ಲಂಡನ್​: ಬ್ರಿಟನ್ ಆತಿಥ್ಯದಲ್ಲಿ ನಡೆದ ಗ್ಲೋಬಲ್ ವ್ಯಾಕ್ಸಿನ್ ಸಮಿಟ್​ನಲ್ಲಿ ವ್ಯಾಕ್ಸಿನ್ಸ್ ಅಲಯನ್ಸ್ “ಗವಿ”ಯ ಖಾತೆಗೆ 15 ದಶಲಕ್ಷ ಡಾಲರ್​ ಅನ್ನು ಭಾರತದ ಕೊಡುಗೆಯಾಗಿ ನೀಡುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾನ ಮಾಡಿದ್ದಾರೆ.
ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…
ಕೋವಿಡ್ 19 ಸೋಂಕಿನ ಕಾರಣಕ್ಕೆ ವರ್ಚುವಲ್​ ಶೃಂಗವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್​ ದಿಕ್ಸೂಚಿ ಭಾಷಣ ಮಾಡಿದ್ದು, ಲಸಿಕೆ ಅಭಿವೃದ್ಧಿಗೆ ಕೈ ಜೋಡಿಸಿ ಹಣಕಾಸಿನ ನೆರವು ಒದಗಿಸಬೇಕಾದ ಅಗತ್ಯವನ್ನು ಮನವರಿಕೆಮಾಡಿಕೊಟ್ಟರು. ಈ ಕಾರ್ಯದಲ್ಲಿ ಎಲ್ಲ ದೇಶಗಳೂ ಕೈ ಜೋಡಿಸಿದರೆ ಜಗತ್ತನ್ನು ರಕ್ಷಿಸುವ ಮತ್ತು ಲಕ್ಷಾಂತರ ಜನರ ಪ್ರಾಣ ಉಳಿಸುವ ಮಹತ್ಕಾರ್ಯದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ:ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ
“ಗವಿ”ಗೆ ನಮ್ಮ ಬೆಂಬಲ ಕೇವಲ ಹಣಕಾಸಿನ ವಿಚಾರದಲ್ಲಷ್ಟೆ ಅಲ್ಲ. ಭಾರತದಿಂದಲೇ ಭಾರಿ ಬೇಡಿಕೆ ಇರುವ ಕಾರಣ ಲಸಿಕೆಗಳ ಜಾಗತಿಕ ದರವೂ ಇಳಿಯಲಿದೆ. ಇಂದಿನ ಸವಾಲಿನ ಸನ್ನಿವೇಶದಲ್ಲಿ ಭಾರತವು ಜಗತ್ತಿನೊಂದಿಗೆ ಐಕ್ಯಮತ ಪ್ರದರ್ಶಿಸಿದ್ದು, ಒಟ್ಟಾಗಿ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ಔಷಧ ಮತ್ತು ಲಸಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಸಾಮರ್ಥ್ಯ ಈಗಾಗಲೇ ಸಾಬೀತಾಗಿರುವಂಥದ್ದು. ನಮ್ಮಲ್ಲಿರುವ ಸಂಶೋಧನಾ ಪ್ರತಿಭಾ ಕೌಶಲವನ್ನು ಜಾಗತಿಕ ಒಳಿತಿಗಾಗಿ ಬಳಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಒಬ್ಬನಿಗೆ ಸೋಂಕು, 20 ಸಾವಿರ ಜನರಿಗೆ ಆತಂಕ…!
ಈ ಶೃಂಗದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಸೇರಿ 35 ದೇಶಗಳ ಪ್ರಮುಖರು ಪಾಲ್ಗೊಂಡಿದ್ದರು. 2025ರ ವೇಳೆಗೆ ಜಗತ್ತಿನ ಬಡರಾಷ್ಟ್ರಗಳಲ್ಲಿನ 300 ದಶಲಕ್ಷ ಮಕ್ಕಳ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ 7.4 ದಶಲಕ್ಷ ಡಾಲರ್ ಫಂಡ್​ ಒಟ್ಟುಗೂಡಿಸುವ ಪ್ರಯತ್ನ ಈ ಶೃಂಗದ ಮೂಲಕ ನಡೆದಿದೆ. (ಏಜೆನ್ಸೀಸ್​)
ಮತ್ತೆ ಕಲಬುರಗಿಯನ್ನು ಹಿಂದಿಕ್ಕಿದ ಉಡುಪಿ: ರಾಜ್ಯದಲ್ಲಿಂದು 257 ಹೊಸ ಕೋವಿಡ್ 19 ಪ್ರಕರಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
