ಯುಎಇ:ಫ್ರಾನ್ಸ್​ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಗಲ್ಫ್​ ರಾಷ್ಟ್ರವಾದ ಯುನೈಟೆಡ್​ ಅರಬ್​ ಎಮಿರೇಟ್ಸ್​(UAE) ರಾಜಧಾನಿ ಅಬುದಾಬಿಗೆ ಆಗಮಿಸಿದ್ದು, ಅಧ್ಯಕ್ಷ ಶೇಖ್​ ಮೊಹಮ್ಮದ್​ ಬಿನ್​ ಜಾಯೆದ್​ ಅಲ್​ ನಹ್ಯಾನ್​ ಜೊತೆಗೆ ಉಭಯ ದೇಶಗಳ ಕುರಿತಾಗಿ ದ್ವಿಪಕ್ಷೀಯ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ.
ಕಳೆದ ವರ್ಷ ಭಾರತ ಹಾಗೂ ಯುಎಇ ನಡುವೆ ಮಾಡಿಕೊಳ್ಳಲಾಗಿದ್ದ ಆರ್ಥಿಕ ಒಪ್ಪಂದದಿಂದಾಗಿ ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟು ಶೇ 20ರಷ್ಟು ವೃದ್ಧಿಸಿದ್ದು, ಈ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
Concluding a productive UAE visit. Our nations are working together on so many issues aimed at making our planet better. I thank HH Sheikh Mohamed bin Zayed Al Nahyan for the warm hospitality.@MohamedBinZayed
ಇದನ್ನೂ ಓದಿ:VIDEO| ಕೇಕ್​ ತಿನ್ನಿಸುವಾಗ ನಟ ಯೋಗಿ ಬಾಬುರನ್ನು ಕಿಚಾಯಿಸಿದ ಧೋನಿ
ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ನಮ್ಮ ಗ್ರಹವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಹಲವಾರು ವಿಚಾರಗಳಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದ ಶೇಖ್​ ಮೊಹಮ್ಮದ್​ ಬಿನ್​ ಜಾಯೆದ್​ ಅಲ್​ ನಹ್ಯಾನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಎರಡು ರಾಷ್ಟ್ರಗಳ ಕರೆನ್ಸಿಗಳು ಸದೃಢ ಆರ್ಥಿಕತೆ ವೃದ್ಧಿಗೆ ಪೂರಕವಾಗಿದ್ದು, ನಮ್ಮ ನಡುವೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಸಹಕಾರ ಮತ್ತು ನೆರವಿಗೆ ಈ ಪ್ರವಾಸ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.
A visit defined by transformative outcomes.PM@narendramodiemplanes for New Delhi after wrapping up a successful visit to UAE.pic.twitter.com/MbUp1l0p0q
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + one =
Remember me
