ನವದೆಹಲಿ:ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿನ ಸಕ್ರಿಯ ಪ್ರಕರಣಗಳಿರುವ ಕರ್ನಾಟಕ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಭೆ ನಡೆಸಲಿದ್ದಾರೆ. ವರ್ಚುವಲ್ ವೇದಿಕೆಯಲ್ಲಿ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯಗಳಲ್ಲಿನ ಕರೊನಾ ಸ್ಥಿತಿಗತಿ ಬಗ್ಗೆ ರ್ಚಚಿಸಲಾಗುವುದು ಎನ್ನಲಾಗಿದೆ.
ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ. 63 ಪಾಲು ಸೋಂಕಿತರು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್​ನಲ್ಲಿ ಇದ್ದಾರೆ. ಒಟ್ಟಾರೆ ಪ್ರಕರಣಗಳಲ್ಲಿ ಶೇ. 65.5 ಭಾಗವನ್ನು ಪಡೆದುಕೊಂಡಿರುವ ಈ ರಾಜ್ಯಗಳು ದೇಶದ ಒಟ್ಟು ಮೃತರ ಸಂಖ್ಯೆಯಲ್ಲಿ ಶೇ. 77ರಷ್ಟು ಪಾಲುಹೊಂದಿವೆ. ಮಹಾರಾಷ್ಟ್ರ, ಪಂಜಾಬ್ ಮತ್ತು ದೆಹಲಿ ರಾಜ್ಯಗಳಲ್ಲಿ ಮರಣ ಪ್ರಮಾಣ ಶೇ. 2ಕ್ಕೂ ಹೆಚ್ಚಿದೆ.
ಭಾರತದಲ್ಲಿ ಶೀಘ್ರ ಸ್ಪುಟ್ನಿಕ್-ವಿ ಪರೀಕ್ಷೆ ಆರಂಭ: ರಷ್ಯಾದ ಸ್ಪುಟ್ನಿಕ್-ವಿ ಔಷಧವನ್ನು ಭಾರತದಲ್ಲಿ ಪರೀಕ್ಷೆ ಮತ್ತು ವಿತರಣೆ ಮಾಡಲು ಡಾ. ರೆಡ್ಡೀಸ್ ಲ್ಯಾಬೋರೇಟರಿಸ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಕೆಲ ವಾರಗಳಲ್ಲಿ ಮೂರನೇ ಹಂತದ ಪರೀಕ್ಷೆ ಆರಂಭಿಸುವುದಾಗಿ ಸಂಸ್ಥೆ ತಿಳಿಸಿದೆ. ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,000-2,000 ಜನರ ಮೇಲೆ ಪ್ರಯೋಗಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ದೀಪಕ್ ಸಪ್ರಾ ತಿಳಿಸಿದ್ದಾರೆ. ಪರೀಕ್ಷೆಗೆ ಭಾರತೀಯ ಔಷಧ ನಿಯಂತ್ರಕ ಮಂಡಳಿಯಿಂದ ಅನುಮತಿ ದೊರೆಯುವುದು ಬಾಕಿಯಿದೆ. ಈ ಔಷಧಕ್ಕೆ ಕಾನೂನಾತ್ಮಕ ಹೊಣೆಯನ್ನು ಹೊರಲು ಸಿದ್ಧವೆಂದು ರಷ್ಯಾ ತಿಳಿಸಿದೆ. ಬೇರೆಲ್ಲ ಔಷಧ ತಯಾರಕರು, ಗ್ರಾಹಕರೇ ಹೊಣೆ ಎಂದು ಹೇಳುತ್ತಿರುವಾಗ ನಾವು ಮಾತ್ರ ಈ ಹೊರೆ ಹೊರಲು ಸಿದ್ಧರಿದ್ದೇವೆ ರಷ್ಯಾದ ನೇರ ಹೂಡಿಕೆ ನಿಧಿ (ಆರ್​ಡಿಐಎಫ್) ತಿಳಿಸಿದೆ.
ಲೈಂಗಿಕ ಕಾರ್ಯಕರ್ತರಿಗೆ ಪಡಿತರ, ಸುಪ್ರೀಂ ಸೂಚನೆ
ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಣೆ ಮತ್ತು ನಗದು ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅವರ ಬಳಿ ಗುರುತಿನ ಪುರಾವೆಗಾಗಿ ಒತ್ತಾಯ ಮಾಡದಂತೆಯೂ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠ ಸೂಚಿಸಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಲೈಂಗಿಕ ಕಾರ್ಯಕರ್ತರ ಬದುಕು ತೀವ್ರ ದುರ್ಭರವಾಗಿದ್ದು, ಅವರ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಎಂದು ಎನ್​ಜಿಒ ಒಂದು ಸುಪ್ರೀಂಕೋರ್ಟ್​ಗೆ
ಅರ್ಜಿ ಸಲ್ಲಿಸಿತ್ತು. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿರುವ 1.20 ಲಕ್ಷ ಲೈಂಗಿಕ ಕಾರ್ಯಕರ್ತರಲ್ಲಿ ಶೇ. 96 ಮಂದಿಗೆ ಬದುಕಲು ಕಷ್ಟವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
