ನವದೆಹಲಿ:ಇತ್ತೀಚೆಗೆ ಭಾರತದಲ್ಲಿನ ಜಪಾನ್ ರಾಯಭಾರಿ, “ನನ್ನ ಹೆಂಡತಿ ನನ್ನನ್ನು ಸೋಲಿಸಿದ್ದಾಳೆ” ಎಂದು ಬರೆದು ಟ್ವೀಟ್ಟರ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದು ಭಾರತದ ಸ್ಟ್ರೀಟ್ ಫುಡ್ಗೆ ಸಂಬಂಧಿಸಿದ ವಿಡಿಯೋದಲ್ಲಿ ಸುಜುಕಿ, “ನನ್ನ ಹೆಂಡತಿ ನನ್ನನ್ನು ಸೋಲಿಸಿದಳು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:14 ನ್ಯಾಯಮೂರ್ತಿಗಳು ಸೇರಿದಂತೆ 270 ನಿವೃತ್ತ ಹಿರಿಯ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ!
ಭಾರತದಲ್ಲಿನ ಜಪಾನ್ ರಾಯಭಾರಿ ಸುಜುಕಿ, ಪುಣೆಯಲ್ಲಿ ಮಹಾರಾಷ್ಟ್ರ ಶೈಲಿಯ ಸ್ಟ್ರೀಟ್ ಫುಡ್ ಅನ್ನು ಸವಿಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುಣೆಗೆ ಬಂದಿದ್ದ ರಾಯಭಾರಿ ವಡಾ ಪಾವ್ ಮತ್ತು ಮಿಸಾಲ್ ಪಾವ್ ಅನ್ನು ಪ್ರಯತ್ನಿಸಿದರು. ಅವರಿಗೆ ಭಾರತೀಯ ತಿನಿಸುಗಳ ಬಗ್ಗೆ ಇರುವ ಒಂದು ಸಣ್ಣ ದೂರು ಏನೆಂದರೆ, ಇಲ್ಲಿನ ಆಹಾರ ಖಾರವಂತೆ!
This is one contest you may not mind losing, Mr. Ambassador. Good to see you enjoying India’s culinary diversity and also presenting it in such an innovative manner. Keep the videos coming!https://t.co/TSwXqH1BYJ
— Narendra Modi (@narendramodi)June 11, 2023

ಇದನ್ನೂ ಓದಿ:ದೇವರ ಜತೆ ಮೋದಿಯನ್ನು ಕೂರಿಸಿದ್ರೆ… ಅಮೆರಿಕದಲ್ಲಿ ಪ್ರಧಾನಿ ವಿರುದ್ಧ ರಾಹುಲ್​ ಗಾಂಧಿ ಟೀಕಾ ಪ್ರಹಾರ
ಈ ವಿಚಾರವಾಗಿ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು “ರಾಯಭಾರಿ ಅವರೇ, ಈ ಒಂದು ವಿಚಾರದಲ್ಲಿ ನೀವು ಸೋಲಲು ಹಿಂಜರಿಯುವುದಿಲ್ಲ. ನೀವು ಭಾರತದ ಆಹಾರ ಪದ್ಧತಿಯನ್ನು ಆಸ್ವಾದಿಸುತ್ತಿರುವುದು ಖುಷಿ ತರುತ್ತಿದ್ದು ನಿಮ್ಮ ಅನುಭವವನ್ನು ನವೀನ ಮಾದರಿಯಲ್ಲಿ ಹಂಚಿಕೊಳ್ಳುತ್ತಿದ್ದೀರಿ. ಇನ್ನಷ್ಟು ವಿಡಿಯೋಗಳು ಬರುತ್ತಿರಲಿ” ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − eight =
Remember me
