ಢಾಕಾ :ಹಿಂದೂ ಮಾನ್ಯತೆಯ ಪ್ರಕಾರ 51 ಶಕ್ತಿ ಪೀಠಗಳಲ್ಲಿ ಒಂದಾದ ಜೇಶೋರೇಶ್ವರಿ ಕಾಳಿ ಮಂದಿರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪೂಜೆ ಸಲ್ಲಿಸಿದರು. ಈಗ ಬಾಂಗ್ಲಾದೇಶದ ಗಡಿ ಜಿಲ್ಲೆಯಾದ ಸತ್ಖೀರಾದ ಈಶ್ವರೀಪುರ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ತಮ್ಮ ಬಾಂಗ್ಲಾ ಪ್ರವಾಸದ ಎರಡನೇ ದಿನ ಮೋದಿ ಭೇಟಿ ನೀಡಿದರು.
16ನೇ ಶತಮಾನದಲ್ಲಿ ಹಿಂದೂ ರಾಜನೊಬ್ಬ ಕಟ್ಟಿಸಿದ ಎನ್ನಲಾದ ಈ ದೇವಾಲಯಕ್ಕೆ, ಪೂರ್ವನಿಯೋಜಿತ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದ ಮೋದಿ, ಕಾಳಿ ಮಾತೆಗೆ ಮುಕುಟವೊಂದನ್ನು ಅರ್ಪಿಸಿದರು. ಈ ಮುಕುಟವನ್ನು ಮೂರು ವಾರಗಳ ಅವಧಿಯಲ್ಲಿ ಪಾರಂಪರಿಕ ಕಲಾಕರನೊಬ್ಬ ಚಿನ್ನದ ಪ್ಲೇಟಿಂಗ್​ನೊಂದಿಗೆ ಬೆಳ್ಳಿಯಿಂದ ತಯಾರಿಸಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:“10 ಮಿಲಿಯನ್ ಬಾಂಗ್ಲಾದೇಶೀಯರಿಗೆ ಭಾರತ ಆಶ್ರಯ ನೀಡಿದೆ”
ದೇವಾಲಯದ ಅರ್ಚಕರು ಮಂತ್ರ ಹೇಳುತ್ತಿರುವಾಗ ಕೆಳಗೆ ಕೂತು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವ ತಮ್ಮ ವಿಡಿಯೋ ಒಂದನ್ನು ಮೋದಿ ಅವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.
Feeling blessed after praying at the Jeshoreshwari Kali Temple.pic.twitter.com/8CzSSXt9PS
— Narendra Modi (@narendramodi)March 27, 2021

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, “ಕೆಲವೇ ವಾರಗಳಲ್ಲಿ ಚೈತ್ರೀ ನವರಾತ್ರಿ ಆರಂಭವಾಗಲಿದೆ. ಈ ಪವಿತ್ರ ಸಮಯಕ್ಕೆ ಮುಂಚೆ 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ಪುಣ್ಯ ಸ್ಥಳದಲ್ಲಿ ನನಗೆ ಮಾ ಕಾಳಿಯ ದರ್ಶನ ಭಾಗ್ಯ ಲಭಿಸಿದೆ. ಮಾನವರು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಕಾಳಿಮಾತೆಯ ವರದಹಸ್ತ ನಮ್ಮ ಮೇಲಿರಬೇಕು. ಹಾಗಾಗಿ ಕಾಳಿಮಾತೆಯಲ್ಲಿ ಮಾನವ ಜನಾಂಗವನ್ನು ಆದಷ್ಟು ಬೇಗ ಕೋವಿಡ್-19 ರಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು.
ಈ ದೇವಾಲಯದಲ್ಲಿ ನಡೆಯುವ ‘ಮಾ ಕಾಳಿ ಮೇಳ’ದಲ್ಲಿ ಭಾರತದ ಮತ್ತು ಬಾಂಗ್ಲಾದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಭಕ್ತರ ಉಪಯೋಗಕ್ಕಾಗಿ ಬಹೂಪಯೋಗಿ ಸಮುದಾಯ ಭವನವೊಂದನ್ನು ಭಾರತ ನಿರ್ಮಿಸುವುದಾಗಿ ಘೋಷಿಸಿದರು. “ಸ್ಥಳೀಯರಿಗೆ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಳಕೆಯಾಗುವಂತಿರಬೇಕು. ಮುಖ್ಯವಾಗಿ ಸೈಕ್ಲೋನ್​ನಂಥ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಪ್ರತಿಯೊಬ್ಬರಿಗೂ ಆಶ್ರಯವಾಗಿರಬೇಕು. ಅಂತಹ ಭವನದ ನಿರ್ಮಾಣ ಕಾರ್ಯವನ್ನು ಭಾರತ ಮಾಡಲಿದೆ. ಈ ಕಾರ್ಯಕ್ಕೆ ನಮಗೆ ಶುಭ ಕೋರಿರುವ ಬಾಂಗ್ಲಾದೇಶ ಸರ್ಕಾರಕ್ಕೆ ನಾನು ಋಣಿಯಾಗಿದ್ದೇನೆ” ಎಂದು ಮೋದಿ ಹೇಳಿದರು.(ಏಜೆನ್ಸೀಸ್)
ಪ್ರೇಮ ನಿವೇದನೆಗೆ ಹೀಗೊಂದು ‘ಮಾರ್ಗ’! ರಸ್ತೆ ಮೇಲೆ ‘ಐ ಲವ್ ಯು’!

ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
