ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್​ನಲ್ಲಿ ಗುರುವಾರ ಬೆಳಗ್ಗೆ ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆದರು. ಮಾರ್ಚ್​ 1ರಂದು ಮೊದಲ ಡೋಸ್​ ಪಡೆದಿದ್ದ ಮೋದಿ ಅವರು 1 ತಿಂಗಳ ಬಳಿಕ ಎರಡನೇ ಡೋಸ್​ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇಂದು ಏಮ್ಸ್​ನಲ್ಲಿ ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆಯಲಾಯಿತು. ವೈರಸ್ ಅನ್ನು ಸೋಲಿಸಲು ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಲಸಿಕೆಯು ಒಂದಾಗಿದೆ. ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ. http://CoWin.gov.in ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.
Got my second dose of the COVID-19 vaccine at AIIMS today.
Vaccination is among the few ways we have, to defeat the virus.
If you are eligible for the vaccine, get your shot soon. Register onhttps://t.co/hXdLpmaYSP.pic.twitter.com/XZzv6ULdan
— Narendra Modi (@narendramodi)April 8, 2021

ಪುದುಚೇರಿಯ ಪಿ. ನಿವೇದ ಮತ್ತು ಪಂಜಾಬ್​ನ ನಿಶಾ ಶರ್ಮಾ ಎಂಬ ಇಬ್ಬರು ನರ್ಸ್​ಗಳು ಪ್ರಧಾನಿ ಮೋದಿ ಅವರಿಗೆ ಕರೊನಾ ಲಸಿಕೆಯನ್ನು ಹಾಕಿದರು.
ಇದನ್ನೂ ಓದಿರಿ:ಪ್ರೀತಿಸಿ ಮದ್ವೆಯಾದ 5 ತಿಂಗಳಿಗೆ ಮೂರು ತಿಂಗಳ ಗರ್ಭಿಣಿ ದುರಂತ ಸಾವು: ಪ್ರೇಮ ವಿವಾಹವೇ ಮುಳುವಾಯ್ತಾ?
ಪ್ರಧಾನಿಗೆ ಲಸಿಕೆ ನೀಡಿದ ಅನುಭವ ಹಂಚಿಕೊಂಡ ನಿಶಾ ಶರ್ಮಾ, ನಾನಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಕೋವಾಕ್ಸಿನ್ ಎರಡನೇ ಡೋಸ್​ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿಯಾಗಿದ್ದು ಮತ್ತು ಅವರಿಗೆ ಲಸಿಕೆ ಹಾಕಿದ್ದು ನನಗೆ ಸ್ಮರಣೀಯ ಕ್ಷಣವಾಗಿದೆ ಎಂದಿದ್ದಾರೆ.
ಮಾರ್ಚ್​ 1ರಂದು ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಏಮ್ಸ್​ನಲ್ಲಿ ನನ್ನ ಮೊದಲ ಕರೊನಾ ಲಸಿಕೆ ಡೋಸ್​ ಪಡೆಯಲಾಯಿತು. ಕೋವಿಡ್​-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಎಲ್ಲ ಅರ್ಹರು ಕರೊನಾ ಲಸಿಕೆ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ. ಒಟ್ಟಾಗಿ ನಾವು ಭಾರತವನ್ನು ಕೋವಿಡ್​ ಮುಕ್ತವಾಗಿಸೋಣ ಎಂಬ ಸಂದೇಶ ರವಾನಿಸಿದ್ದರು.
ಲಸಿಕೆ ಪಡೆಯಲು ಬಯಸುವವರು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಪ್ರಕ್ರಿಯೆಗೆ ವೆಬ್​ಸೈಟ್ cowin.gov.in ನೋಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್​)
ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

ಚಾಣಕ್ಯನ ಈ ನೀತಿಯನ್ನು ಅನುಸರಿಸಿದರೆ ನಿಮಗೆಂದೂ ಸೋಲಿನ ಅನುಭವ ಆಗುವುದೇ ಇಲ್ಲ!

ಮೇಕ್ ಇನ್ ಇಂಡಿಯಾ ಯೋಜನೆ: ಉತ್ತಮ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
