ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಇದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಜನಸಾಮಾನ್ಯರಿಗೆ ಎಚ್ಚರಿಸಿದ್ದಾರೆ. ‘ಎಐ’ನಿಂದ ರಚಿತವಾದ ವೀಡಿಯೊಗಳು ಮತ್ತು ಚಿತ್ರಗಳು ನೈಜ ಎಂಬಂತೆ ಕಾಣುತ್ತವೆ ಎಂದ ಪ್ರಧಾನಿ, ಹೊಸ ತಂತ್ರಜ್ಞಾನದ ಬಗ್ಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ಪುಟ್ಟಗೌರಿಯರ ಮದುವೆ ನಿಲ್ಲಿಸುವವರು ಯಾರು? ಬಾಲ್ಯ ವಿವಾಹಕ್ಕೆ ಸಂಪೂರ್ಣ ಕಡಿವಾಣ ಬೀಳೋದು ಯಾವಾಗ?
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದ ಪ್ರಧಾನಿ ಮೋದಿ, ಹೊಸ ತಂತ್ರಜ್ಞಾನಗಳನ್ನು ಬಳಸುವಾಗ ಬಹಳ ಎಚ್ಚರ ವಹಿಸಿ ಎಂದು ಪ್ರತ್ಯೇಕವಾಗಿ ಒತ್ತಿ ಹೇಳಿದರು. “ನಾವು ಹೊಸ ತಂತ್ರಜ್ಞಾನದೊಂದಿಗೆ ಜಾಗರೂಕರಾಗಿರಬೇಕು. ಇವುಗಳನ್ನು ಎಚ್ಚರಿಕೆಯಿಂದ ಬಳಸಿದರೆ, ಅವು ತುಂಬಾ ಉಪಯುಕ್ತವಾಗಬಹುದು. ಆದಾಗ್ಯೂ, ಇವುಗಳನ್ನು ದುರುಪಯೋಗಪಡಿಸಿಕೊಂಡರೆ, ದೊಡ್ಡ ಸಮಸ್ಯೆಗಳು ಎದುರಾಗಬಹುದು” ಎಂದರು.
“ನೀವು ಜನರೇಟಿವ್ ಎಐ (AI) ಸಹಾಯದಿಂದ ಮಾಡಿದ ಡೀಪ್‌ಫೇಕ್ ವೀಡಿಯೊಗಳ ಬಗ್ಗೆ ತಿಳಿದಿರಬೇಕು. ಈ ದೃಶ್ಯಗಳು ತುಂಬಾ ನೈಜವಾಗಿ ಕಾಣುತ್ತವೆ. ಆದ್ದರಿಂದ ವೀಡಿಯೊ ಅಥವಾ ಚಿತ್ರದ ಸತ್ಯಾಸತ್ಯತೆಯನ್ನು ನಂಬುವ ಮೊದಲು ನಾವು ಬಹಳ ಜಾಗರೂಕತೆ ವಹಿಸಬೇಕು” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ:ಮಕ್ಕಳಿಗೆ ಸೂರು ಸಮಸ್ಯೆ ನೂರಾರು: ವಸತಿ ಶಾಲೆ, ಹಾಸ್ಟೆಲ್​ಗಳ ವಸ್ತುಸ್ಥಿತಿ ಅನಾವರಣ
ಕಳೆದ ತಿಂಗಳು ನಟಿಯರಾದ ರಶ್ಮಿಕಾ ಮಂದಣ್ಣ, ಕಾಜೋಲ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರ ಡೀಪ್‌ಫೇಕ್ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಸುದ್ದಿಗಳು ಜನಸಾಮಾನ್ಯರಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತ್ತು!,(ಏಜೆನ್ಸೀಸ್).
VIDEO| BBSK10: ಡ್ರೋನ್​ ಪ್ರತಾಪ್​ ಬ್ರೇನ್​ ವಾಶ್​ ಮಾಡ್ತಿದ್ದಾರೆ ಇವರು…; ಸ್ನೇಹಿತ್​ ಸೂಚಿಸಿದ ಹೆಸರು ಯಾರದ್ದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twenty =
Remember me
