ನವದೆಹಲಿ:ಜಗತ್ತನ್ನೇ ಕಾಡುತ್ತಿರುವ ಕರೊನಾ ವೈರಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಜಂಟಿ ಕಾರ್ಯತಂತ್ರ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (SAARC) ನಾಯಕರು, ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ​ಮೂಲಕ ಚರ್ಚೆ ನಡೆಸಿದರು.
ಈ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ, ಮಾಲ್ಡೀವಿಯನ್​ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್​ ಸೊಲಿಹ್​, ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ, ಭೂತಾನ್​ ಪ್ರಧಾನಿ ಲೊತಯ್ ಶೆರಿಂಗ್, ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ, ಆಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಮತ್ತು ಪಾಕಿಸ್ತಾನ ಪ್ರಧಾನಿಯ ವಿಶೇಷ ಆರೋಗ್ಯ ಸಹಾಯಕ ಜಾಫರ್​ ಮಿರ್ಜಾ ಪಾಲ್ಗೊಂಡಿದ್ದರು.
ಸಾರ್ಕ್​ ಒಕ್ಕೂಟದೊಂದಿಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ದಕ್ಷಿಣ ಏಷ್ಯಾದಲ್ಲಿ ಈವರೆಗೆ 150ಕ್ಕಿಂತಲೂ ಕಡಿಮೆ ಜನರಿಗೆ ಕರೊನಾ ವೈರಸ್ ತಗುಲಿದೆ. ನಾವು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಬೇಕು ಎಂದು ಹೇಳಿದರು.
ಕರೊನಾದೊಂದಿಗೆ ಹೋರಾಡಲು ಸಿದ್ಧರಾಗೋಣ, ಆದರೆ ಯಾರೂ ಭಯ ಪಡುವುದು ಬೇಡ ಎಂಬುದು ನಮ್ಮ ಭಾರತದ ಮಾರ್ಗದರ್ಶನ ಮಂತ್ರವಾಗಿದೆ. ನಮ್ಮ ದೇಶದ ಜನರಲ್ಲಿ ನಾವು ಧೈರ್ಯ ತುಂಬುತ್ತಿದ್ದೇವೆ ಎಂದರು.ಜನವರಿ ಪ್ರಾರಂಭದಿಂದಲೇ ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿದೇಶದಿಂದ ಬರುವವರನ್ನು ಏರ್​ಪೋರ್ಟ್​ನಲ್ಲಿ ಸ್ಕ್ರೀನಿಂಗ್​ ಟೆಸ್ಟ್​ಗೆ ಒಳಪಡಿಸಲಾಗುತ್ತಿದೆ. ದೇಶದೊಳಗಿನ ಮತ್ತು ದೇಶ-ವಿದೇಶಗಳ ನಡುವಿನ ಪ್ರಯಾಣಕ್ಕೆ ಸಂಬಂಧಪಟ್ಟಂತೆ ನಿರ್ಬಂಧಗಳನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.
ಹಂತಹಂತವಾಗಿ ಕ್ರಮ ಕೈಗೊಳ್ಳುವುದರಿಂದ ಜನರು ಗಾಬರಿಯಾಗುವುದು ತಪ್ಪುತ್ತದೆ. ಅದರಲ್ಲೂ ಭಾರತ ದುರ್ಬಲರನ್ನು ವಿಶೇಷವಾಗಿ ಕಾಳಜಿ ಮಾಡುತ್ತಿದೆ. ನಮ್ಮ ವೈದ್ಯಕೀಯ ಸೌಕರ್ಯಗಳು, ನಿಯಂತ್ರಣಾ ಕ್ರಮಗಳನ್ನು ಅವರಿಗೂ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ದೇಶಗಳಲ್ಲಿ ಇರುವ ಅನೇಕರ ಕರೆಗಳಿಗೆ ಸ್ಪಂದಿಸಲಾಗಿದೆ. ಸುಮಾರು 1400 ಜನರನ್ನು ಭಾರತಕ್ಕೆ ಕರೆತರಲಾಗಿದೆ. ಹಾಗೇ ಕರೋನಾ ಪೀಡಿತ ದೇಶಗಳಲ್ಲಿದ್ದ ಹಲವು ವಿದೇಶಿಗರು ಅಲ್ಲಿಂದ ತಮ್ಮ ದೇಶಕ್ಕೆ ತೆರಳಲು ಕೂಡ ಸಹಾಯ ಮಾಡಲಾಗಿದೆ ಎಂದರು.
ಕರೊನಾ ವಿರುದ್ಧ ಹೋರಾಡಲು ಸಾರ್ಕ್ ರಾಷ್ಟ್ರಗಳ ನಾಯಕರು ಜಂಟಿ ಕಾರ್ಯತಂತ್ರ ರೂಪಿಸಬೇಕು ಎಂದು ಪ್ರಧಾನಿ ಮೋದಿ ಶುಕ್ರವಾರ ಪ್ರಸ್ತಾಪ ಮುಂದಿಟ್ಟಿದ್ದರು. ಅದಕ್ಕೆ ಎಲ್ಲ ಸಾರ್ಕ್​ ಒಕ್ಕೂಟದ ಎಲ್ಲ ರಾಷ್ಟ್ರಗಳೂ ಒಪ್ಪಿಗೆ ಸೂಚಿಸಿದ್ದವು. ಅದರ ಅನ್ವಯ ಇಂದು ನಡೆದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪಾಕಿಸ್ತಾನ ಪ್ರಧಾನಿಯನ್ನು ಹೊರತು ಪಡಿಸಿ ಉಳಿದೆಲ್ಲ ರಾಷ್ಟ್ರಗಳ ಪ್ರಧಾನಿಗಳೂ ಪಾಲ್ಗೊಂಡಿದ್ದರು.
ಕರೊನಾ ವೈರಸ್​ ನಿಯಂತ್ರಣ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆಗಳ ವಿಚಾರದಲ್ಲಿ ಸಾರ್ಕ್​ ರಾಷ್ಟ್ರಗಳು ಜಗತ್ತಿಗೇ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಬೇಕು ಎಂದು ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅದಕ್ಕೆ ಉಳಿದ ರಾಷ್ಟ್ರಗಳ ನಾಯಕರೂ ಒಪ್ಪಿಗೆ ನೀಡಿದ್ದಾರೆ. (ಏಜೆನ್ಸೀಸ್​)
‘ಕರೊನಾವನ್ನು ಮೋದಿಯವರು ಬಳಸಿಕೊಳ್ಳುತ್ತಿದ್ದಾರೆ’ ಎಂದ ಕಾಂಗ್ರೆಸ್​ಗೆ ‘ನಾವು ಇಟಲಿಯಿಂದ ಬಂದ ವೈರಸ್​ ವಿರುದ್ಧ ಹೋರಾಡ್ತಿದ್ದೇವೆ’ ಎಂದು ತಿರುಗೇಟು ನೀಡಿದ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seventeen =
Remember me
