ನವದೆಹಲಿ:ಸೌರವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಮತ್ತು ಸಾಮಾನ್ಯ ಜನರ ವಿದ್ಯುತ್ ಶುಲ್ಕ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ ಪ್ರಧಾನ ಮಂತ್ರಿ ಸೂರ್ಯ ಘರ್​: ಮುಫ್ತ್‌ ಬಿಜ್ಲಿ ಯೋಜನಾ’ ಆರಂಭಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ:SHOWCIALIST ಸಿದ್ದರಾಮಯ್ಯ ಮಸಾಜ್​ ಕುರ್ಚಿ ಬೆಲೆ 10 ಲಕ್ಷ ರೂ ಎಂದ ಬಿಜೆಪಿ!
ದೇಶದಾದ್ಯಂತ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ ತಲಾ 300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿದೆ.ಈ ಯೋಜನೆಗಾಗಿ ಒಟ್ಟು 75 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗುತ್ತದೆ. ‘ಸುಸ್ಥಿರ ಅಭಿವೃದ್ಧಿ ಹಾಗೂ ಜನರ ಹಿತದ ದೃಷ್ಟಿಯಿಂದ ನಾವು ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ ಎಂದು ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.
Let’s boost solar power and sustainable progress. I urge all residential consumers, especially youngsters, to strengthen the PM – Surya Ghar: Muft Bijli Yojana by applying at-https://t.co/sKmreZmenT— Narendra Modi (@narendramodi)February 13, 2024
Let’s boost solar power and sustainable progress. I urge all residential consumers, especially youngsters, to strengthen the PM – Surya Ghar: Muft Bijli Yojana by applying at-https://t.co/sKmreZmenT
ಗಣನೀಯ ಪ್ರಮಾಣದ ಸಬ್ಸಿಡಿಯನ್ನು ಇದು ಒಳಗೊಂಡಿದೆ. ಸಬ್ಸಿಡಿ ಮೊತ್ತವನ್ನು ಯೋಜನೆಗೆ ಸೇರುವವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಬ್ಯಾಂಕ್‌ ಸಾಲವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಈ ಮೂಲಕ ಜನರ ಮೇಲೆ ವೆಚ್ಚದ ಹೊರೆ ಬೀಳದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಈ ಯೋಜನೆಯನ್ನು ತಳಮಟ್ಟದಲ್ಲಿ ಜನಪ್ರಿಯಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಪಂಚಾಯಿತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಯೋಜನೆಯು ಜನರ ಆದಾಯ ಹೆಚ್ಚಿಸುತ್ತದೆ, ವಿದ್ಯುತ್ ಬಿಲ್ ಮೊತ್ತವನ್ನು ತಗ್ಗಿಸುತ್ತದೆ ಹಾಗೂ ಉದ್ಯೋಗ ಸೃಷ್ಟಿಸುತ್ತದೆ ಎಂದಿದ್ದಾರೆ.
ಇದಕ್ಕಾಗಿpmsuryaghar.gov.inವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮತ್ತು ಇದರ ಅಡಿಯಲ್ಲಿ ಮೇಲ್ಛಾವಣಿ ಸೌರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ..? ವಿವರಗಳನ್ನು ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ.
ನೋಂದಾಯಿಸಲು ನೀವು ಹೀಗೆ ಮಾಡಿ:ಹಂತ1:ಮೊದಲು ನೀವು ಈ ಪೋರ್ಟಲ್‌ಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.• ನಿಮ್ಮ ರಾಜ್ಯ ಮತ್ತು ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆಮಾಡಿ.• ನಿಮ್ಮ ವಿದ್ಯುತ್ ಸಂಪರ್ಕದ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಿ.ಪೋರ್ಟಲ್‌ನಲ್ಲಿನ ನಿಯಮಗಳ ಪ್ರಕಾರ ನೋಂದಣಿಯನ್ನು ಪೂರ್ಣಗೊಳಿಸಬೇಕು.ಹಂತ 2:ನಂತರ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಅಲ್ಲಿRuptop Solarಗೆ ಅರ್ಜಿ ಹಾಕಿ.ಹಂತ 3:ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿ ಮತ್ತು ಡಿಸ್ಕಮ್‌ನಿಂದ ಅನುಮೋದನೆಗಳಿಗಾಗಿ ನಿರೀಕ್ಷಿಸಿ. ಅನುಮತಿಯನ್ನು ಪಡೆದ ನಂತರ, ನಿಮ್ಮ ಡಿಸ್ಕಮ್‌ನ ನೋಂದಾಯಿತ ಮಾರಾಟಗಾರರಿಂದ ಸೌರ ಸ್ಥಾವರವನ್ನು ಸ್ಥಾಪಿಸಿಹಂತ 4:ಅನುಸ್ಥಾಪನೆ ಪೂರ್ಣಗೊಳಿಸಿದ ನಂತರ, ಪೋರ್ಟಲ್‌ನಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.ಹಂತ 5:ನೆಟ್ ಮೀಟರ್ ಅಳವಡಿಸಿದ ನಂತರ, ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಪೋರ್ಟಲ್‌ನಿಂದ ಕಮಿಷನಿಂಗ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.ಹಂತ 8:ಈ ವರದಿಯನ್ನು ಪಡೆದ ನಂತರ, ನೀವು ಪೋರ್ಟಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ರದ್ದುಪಡಿಸಿದ ಚೆಕ್ ಅನ್ನು ಸಲ್ಲಿಸಬೇಕು. ಸಬ್ಸಿಡಿಯನ್ನು 30 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

SHOWCIALIST ಸಿದ್ದರಾಮಯ್ಯ ಮಸಾಜ್​ ಕುರ್ಚಿ ಬೆಲೆ 10 ಲಕ್ಷ ರೂ ಎಂದ ಬಿಜೆಪಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
