ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಡಿ. 30ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ರೋಡ್​ಶೋ ಮತ್ತು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ರಾಮಮಂದಿರ ಉದ್ಘಾಟನೆ ಸಿದ್ಧತೆ ಕುರಿತು ಸುದ್ದಿಗಾರರಿಗೆ ಭಾನುವಾರ ವಿವರ ನೀಡಿದ ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ಈ ವಿಷಯ ತಿಳಿಸಿದ್ದಾರೆ.
ಅಂದು ಪ್ರಧಾನಿ ಅಯೋಧ್ಯೆ ರೈಲು ನಿಲ್ದಾಣ ಮತ್ತು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಪ್ರಧಾನಿ ತಮ್ಮ ಭೇಟಿ ವೇಳೆ 3,284.60 ಕೋಟಿ ರೂ.ಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ವಿುಸಲಾದ ದೇವಾಲಯದಲ್ಲಿ ಜ. 22ರಂದು ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಡಿ. 30ರಿಂದ ಜನವರಿ ಕೊನೆಯವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ 100 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶ ಸರ್ಕಾರ ತೆಗೆದಿರಿಸಿದೆ. ಇದಕ್ಕೆ ಮುಂಚಿತವಾಗಿ, ನಗರದ ಸೌಂದಯೀಕರಣ, ರಸ್ತೆಗಳ ಅಗಲೀಕರಣ, ಮೂಲಸೌಕರ್ಯಗಳ ನವೀಕರಣ ನಡೆಯುತ್ತಿದೆ. ಸಮಾರಂಭಕ್ಕೆ 3000 ಅತಿ ಗಣ್ಯರು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ ಎಂದರು. 23ರಿಂದ ರಾಮಲಲ್ಲಾ ದರ್ಶನ: ಅಂದಾಜಿನ ಪ್ರಕಾರ ಜ. 22ರ ನಂತರ 50ರಿಂದ 55 ಸಾವಿರ ಜನರು ಪ್ರತಿ ದಿನ ಅಯೋಧ್ಯೆಗೆ ಬರಬಹುದು. 23ರಿಂದ ಸಾರ್ವಜನಿಕರಿಗೆ ರಾಮಲಲ್ಲಾ ದರ್ಶನ ಸಿಗಲಿದೆ ಎಂದು ವಿವರಿಸಿದರು.
ಕನ್ನಡ ಫಲಕಗಳೂ ಬೇಕು:ಅಯೋಧ್ಯೆಗೆ ತೆರಳುವ ದಕ್ಷಿಣ ಭಾರತದ ಭಕ್ತರಿಗೆ ಅನುಕೂಲವಾಗುವಂತೆ ತಮಿಳು- ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಫಲಕಗಳನ್ನು ಹಾಕಿಸಬೇಕೆಂದು ಇನ್​ಫೊಸಿಸ್​ನ ಮಾಜಿ ಸಿಎಫ್​ಒ ಟಿ.ವಿ. ಮೋಹನದಾಸ್ ಪೈ ಆಗ್ರಹಿಸಿದ್ದಾರೆ.
ನೇಪಾಳದಿಂದ ಆಭರಣ-ಸ್ಮರಣಿಕೆರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ನೇಪಾಳದಿಂದ ಆಭರಣ, ಪಾತ್ರೆ, ಬಟ್ಟೆ, ಸಿಹಿತಿಂಡಿ ಹಾಗೂ ವಿಶೇಷ ಸ್ಮರಣಿಕೆಗಳ ರವಾನೆ ಆಗಲಿದೆ. ಇದಕ್ಕಾಗಿ ಜನಕ್​ಪುರ್​ಧಾಮ್ ಅಯೋಧ್ಯಾಧಾಮ್ ಯಾತ್ರೆ ನಡೆಯಲಿದೆ. ಈ ಯಾತ್ರೆ ಜ. 18ರಂದು ಆರಂಭವಾಗಿ ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌಗಂಧ್, ಸಿದ್ಧಾರ್ಥನಗರ, ಗೋರಖಪುರ ಮೂಲಕ ಹಾದು ಜ. 20ರಂದು ಅಯೋಧ್ಯೆ ತಲುಪಲಿದೆ. ಬಳಿಕ ಸ್ಮರಣಿಕೆ ಸೇರಿ ವಿವಿಧ ಉಡುಗೊರೆಗಳನ್ನು ಅಂದೇ ಶ್ರೀರಾಮಜನ್ಮಭೂಮಿ ರಾಮಮಂದಿರ ಟ್ರಸ್ಟ್​ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಾಂತ ರಾಮ್ೋಷನ್​ದಾಸ್ ವೈಷ್ಣವ್ ತಿಳಿಸಿದ್ದಾರೆ. ಈ ಮೊದಲು ನೇಪಾಳದ ಕಲಿಗಂಡಕಿ ನದಿತೀರದಲ್ಲಿನ ಸಾಲಿಗ್ರಾಮ ಶಿಲೆಗಳನ್ನು ಸಂಗ್ರಹಿಸಿ ಶ್ರೀರಾಮನ ಮೂರ್ತಿ ರಚಿಸಲು ಕಳುಹಿಸಿ ಕೊಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ರಜೆ ಘೋಷಿಸಿ:ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ದಿನದಂದು ಸಾರ್ವಜನಿಕ ರಜೆ ಘೋಷಿಸಬೇಕು ಎಂದು ವಿಶ್ವ ಹಿಂದು ಪರಿಷದ್ ದೆಹಲಿ ಉಪ ರಾಜ್ಯಪಾಲ ವಿನಯ್ ಕುಮಾರ್ ಸಕ್ಸೇನಾ ಅವರಲ್ಲಿ ಮನವಿ ಮಾಡಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲ ಭಕ್ತರಿಗೂ ಭಾಗಿಯಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕ ರಜೆ ಘೋಷಣೆ ಮಾಡಬೇಕು ಎಂದು ವಿಎಚ್​ಪಿ ದೆಹಲಿ ಘಟಕದ ಅಧ್ಯಕ್ಷ ಕಪಿಲ್ ಖನ್ನಾ, ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತ ಲಿಖಿತ ಮನವಿ ಸಲ್ಲಿಸಿದ್ದಾರೆ.
ವಾಜಪೇಯಿ ಸಾಂಸ್ಕೃತಿಕ ಸಂಕೀರ್ಣ ಉದ್ಘಾಟನೆನವದೆಹಲಿ: ಸೋಮವಾರ (ಡಿ. 25) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನ. ಇದನ್ನು ‘ಸುಶಾಸನ ದಿವಸ’ವಾಗಿ (ಉತ್ತಮ ಆಡಳಿತ ದಿನ) ಆಚರಿಸಲಾಗುತ್ತಿದೆ. ಈ ದಿನ ದೇಶಾದ್ಯಂತ ಬಿಜೆಪಿ ಕಚೇರಿಗಳಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಗೌರವಾರ್ಪಣೆ, ಅವರ ಸೇವೆ ಸ್ಮರಣೆ ನಡೆಸುವಂತೆ ಪಕ್ಷದ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಇದಲ್ಲದೆ, ಉತ್ತರ ಪ್ರದೇಶ ಬಿಜೆಪಿ ಸರ್ಕಾರ, ವಾಜಪೇಯಿ ಹುಟ್ಟೂರು ಆಗ್ರಾ ಜಿಲ್ಲೆಯ ಬತೇಶ್ವರ್ ಗ್ರಾಮವನ್ನು 100 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಿದ್ದು, ಅದಕ್ಕೆ ಶಂಕುಸ್ಥಾಪನೆ ನಡೆಸಲಿದೆ. ಯೋಗಿ ಆದಿತ್ಯನಾಥ್ ಸೋಮವಾರ ಅಟಲ್ ಸಾಂಸ್ಕೃತಿಕ ಸಂಕೀರ್ಣ ಉದ್ಘಾಟಿಸಿ, ವಾಜಪೇಯಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಅಟಲ್ ಕೃಷಿ ಉತ್ಸವ ವಸ್ತುಪ್ರದರ್ಶನ ನಡೆಯಲಿದ್ದು, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಲಿದೆ. ಛತ್ತೀಸ್​ಗಢ ಬಿಜೆಪಿ ಸರ್ಕಾರ, ಕೃಷಿಕರಿಗೆ ಬಾಕಿ ಇರುವ ಬೋನಸ್ ಮೊತ್ತ ಸೋಮವಾರ ವಾಜಪೇಯಿ ಜನ್ಮದಿನ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರವಾಗಿ ಗಾಯಗೊಂಡಿದ್ದ ತಂದೆ-ಮಗು ಸಾವು

ರಾಷ್ಟ್ರೀಯ ಕುಸ್ತಿ ಫೆಡರೇಷನ್ ಸಂಸ್ಥೆ ಅಮಾನತು: ಕ್ರೀಡಾ ಸಚಿವಾಲಯ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
