ನವದೆಹಲಿ:ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿರುವ ಕರೊನಾ ವೈರಸ್​ ವಿರುದ್ಧ ಹೋರಾಡಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಇಂದು ನಡೆದ ಸಾರ್ಕ್​ ರಾಷ್ಟ್ರಗಳ ನಾಯಕರು, ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾದವು.
ಎಲ್ಲ ರಾಷ್ಟ್ರಗಳ ನಾಯಕರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬದಲಿಗೆ ಅವರ ವಿಶೇಷ ಆರೋಗ್ಯ ಸಹಾಯಕರು ಪಾಲ್ಗೊಂಡಿದ್ದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ವಿಚಾರವೊಂದನ್ನು ಪ್ರಸ್ತಾಪಿಸಿದರು. Covid19 (ಕರೊನಾ ವೈರಸ್​) ತುರ್ತು ನಿಧಿ ಸ್ಥಾಪನೆಯಾಗಬೇಕು. ನಿಧಿ ಸ್ಥಾಪನೆಗೆ ಸಾರ್ಕ್​ನ ಎಲ್ಲ ರಾಷ್ಟ್ರಗಳ ಸಹಮತವೂ ಇದ್ದರೆ ಭಾರತ 10 ಮಿಲಿಯನ್​ ಡಾಲರ್​ಗಳನ್ನು ಇದಕ್ಕೆ ನೀಡಲಿದೆ ಎಂದು ಭರವಸೆ ನೀಡಿದರು.
ಕರೊನಾ ಚಿಕಿತ್ಸೆ, ಮುಂಜಾಗ್ರತೆಗೆ ಸಂಬಂಧಪಟ್ಟಂತೆ ಸಾರ್ಕ್​ ರಾಷ್ಟ್ರಗಳಲ್ಲಿ ವೈದ್ಯಕೀಯ ತುರ್ತು ಪ್ರತಿಕ್ರಿಯಾ ತಂಡಕ್ಕೆ ಸೂಕ್ತ ತರಬೇತಿ ನೀಡಬೇಕು. ಸಾರ್ಕ್​ ರಾಷ್ಟ್ರಗಳಲ್ಲಿ ಕರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ಭಾರತೀಯ ಕ್ಷಿಪ್ರ ಪ್ರತಿಕ್ರಿಯಾ ತಂಡದ ವೈದ್ಯರು, ತಜ್ಞರೂ ಲಭ್ಯರಿರುತ್ತಾರೆ. ಅಗತ್ಯ ಬಿದ್ದರೆ ಅವರನ್ನು ಕಳಿಸಿಕೊಡಲಾಗುವುದು. ನಾವೆಲ್ಲ ನೆರೆಹೊರೆಯ ರಾಷ್ಟ್ರಗಳು ಒಗ್ಗಟ್ಟಾಗಿ ಕರೊನಾ ವಿರುದ್ಧ ಹೋರಾಡಿ ಗೆಲ್ಲಬೇಕು. ಜಗತ್ತಿಗೇ ಮಾದರಿಯಾಗಬೇಕು.
ಸಾರ್ಕ್​ ರಾಷ್ಟ್ರಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪಾಲ್ಗೊಂಡ ಪ್ರಮುಖರು ಮಾತನಾಡಿದ ವಿಚಾರಗಳಲ್ಲಿ ಹಲವು ಪ್ರಮುಖ ಅಂಶಗಳನ್ನು ನಮ್ಮ ತಂಡ ಟಿಪ್ಪಣಿ ಮಾಡಿಟ್ಟುಕೊಂಡಿದೆ. ಹಾಗೇ ಔಷಧಿ ಮತ್ತು ವೈದ್ಯಕೀಯ ಸಾಧನಗಳಿಗೆ ಸಂಬಂಧಪಟ್ಟಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ. ಖಂಡಿತ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಾರ್ಕ್ ನಾಯಕರ ವಿಶೇಷ ಸಭೆಯಲ್ಲೂ ಪಾಕ್ ಕಾಶ್ಮೀರ ಕ್ಯಾತೆಯನ್ನು ಎತ್ತಿತು. ಕಾಶ್ಮೀರದಲ್ಲಿ (ಭಾರತದ ಜಮ್ಮು- ಕಾಶ್ಮೀರ) 19 ಕರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ವೈರಸ್​ಗೆ ಕಡಿವಾಣ ಹಾಕಬೇಕಾದರೆ ಜಮ್ಮು- ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ತೆಗೆಯಬೇಕು ಎಂದು ಪಾಕ್ ಪರ ಹಾಜರಾಗಿದ್ದ ಸಚಿವ ಜಾಫರ್ ಮಿರ್ಜಾ ಹೇಳಿದರು. ಸಾರ್ಕ್ ದೇಶಗಳ ನಾಯಕರ ವಿಡಿಯೋ ಕಾನ್ಪರೆನ್ಸ್​ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಬದಲಿಗೆ ಮಿರ್ಜಾರನ್ನು ನಿಯೋಜಿಸಿದ್ದರು.
ಕರೊನಾ ಬಗ್ಗೆ ಜಂಟಿ ಕಾರ್ಯತಂತ್ರ ರೂಪಿಸಲು ಪ್ರಧಾನಿ ಮೋದಿ ಜಿ20ಯ ಎಲ್ಲ ನಾಯಕರ ನಡುವೆ ಸಂಪರ್ಕ ಸಂಘಟಿಸಲು ಉತ್ಸುಕರಾಗಲಿ. ಅದು ತುಂಬ ಶ್ಲಾಘನೀಯ ಉಪಕ್ರಮ ಮತ್ತು ಇದಕ್ಕೆ ನಮ್ಮ ಬೆಂಬಲ ಇದೆ.
| ಸ್ಕಾಟ್ ಮಾರಿಸನ್ಆಸ್ಟ್ರೇಲಿಯಾ ಪ್ರಧಾನಿ
ಕರೊನಾ ವಿರುದ್ಧ ಹೋರಾಟಕ್ಕೆ ಒಗ್ಗಟ್ಟಾದ ಸಾರ್ಕ್​ ; ಪಾಕ್​ ಪ್ರಧಾನಿ ಹೊರತು ಪಡಿಸಿ ಉಳಿದೆಲ್ಲ ರಾಷ್ಟ್ರಗಳ ನಾಯಕರೂ ಭಾಗಿ…

ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
