ಒರಿಸ್ಸಾ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದು ಮೋದಿಯವರ ಜಾತಿಯ ಮೇಲಿನ ದಾಳಿಯಾಗಿದೆ. ಮೋದಿಯವರು ಹಿಂದುಳಿದ ವರ್ಗದವರಲ್ಲ (ಒಬಿಸಿ) ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಸಾಮಾನ್ಯ ವರ್ಗ (ಜನರಲ್ ಕೆಟಗರಿ)ದಲ್ಲಿ ಜನಿಸಿದರು. ಮುಖ್ಯಮಂತ್ರಿಯಾದ ನಂತರ ತಮ್ಮ ಜಾತಿಯನ್ನು ಒಬಿಸಿಗೆ ಬದಲಾಯಿಸಿದರು ಎಂದು ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ತಿಳಿಸಿದರು.
ಮೋದಿ ಒಬಿಸಿ ವರ್ಗದಲ್ಲಿ ಜನಿಸಿಲ್ಲ, ಗುಜರಾತಿನ ತೇಲಿ ಜಾತಿಯಲ್ಲಿ ಜನಿಸಿದರು. ಈ ಸಮುದಾಯಕ್ಕೆ 2000ನೇ ಇಸವಿಯಲ್ಲಿ ಬಿಜೆಪಿ ಒಬಿಸಿ ಟ್ಯಾಗ್ ನೀಡಿತ್ತು. ಅವರು ಸಾಮಾನ್ಯ ವರ್ಗದಲ್ಲಿ ಜನಿಸಿರುವುದರಿಂದ ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿ ನಡೆಸಲು ಬಿಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.ಮೊದಲನೆಯದಾಗಿ ನರೇಂದ್ರ ಮೋದಿಯವರು ಒಬಿಸಿ ವರ್ಗದಲ್ಲಿ ಜನಿಸಿಲ್ಲ, ತೇಲಿ ಜಾತಿ. ನೀವು ಜನರನ್ನು ಭಯಂಕರವಾಗಿ ಮೂರ್ಖರಾಗಿಸುತ್ತೀರಿ. ಬಿಜೆಪಿಯವರು 2000ನೇ ಇಸವಿಯಲ್ಲಿ ತಮ್ಮ ಸಮುದಾಯವನ್ನು ಒಬಿಸಿ ಮಾಡಿದರು. ನೀವು ಒಬಿಸಿಯಲ್ಲಿ ಜನಿಸಿದ್ದೇನೆ ಎಂದು ಇಡೀ ಜಗತ್ತಿಗೆ ಸುಳ್ಳು ಹೇಳುತ್ತಿದ್ದೀರಿ. ಮೋದಿಯವರು ಎಂದಿಗೂ ಯಾವುದೇ ಒಬಿಸಿಯನ್ನು ತಬ್ಬಿಕೊಳ್ಳುವುದಿಲ್ಲ. ಯಾವ ರೈತರ ಕೈ ಹಿಡಿಯುವುದಿಲ್ಲ ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು.
#WATCHकांग्रेस सांसद राहुल गांधी ने कहा, "पीएम मोदी का जन्म ओबीसी वर्ग में नहीं हुआ था। वे गुजरात की तेली जाति में पैदा हुए थे। इस समुदाय को बीजेपी ने साल 2000 में ओबीसी का टैग दिया था। उनका जन्म सामान्य जाति में हुआ था…वे कभी जातीय जनगणना नहीं होने देंगे क्योंकि उनका जन्म…pic.twitter.com/ZiAWnw2lr5
— ANI_HindiNews (@AHindinews)February 8, 2024

ನಾನು ಜಾತಿ ಗಣತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವಾಗ, ಪ್ರಧಾನಿ ಮೋದಿ ದೇಶದಲ್ಲಿ ಕೇವಲ ಎರಡು ಜಾತಿಗಳಿವೆ – ಶ್ರೀಮಂತ ಮತ್ತು ಬಡವರು ಎಂದು ಹೇಳಿದರು. ಎರಡು ಜಾತಿಗಳಿದ್ದರೆ ನೀವು ಯಾರು? ನೀವು ಬಡವರಲ್ಲ! ಕೋಟಿ ಬೆಲೆಬಾಳುವ ಸೂಟ್ ಧರಿಸುತ್ತೀರಿ. ದಿನಕ್ಕೆ ಹಲವಾರು ಬಾರಿ ಬಟ್ಟೆ ಬದಲಿಸಿ, ನಂತರ ನಾನು ಒಬಿಸಿ ವರ್ಗದ ವ್ಯಕ್ತಿ ಎಂದು ಸುಳ್ಳು ಹೇಳುತ್ತೀರಿ ಎಂದು ರಾಹುಲ್ ಟೀಕಿಸಿದರು.
ಪ್ರಧಾನಿ ಮೋದಿಯವರ ಜಾತಿ ಕುರಿತು ರಾಹುಲ್ ಹೇಳಿಕೆಗೆ ಕೇಂದ್ರ ಸಚಿವ ಕೌಶಲ್ ಕಿಶೋರ್, ರಾಹುಲ್ ಗಾಂಧಿ ಮೊದಲು ಜಾತಿಗಳ ಬಗ್ಗೆ ಅಧ್ಯಯನ ಮಾಡಲಿ. ತೇಲಿ ಜಾತಿಯ ಜನರು ಯಾವ ವರ್ಗಕ್ಕೆ ಸೇರಿದವರು ಎಂಬುದು ಅವರಿಗೆ ತಿಳಿದಿಲ್ಲ. ತೇಲಿ ಸಮುದಾಯದ ಜನರು ಒಬಿಸಿ ವರ್ಗದಲ್ಲಿ ಬರುತ್ತಾರೆ ಮತ್ತು ಪ್ರಧಾನಿ ಮೋದಿ ಅದೇ ಸಮುದಾಯಕ್ಕೆ ಸೇರಿದವರು. ರಾಹುಲ್ ಗಾಂಧಿಗೆ ದೇಶದ ಬಗ್ಗೆ, ದೇಶದ ಸಮಾಜದ ಬಗ್ಗೆ ಜ್ಞಾನವಿಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಖರ್ಗೆಯಲ್ಲ; ರಾಜ್ಯಸಭೆಯಲ್ಲಿ ಮತ್ತೆ ಗುಡುಗಿದ ದೇವೇಗೌಡ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
