ನವದೆಹಲಿ:ಕೋವಿಡ್​ ವಿರುದ್ಧ ಲಸಿಕೀಕರಣವೊಂದೇ ಪರಿಣಾಮಕಾರಿ ಅಸ್ತ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ನಡೆದ ಕೋವಿನ್​ ಗ್ಲೋಬಲ್ ಕಾನ್​ಕ್ಲೇವ್​ನಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಈ ಸಾಂಕ್ರಾಮಿಕ ಪಿಡುಗಿನಿಂದ ಹೊರಗೆ ಬರಲು ಲಸಿಕೆ ಅತ್ಯುತ್ತಮ ಆಶಾಕಿರಣ. ಅದಕ್ಕಾಗಿ ಭಾರತ ಆರಂಭದಿಂದಲೂ ಲಸಿಕೀಕರಣ ಕಾರ್ಯತಂತ್ರಕ್ಕಾಗಿ ಡಿಜಿಟಲ್​ನತ್ತ ಹೆಚ್ಚಿನ ಒಲವು ತೋರಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ನಾವು ಕಂಡುಕೊಂಡ ತಂತ್ರಾಂಶಕ್ಕೆ ಕೋವಿನ್​ ಎಂದು ಹೆಸರಿಟ್ಟು ಅದನ್ನು ಓಪನ್ ಸೋರ್ಸ್ ಮಾಡಲಾಗಿದೆ. ಈ ಮೂಲಕ ಭಾರತ ಇಡೀ ಜಗತ್ತೇ ಒಂದು ಎಂಬಂತೆ ನಡೆದುಕೊಂಡಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಈ ವರ್ಚುವಲ್ ಮೀಟ್​ನಲ್ಲಿ ವಿವಿಧ ದೇಶಗಳ ವೈದ್ಯಕೀಯ ಹಾಗೂ ತಾಂತ್ರಿಕ ಪರಿಣತರು ಭಾಗಿಯಾಗಿದ್ದರು. ಭಾರತದ ವಿಶಿಷ್ಟ ಲಸಿಕೀಕರಣ ಕಾರ್ಯತಂತ್ರದ ವಿಶೇಷಗಳನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದು ಈ ಕಾನ್​ಕ್ಲೇವ್​ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಕೆನಡ, ಮೆಕ್ಸಿಕೊ, ನೈಜೀರಿಯಾ, ಪನಾಮಾ, ಉಗಾಂಡಾ ಸೇರಿ ಸುಮಾರು ಐವತ್ತು ರಾಷ್ಟ್ರಗಳು ಅವರಲ್ಲಿನ ಲಸಿಕೆ ಅಭಿಯಾನದಲ್ಲಿ ಕೋವಿನ್​ ತಂತ್ರಾಂಶವನ್ನು ಬಳಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಎಒ ಡಾ.ಆರ್​.ಎಸ್. ಶರ್ಮಾ ಪ್ರಧಾನಿಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಜಗತ್ತಿನ ಇತರ ರಾಷ್ಟ್ರಗಳಿಗೂ ಕೋವಿನ್ ಲಭ್ಯ ಇರುವಂತೆ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು.
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + thirteen =
Remember me
