ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್​ 27ರಂದು) ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದ 104ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಚಂದ್ರಯಾನ-3 ಯಶಸ್ಸು ಸೇರಿದಂತೆ ಹಲವು ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಬೆಂಗಳೂರು ಮೂಲದ ಧನ್​ಪಾಲ್​ ಎಂಬುವವರನ್ನು ನೆನೆದಿರುವುದು ವಿಶೇಷ.
ಬೆಂಗಳೂರಿನ ಪರಂಪರೆಯ ಅಂಶಗಳನ್ನು ಮರುಶೋಧಿಸುವಲ್ಲಿ ಉತ್ಸಾಹ ಹೊಂದಿರುವ ಧನಪಾಲ್ ಅವರ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು ಬೇರೆಯವರು ಸಹ ಅವರ ನಗರ ಮತ್ತು ಪಟ್ಟಣಗಳಲ್ಲಿ ಇದೇ ರೀತಿ ಮಾಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಮೊದಲಿಗೆ ಧನ್​ಪಾಲ್​​ ಅವರ ಹೆಸರು ಕೇಳಿದಾಕ್ಷಣ ಯಾರಿವರು. ಪ್ರಧಾನಿ ಮೋದಿ ಹೊಗಳುವಂತ ಸಾಧನೆ ಇವರೇನು ಮಾಡಿದ್ದಾರೆ ಎಂದು ಕುತೂಹಲ ಮೂಡುವುದು ಸಹಜ. ಮೋದಿ ಹೊಗಳುವಷ್ಟು ಮಾಡಿದ ಸಾಧನೆ ಏನು ಎನ್ನುವುದನ್ನು ನೋಡುವುದಾದರೆ, ಬಿಎಂಟಿಸಿಯ ಬೆಂಗಳೂರು ದರ್ಶಿನಿಯ ಚಾಲಕ ಮತ್ತು ಪ್ರವಾಸಿ ಮಾರ್ಗದರ್ಶಿ ಆಗಿ ಧನ್​ಪಾಲ್​ ಕೆಲಸ ಮಾಡುತ್ತಿದ್ದರು. ನಗರದ ವಿವಿಧ ಸ್ಥಳಗಳನ್ನು ಒಳಗೊಂಡ ಪ್ರವಾಸಿ ಬಸ್ ಚಾಲನೆ ಅವರ ಕೆಲಸವಾಗಿತ್ತು
ಇತಿಹಾಸದ ಮೇಲಿನ ಅವರ ಒಲವು ಎಷ್ಟಿತ್ತು ಎಂದರೆ ತಮ್ಮ ಕೆಲಸದ ಅವಧಿ ಮುಗಿದ ನಂತರ ಬೆಂಗಳೂರಿನ ಪರಂಪರೆಯನ್ನು ಅನ್ವೇಷಿಸಲು ಅವರು ಸಮಯವನ್ನು ಮೀಸಲಿಡುತ್ತಿದ್ದರು. ತಮ್ಮ ಮಾರ್ಗದರ್ಶಕರ ಸಹಾಯದೊಂದಿಗೆ ಇಲ್ಲಿಯವರೆಗೂ ವಿವಿಧ ಕಾಲಘಟ್ಟಕ್ಕೆ ಸೇರಿದ 100ಕ್ಕೂ ಹೆಚ್ಚು ಶಿಲಾಶಾಸನಗಳನ್ನು ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ ಪರಂಪರೆಯ ಅಂಶಗಳನ್ನು ಮರುಶೋಧಿಸುವಲ್ಲಿ ಉತ್ಸಾಹ ಹೊಂದಿರುವ ಬೆಂಗಳೂರಿನ ಶ್ರೀ ಧನಪಾಲ್ ಅವರ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು ಬೇರೆಯವರು ಸಹ ಅವರ ನಗರ ಮತ್ತು ಪಟ್ಟಣಗಳಲ್ಲಿ ಇದೇ ರೀತಿ ಮಾಡುವಂತೆ ನಾನು ಒತ್ತಾಯಿಸುತ್ತೇನೆ.pic.twitter.com/H4QnfctpXB
ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ನಡೆಸಲಾಗುವ ಎಪಿಗ್ರಫಿ ತರಗತಿಗಳಲ್ಲಿ ಭಾಗವಹಿಸಿ ಡಿಪ್ಲೋಮ ಪದವಿ ಪಡೆದಿದ್ದಾರೆ. ಕೆಲ ತಿಂಗಳುಗಳ ಹಿಂದೆ ಇವರು ಸೇವೆಯಿಂದ ನಿವೃತ್ತರಾಗಿದ್ದು, ಬೆಂಗಳೂರು ಇತಿಹಾಸ ಅನ್ವೇಷನೆ ಹಾಗೂ ಸಂಶೋಧನೆಗೆ ಸಂಪೂರ್ಣ ಸಮಯವನ್ನು ಮೀಸಲಿಟ್ಟಿರುವುದು ಮತ್ತಷ್ಟು ವಿಶೇಷ.
ಇದನ್ನೂ ಓದಿ:ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕೆ ದಲಿತ ವ್ಯಕ್ತಿ ಹತ್ಯೆ; 8 ಆರೋಪಿಗಳು ಅರೆಸ್ಟ್​
ಇತ್ತೀಚಿಗೆ ಧನ್​ಪಾಲ್​ ಅವರು ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರವಾಸಿಗರೊಬ್ಬರು ಸ್ಯಾಂಕಿ ಕೆರೆಗೆ ಹೆಸರು ಬಂದ ಬಗೆಯನ್ನು ಕೇಳಿದರು. ಆ ಕ್ಷಣ ನಾನು ಉತ್ತರಿಸಲು ಆಗದೇ ನಮ್ಮ ಸುತ್ತಲಿನ ಇತಿಹಾಸ ತಿಳಿಯದೆ ನನಗೆ ಕೊಂಚ ಮುಜುಗರವಾಯಿತು. ಅದು ಕೆರೆಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಲು ಪ್ರಚೋದಿಸಿತು.
ನಂತರ ಇದರ ಕುರಿತು ಸಂಶೋಧಿಸಿ ಕೆರೆಗೆ ಬ್ರಿಟಿಷ್​ ಇಂಜಿನಿಯರ್ ರಿಚರ್ಡ್ ಹೈರಾಮ್ ಸ್ಯಾಂಕಿಯ ಹೆಸರಿಡಲಾಗಿದೆ ಎಂದು ತಿಳಿದುಕೊಂಡೆ. ಇತಿಹಾಸದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇಂದು ಬೆಂಗಳೂರಿನ ಪ್ರತಿಯೊಂದು ಸ್ಥಳದ ಹಿಂದಿನ ಕಥೆಯನ್ನು ತಿಳಿದಿದ್ದೇನೆ ಎಂದು ಸಂದರ್ಶನದಲ್ಲಿ ಸ್ವತಃ ಧನಪಾಲ್ ಅವರೇ ಹೇಳಿಕೊಂಡಿದ್ದರು.
ಬೆಂಗಳೂರಿನ ಪರಂಪರೆಯ ಅಂಶಗಳನ್ನು ಮರುಶೋಧಿಸುವಲ್ಲಿ ಉತ್ಸಾಹ ಹೊಂದಿರುವ ಧನಪಾಲ್ ಅವರ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು ಬೇರೆಯವರು ಸಹ ಅವರ ನಗರ ಮತ್ತು ಪಟ್ಟಣಗಳಲ್ಲಿ ಇದೇ ರೀತಿ ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಪ್ರಯಾಣಿಕರೊಬ್ಬರು ಸ್ಯಾಂಕಿ ಕೆರೆಯ ಕುರಿತು ಕೇಳಿದ ಪ್ರಶ್ನೆಗೆ ಧನ್​ಪಾಲ್​ ಉತ್ತರಿಸಲು ಆ್ಏ ತಮ್ಮ ಬಗ್ಗೆಯೇ ತಾವು ಬೇಜಾರು ಮಾಡಿಕೊಂಡು ಕಲಿಕೆ ಶುರು ಮಾಡಿದರು.
ಎಪಿಗ್ರಫಿಯಲ್ಲಿ ಡಿಪ್ಲೋಮಾ ಮಾಡಿ ಈಗ ಸೇವೆಯಿಂದ ರಿಟೈರ್​ ಆಗಿದ್ದರೂ ಸಹ ಬೆಂಗಳೂರು ಇತಿಹಾಸದ ಮೇಲಿನ ತಮ್ಮ ಅಭಿರುಚಿ ಒಂದು ಚುರು ಕೂಡ ಕಡಿಮೆಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದ 104ನೇ ಸಂಚಿಕೆಯಲ್ಲಿ ಬೆಂಗಳೂರು ಮೂಲದ ಧನ್​ಪಾಲ್​​​ ಅವರನ್ನು ಹಾಡಿಹೊಗಳಿದ್ದಾರೆ.
Meet Bengaluru's Dhanapal Ji, whose passion for learning about heritage is commendable.#MannKiBaatpic.twitter.com/JdQruF1B6W
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
