ನವದೆಹಲಿ:ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸುವ ದಿಸೆಯಲ್ಲಿ ಸ್ಟಾರ್ಟಪ್​ಗಳು ಮತ್ತು ತಂತ್ರಜ್ಞರ ಸಮೂಹಕ್ಕೆ ನೆರವಾಗುವ ‘ಆತ್ಮನಿರ್ಭರ ಭಾರತ್ ಆಪ್ ಆವಿಷ್ಕಾರದ ಸವಾಲು’ (ಇನ್ನೊವೇಶನ್ ಚಾಲೆಂಜ್) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.
ಸ್ಟಾರ್ಟಪ್ ಹಾಗೂ ಟೆಕ್ಕಿಗಳಿಗೆ ನೆರವಾಗಲು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಟಲ್ ಆವಿಷ್ಕಾರ್ ಮಿಷನ್​ನೊಂದಿಗೆ ಸೇರಿ ಆತ್ಮನಿರ್ಭರ ಭಾರತ್ ಆವಿಷ್ಕಾರ ಯೋಜನೆ ಜಾರಿಗೆ ತಂದಿದೆ. ಈ ಪ್ರಕ್ರಿಯೆ ಎರಡು ರೀತಿಯಲ್ಲಿ ನಡೆಯಲಿದೆ. ಮೊದಲನೆಯದಾಗಿ, ಈಗಿರುವ ದೇಶೀಯ ಆಪ್​ಗಳಿಗೆ ಉತ್ತೇಜನ ನೀಡುವುದು (ಟ್ರಾ್ಯಕ್-01). ಎರಡನೆಯದಾಗಿ ಹೊಸ ಆಪ್​ಗಳ ಅಭಿವೃಧಿಗೆ ಪ್ರೋತ್ಸಾಹ ನೀಡುವುದು (ಟ್ರಾ್ಯಕ್-02) .
ಇ-ಕಲಿಕೆ, ವರ್ಕ್ ಫ್ರಂ ಹೋಂ, ಆಟಗಳು, ವ್ಯವಹಾರ, ಮನರಂಜನೆ, ಕಚೇರಿ ವ್ಯವಸ್ಥೆಗಳು ಮತ್ತು ಸಾಮಾಜಿಕ ಜಾಲಗಳ ವಿಭಾಗದಲ್ಲಿ ಹಾಲಿ ಇರುವ ಆಪ್​ಗಳು ಮತ್ತು ವೇದಿಕೆಗಳ ಪ್ರವರ್ತನೆಗಾಗಿ ಸರ್ಕಾರ ಆಸಕ್ತರಿಗೆ ಸಂಪೂರ್ಣ ನೆರವು ನೀಡಲಿದೆ.
ಟ್ರಾ್ಯಕ್-01 ಉತ್ತಮ ಆಪ್​ಗಳನ್ನು ಗುರುತಿಸಲು ಒಂದು ಕಾರ್ಯಯೋಜನೆಯಂತೆ ಕಾರ್ಯ ನಿರ್ವಹಿಸಲಿದ್ದು ಒಂದು ತಿಂಗಳೊಳಗೆ ಅದನ್ನು ಪೂರ್ಣಗೊಳಿಸಬೇಕಿದೆ. ಹೊಸ ಆಪ್​ಗಳು ಮತ್ತು ವೇದಿಕೆಗಳನ್ನು ರೂಪಿಸಲು ಟ್ರಾ್ಯಕ್-02 ಕೆಲಸ ಮಾಡಲಿದೆ. ಹೊಸ ಚಿಂತನೆ ರೂಪಿಸಲು, ಅವುಗಳ ಮಾದರಿ ರೂಪಿಸಲು ಹಾಗೂ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈ ವಿಭಾಗದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ.
ಅಸ್ತಿತ್ವದಲ್ಲಿರುವ ಆಪ್​ಗಳು ತಮ್ಮ ಗುರಿ ಸಾಧಿಸುವಂತೆ ಮಾಡುವುದು, ಅವುಗಳಿಗೆ ಸ್ಪಷ್ಟತೆ ನೀಡುವುದು ಈ ಸವಾಲಿನ ಉದ್ದೇಶವಾಗಿದೆ. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಗತ್ಯವಾದ ಉತ್ಪನ್ನಗಳ ಸೃಷ್ಟಿಗೆ ಇಡೀ ಜೀವನ ಪರ್ಯಂತ ಪ್ರೋತ್ಸಾಹ ನೀಡುವುದು ನಮ್ಮ ಗುರಿಯಾಗಿದೆ ಎಂದು ಲಿಂಕ್ಡ್​ಇನ್ ಪೋಸ್ಟ್ ನಲ್ಲಿ ಪ್ರಧಾನಿ ವಿವರಿಸಿದ್ದಾರೆ. ಈ ರೀತಿ ಕಾರ್ಯ ನಿರ್ವಹಿಸಬಲ್ಲ ಉತ್ಪನ್ನ ಹೊಂದಿರುವಂಥವರು ಅಥವಾ ಅಂಥ ಉತ್ಪನ್ನ ಸೃಷ್ಟಿಸಬಲ್ಲ ದೂರದೃಷ್ಟಿ ಮತ್ತು ನೈಪುಣ್ಯ ಇದೆಯೆಂಬ ಆತ್ಮವಿಶ್ವಾಸ ಇರುವಂಥವರು ಈ ಸವಾಲನ್ನು ಸ್ವೀಕರಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ. ತಂತ್ರಜ್ಞ ಸಮುದಾಯದ ಎಲ್ಲ ಗೆಳೆಯರು ಈ ಸವಾಲನ್ನು ಸ್ವೀಕರಿಸಿ ಅದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. ಆತ್ಮನಿರ್ಭರ್ ಆಪ್ ಪರಿಸರ ನಿರ್ವಿುಸಲು ನೆರವಾಗುವಂತೆ ಮನವಿ ಮಾಡಿದ್ದಾರೆ.
ಬಿಹಾರ್​ ಸಿಎಂಗೆ ಕರೊನಾ ಭೀತಿ; ಮುಖ್ಯಮಂತ್ರಿಯ ನಾಲ್ವರು ಕಾರ್ಯದರ್ಶಿಗಳಲ್ಲಿ ಸೋಂಕು ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
