾರಂಭಿಸಲಾಗಿದೆ.
ಲ್ಯಾಬ್​​ಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿಯವರು, ಕರೊನಾ ವಿರುದ್ಧದ ಸುದೀರ್ಘ ಮತ್ತು ಬಹುದೊಡ್ಡ ಹೋರಾಟದಲ್ಲಿ ಬಹುಮುಖ್ಯ ಭಾಗವೆಂದರೆ, ನಿರ್ಧಿಷ್ಟ ಆರೋಗ್ಯ ಮೂಲಕಸೌಕರ್ಯಗಳನ್ನು ತ್ವರಿತಗತಿಯಲ್ಲಿ ದೇಶದಲ್ಲಿ ನಿರ್ಮಾಣ ಮಾಡುವುದು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿಯೇ 15,000 ಕೋಟಿ ರೂಪಾಯಿಯ ಪ್ಯಾಕೇಜ್​ ಘೋಷಣೆ ಮಾಡಿದೆ ಎಂದು ಹೇಳಿದರು.
ಕರೊನಾ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಮೂರು ಟಿಗಳ ಪ್ರಯೋಗ ಮಾಡುತ್ತಿದೆ. ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಎಂಬ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. (ಏಜೆನ್ಸೀಸ್​)
ರಾಮ ಮಂದಿರದ ಭೂಮಿಪೂಜೆಗೆ ಸಾವಿರಾರು ಕಿ.ಮೀ.ದೂರದಿಂದ ಬರಲಿದ್ದಾರೆ ಮುಸ್ಲಿಂ ಭಕ್ತರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + eight =
Remember me
