ನವದೆಹಲಿ:ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ 98ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಸೇರಿದಂತೆ ಪ್ರಮುಖ ಗಣ್ಯರು ವಾಜಪೇಯಿ ಅವರಿಗೆ ಭಾನುವಾರ (ಡಿ.25) ಗೌರವ ನಮನ ಸಲ್ಲಿಸಿದರು.
Delhi | President Droupadi Murmu, Vice-President Jagdeep Dhankhar and Prime Minister Narendra Modi pay floral tribute at ‘Sadaiv Atal’ on former PM Atal Bihari Vajpayee's birth anniversary.pic.twitter.com/sIpjzeUmNL
— ANI (@ANI)December 25, 2022

ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದ ಬಳಿ ನಿರ್ಮಾಣ ಮಾಡಲಾಗಿರುವ ಸದೈವ್​ ಅಟಲ್​ ಸ್ಮಾರಕಕ್ಕೆ ತೆರಳಿದ ಗಣ್ಯರು ವಾಜಪೇಯಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಗೃಹ ಸಚಿವ ಅಮಿತ್​ ಷಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ಹರ್ದಿಪ್​ ಸಿಂಗ್​ ಪುರಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಅಟಲ್ ಜಿ ಅವರ ಜಯಂತಿಯಂದು ಅವರಿಗೆ ನಮನಗಳು. ಭಾರತಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವ ಮತ್ತು ದೃಷ್ಟಿ, ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ. ಅವರ ಜೀವನದ ಕಿರುನೋಟದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
Tributes to Atal Ji on his Jayanti. His contribution to India is indelible. His leadership and vision motivate millions of people.pic.twitter.com/tDYNKiGXxj
— Narendra Modi (@narendramodi)December 25, 2022

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರು 2018 ಆಗಸ್ಟ್​ 16ರಂದು ದೆಹಲಿಯಲ್ಲಿ ಕೊನೆಯುಸಿರೆಳೆದರು. ಸಕಲ ಗೌರವಗಳೊಂದಿಗೆ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಲ್ಲದೆ, ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮವನ್ನು ಬಿಡಲಾಯಿತು.(ಏಜೆನ್ಸೀಸ್​)
ಪತ್ನಿ ಜತೆ ಡಿವೋರ್ಸ್​ ಪಡೆದುಕೊಂಡ ದಿನವೇ ನನಗೆ ಹೊಸ ಜನ್ಮ! ಲೈಂಗಿಕ ಸುಖವಿಲ್ಲ ಎಂದಿದ್ದ ಸಂಸದನ ಅಳಲು

ಸುರಂಗ ಕೊರೆದು SBI ಬ್ಯಾಂಕ್​ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಖದೀಮರು!

ಕಾಂಗ್ರೆಸ್ ಮುಖಂಡ ಅಲ್ತಾಫ್​ ಖಾನ್ ಹತ್ಯೆಗೆ ಮನೆ ಮುಂದೆ ಹೊಂಚು ಹಾಕಿದ್ದ ಮೂವರು ಪೊಲೀಸರ ವಶ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
