ನವದೆಹಲಿ:ಕರೊನಾ ಆತಂಕದ ಮಧ್ಯೆ ದೇಶಕ್ಕೆ ಎದುರಾಗಿರುವ ಇನ್ನೊಂದು ಆತಂಕವೆಂದರೆ ಆಂಫನ್​ ಚಂಡಮಾರುತ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತ ಸೂಪರ್​ ಸೈಕ್ಲೋನ್​ ಆಗಿ ಬದಲಾಗಿದ್ದು, ವೇಗದ ತೀವ್ರತೆಯನ್ನೂ ಹೆಚ್ಚಿಸಿಕೊಂಡಿದೆ.
ಚಂಡಮಾರುತ ಈಶಾನ್ಯ ಬಂಗಾಳ ಕೊಲ್ಲಿ ಮೂಲಕ ಪಶ್ಚಿಮ ಬಂಗಾಳ ಪ್ರವೇಶಿಸಿ, ಮೇ 20 ಹೊತ್ತಿಗೆ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಾದ ದಿಘಾ ಮತ್ತು ಹತಿಯಾ ದ್ವೀಪಗಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಕೋವಿಡ್​ 19 ನಂತರದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಬಂದೊದಗಿದೆ ಹೊಸ ಆಪತ್ತು
ಆಂಫನ್​ ಗಂಭೀರತೆ ಹೆಚ್ಚುತ್ತಿರುವ ಮಧ್ಯೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಂಡಮಾರುತದ ಸ್ವರೂಪ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ಸ್ಥಳದಲ್ಲಿರುವ ವಾತಾವರಣದ ಬಗ್ಗೆ ಮೋದಿಯವರು ಎನ್​ಡಿಆರ್​ಎಫ್​ನಿಂದ ವಿವರಣೆ ಕೇಳಿದ್ದಾರೆ.
ಚಂಡಮಾರುತದ ಪ್ರಭಾವ ಇರುವ ಕರಾವಳಿ ಪ್ರದೇಶಗಳಲ್ಲಿ ಎನ್​ಡಿಆರ್​ಎಫ್​ನ 25 ತಂಡವನ್ನು ನಿಯೋಜಿಸಲಾಗಿದೆ. ಅದರೊಟ್ಟಿಗೆ ಇನ್ನೂ 12 ತಂಡಗಳು ಅಗತ್ಯ ಬಿದ್ದರೆ ಹೊರಡಲು ಸಿದ್ಧವಾಗಿವೆ. ಇನ್ನೂ 24 ತಂಡಗಳನ್ನು, ಚಂಡಮಾರುತ ಅಪ್ಪಳಿಸಬಹುದಾದ ಬೇರೆಬೇರೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್​ಡಿಆರ್​ಎಫ್​ನ ಡಿಜಿ ಸಭೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತಿತರರು ಇದ್ದರು.
ಆಂಫನ್​ ಚಂಡ ಮಾರುತ ಬುಧವಾರ (ಮೇ 20)ದಂದು ಪಶ್ಚಿಮ ಬಂಗಾಳದ ಕೋಲ್ಕತ್ತದ ಕರಾವಳಿ ತೀರಗಳಲ್ಲಿ ಭೂಕುಸಿತದಂತಹ ಅವಘಡ ಸೃಷ್ಟಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​ )
ಇದನ್ನೂ ಓದಿ:ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
