ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲೆ ಇರುವ ಪ್ರೀತಿ ಎಲ್ಲರಿಗೂ ಗೊತ್ತೇ ಇದೆ. ಮಕ್ಕಳನ್ನು ಕಂಡಲ್ಲೆಲ್ಲ ಅವರೊಂದಿಗೆ ತಾವು ಚಿಕ್ಕ ಮುಕ್ಕಳಾಗಿ ಮೋಜು ಮಾಡುತ್ತಾರೆ. ಇಬ್ಬರು ಮಕ್ಕಳ ಜತೆ ಮೋದಿ ಆಡುತ್ತಿರುವ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಸಮಾಗಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಕ್ಕಳನ್ನು ಭೇಟಿ ಮಾಡಿದ್ದರು. ಮಕ್ಕಳೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದು ಅದರಲ್ಲಿ ಮುಗ್ಧ ಮಕ್ಕಳೊಂದಿಗೆ ಕಳೆದ ಅದ್ಭುತ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಅವರ ಶಕ್ತಿ ಮತ್ತು ಉತ್ಸಾಹವು ಮನಸ್ಸಲ್ಲಿ ಉತ್ಸಾಹವನ್ನು ತುಂಬುತ್ತದೆ ಎಂದು ಬರೆದಿದ್ದಾರೆ.
बच्चों के साथ बच्चे बन जाते हैं मोदी जी…pic.twitter.com/UUOXT5oouX
— BJP (@BJP4India)November 16, 2023

ಈ ವೀಡಿಯೊದಲ್ಲಿ, ಒಬ್ಬ ಹುಡುಗಿ ಮತ್ತು ಅವಳ ಕಿರಿಯ ಸಹೋದರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದಾರೆ. ಈ ಮಕ್ಕಳು ತಮ್ಮ ಪೋಷಕರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಮೊದಮೊದಲು ಮಕ್ಕಳಿಗೆ ತುಂಬಾ ಪ್ರೀತಿ, ಆಶೀರ್ವಾದ ನೀಡಿದ ಮೋದಿ.. ನಂತರ ಅವರೊಂದಿಗೆ ಆಟವಾಡಲು ಆರಂಭಿಸಿದರು.
ಈ ಆಟದಲ್ಲಿ 1 ರೂಪಾಯಿ ನಾಣ್ಯ ಇರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅನೇಕ ಜನರು ತಮ್ಮ ಬಾಲ್ಯದಲ್ಲಿ 1 ರೂಪಾಯಿ ನಾಣ್ಯದೊಂದಿಗೆ ಈ ಆಟವನ್ನು ಆಡುತ್ತಿದ್ದರು. ಈ ಮಕ್ಕಳೊಂದಿಗೆ ಮೋದಿ ಹೇಗೆ ಆಟವಾಡುತ್ತಾ ನಗುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.
ಹವಾಮಾನ ಮುನ್ಸೂಚನೆ: AUS vs SA ವಿಶ್ವಕಪ್ ಸೆಮಿಫೈನಲ್‌ಗೆ ಮಳೆ ಅಡ್ಡಿಯಾಗಲಿದೆಯೇ?

Sign in to your account
Please enter an answer in digits:15 − eleven =
Remember me
