ಅಮರಾವತಿ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಾಲಯದಲ್ಲಿ ಆರತಿ ಬೆಳಗಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಯೇ ಕುಳಿತು ರಾಮ ಭಜನೆಯನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
#WATCH| Prime Minister Narendra Modi offers prayers at the Veerbhadra Temple in Lepakshi, Andhra Pradeshpic.twitter.com/MeUWCc7h58
ಇದನ್ನೂ ಓದಿ:ಕ್ರಿಕೆಟ್​ಗೆ ವಿದಾಯ ಘೋಷಿಸಿದ ಚೊಚ್ಚಲ ಐಪಿಎಲ್​ ಸೂಪರ್​ಸ್ಟಾರ್​
ರಾಮಮಂದಿರ ಉದ್ಘಾಟನೆಗೂ ಮುನ್ನ ಆಂಧ್ರಪ್ರದೇಶ ಹಾಗೂ ಕೇರಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬಹುಕೋಟಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.  ಬುಧವಾರ ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರದ ಶ್ರೀ ರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಲೇಪಾಕ್ಷಿಗೂ ರಾಮಾಯಣಕ್ಕೂ ನಂಟಿದೆ. ವನವಾಸದಲ್ಲಿರುವ ಸಮಯದಲ್ಲಿ ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯುಇದೇ ಜಾಗದಲ್ಲಿ ಆತನನ್ನು ಬೆನ್ನಟ್ಟಿ ಹೋರಾಟ ನಡೆಸಿತ್ತು. ಬಳಿಕ ರಾವಣನ ದಾಳಿಯಿಂದ ನೆಲಕ್ಕೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದ ಜಟಾಯು ಸೀತಾ ದೇವಿಯನ್ನು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಪ್ರಾಣ ಬಿಟ್ಟಿತ್ತು. ಬಳಿಕ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ ಜಾಗಕ್ಕೆ ಲೇಪಾಕ್ಷಿ ಎನ್ನುವ ನಂಬಿಕೆಯಿದೆ.
#WATCH| Prime Minister Narendra Modi sings 'Shri Ram Jai Ram' bhajan at the Veerbhadra Temple in Lepakshi, Andhra Pradeshpic.twitter.com/6F0lyyQSXN
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
