ನವದೆಹಲಿ :ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಒದಗಿಸಲಾಗಿರುವ ವೆಂಟಿಲೇಟರ್​​ಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಕೂಡಲೇ ಆಡಿಟ್​ ಮಾಡಿ ವರದಿ ಸಲ್ಲಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಇಂದು ಭಾರತದ ಕೋವಿಡ್​ ಸನ್ನಿವೇಶವನ್ನು ಸಮೀಕ್ಷೆ ನಡೆಸಲು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಈ ನಿರ್ದೇಶನ ನೀಡಿದ್ದಾರೆ.
“ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್​ಗಳು ಬಳಸಲ್ಪಡದೆ ಶೇಖರಿಸಿಡಲಾಗಿವೆ ಎಂಬ ವರದಿಗಳ ಬಗ್ಗೆ ಪಿಎಂ ಗಂಭೀರ ಕಾಳಜಿ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ವೆಂಟಿಲೇಟರ್​ಗಳ ಇನ್​​ಸ್ಟಲೇಷನ್ ಮತ್ತು ಆಪರೇಷನ್ ಬಗೆಗೆ ಕೂಡಲೇ ಒಂದು ಆಡಿಟ್ ನಡೆಸಬೇಕೆಂದು ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ವೆಂಟಿಲೇಟರ್​ಗಳನ್ನು ಆಪರೇಟ್​ ಮಾಡುವ ಬಗ್ಗೆ ರಿಫ್ರೆಷರ್​ ತರಬೇತಿಯನ್ನು ಆರೋಗ್ಯಸೇವಾ ಕಾರ್ಯಕರ್ತರಿಗೆ ನೀಡಬೇಕು ಎಂದು ಹೇಳಿದ್ದಾರೆ” ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ:ಆಕ್ಸಿಜನ್ ಉಪಕರಣ : ಸ್ವಿಟ್ಜರ್​ಲ್ಯಾಂಡ್​ ಟು ಅಂಡಮಾನ್ ನಿಕೋಬಾರ್​
ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಇತರ ಸೂಚನೆಗಳೆಂದರೆ –
* ಸ್ಥಳೀಯ ಸ್ತರಗಳಲ್ಲಿ ಕಂಟೈನ್​ಮೆಂಟ್​ ಯೋಜನೆಗಳನ್ನು ರೂಪಿಸಬೇಕು.* ಕರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಬೇಕು.* ಮನೆ ಮನೆಗೆ ತೆರಳಿ ಪರೀಕ್ಷೆ ಮತ್ತು ಕಣ್ಗಾವಲು ಒದಗಿಸುವಂತೆ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು.* ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು.(ಏಜೆನ್ಸೀಸ್)
ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

ಕೇರಳ ಲಾಕ್​ಡೌನ್ ವಿಸ್ತರಣೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
