ಅಯೋಧ್ಯೆ:ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಬಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕವಷ್ಟೇ ಶ್ರೀ ರಾಮ ದೇಗುಲ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಶ್ರೀ ರಾಮಜನ್ಮಭೂಮಿ ತೀರ್ಥ್​ ಕ್ಷೇತ್ರ್​ ಟ್ರಸ್ಟ್​ನ ಮಹಾಂತಾ ನೃತ್ಯ ಗೋಪಾಲ್​ ದಾಸ್​ ಹೇಳಿದ್ದಾರೆ.
ದೇಗುಲ ನಿರ್ಮಾಣ ಕಾಮಗಾರಿ ಕುರಿತು ಚರ್ಚಿಸಲು ಟ್ರಸ್ಟ್​ನ ಸದಸ್ಯರು ಜುಲೈ 18ರಂದು ಸಭೆ ಸೇರಲಿದ್ದಾರೆ. ಆಯೋಧ್ಯೆಗೆ ಬಂದು ಶಂಕುಸ್ಥಾಪನೆ ನೆರವೇರಿಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಈಗಾಗಲೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಅವರಿಂದ ಉತ್ತರವನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಲೇಹ್​ ಆಸ್ಪತ್ರೆ ಬಗ್ಗೆ ಟೀಕೆ: ದುರುದ್ದೇಶದಿಂದ ಕೂಡಿದ ಟೀಕೆ ಎಂದ ಸೇನೆ
ಅವರು ಇಲ್ಲಿಗೆ ಬಂದರೆ ಸಾಕು. ಕೋವಿಡ್​ ಪಿಡುಗಿನ ಹಿನ್ನೆಲೆಯಲ್ಲಿ ಜನರ ನೂಕುನುಗ್ಗಲು ಉಂಟಾಗದಂತೆ, ಅವರೆಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ನಾವು ಎಚ್ಚರವಹಿಸುತ್ತೇವೆ ಎಂದು ಹೇಳಿದರು.
ಕಳೆವ ವರ್ಷದ ನವೆಂಬರ್​ 9ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಟ್ರಸ್ಟ್​ ರಚಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಟೆಂಟ್​ನಲ್ಲಿದ್ದ ಶ್ರೀ ರಾಮಚಂದ್ರ ಮೂರ್ತಿಯನ್ನು ಮಾನಸ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಿ, ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮದುವೆ ಎರಡೇ ದಿನ ಇರುವಾಗ ಪಾಗಲ್​ ಪ್ರೇಮಿಯ ಗುಂಡೇಟಿಗೆ ಬಲಿಯಾದ 19ರ ಯುವತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
