ಪಾಟ್ನಾ:ಇಂದು ಪಾಟ್ನಾ ನಗರದ ತಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಾವೇ ತಯಾರಿಸಿದ ಅಡುಗೆಯನ್ನು ಊಟಕ್ಕೆಂದು ಬಂದ ಭಕ್ತರಿಗೆ ಬಡಿಸಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಮೂಲಕ ಅನೇಕರ ಸಂತಸಕ್ಕೆ ಕಾರಣರಾಗಿದ್ದಾರೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸ್ಥಳದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ.
ಇದನ್ನೂ ಓದಿ:ಪವಿತ್ರಾ ಕಾರು ಅಪಘಾತದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ನಟ ಚಲ್ಲಾ ಚಂದ್ರು
ತಖತ್ ಶ್ರೀ ಪಾಟ್ನಾ ಸಾಹಿಬ್ ಅನ್ನು ತಖತ್ ಶ್ರೀ ಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದೂ ಕರೆಯುತ್ತಾರೆ. ಇದು ರಾಜ್ಯದ ರಾಜಧಾನಿಯಲ್ಲಿರುವ ಸಿಖ್ಖರ ಐದು ತಖತ್‌ಗಳಲ್ಲಿ ಒಂದಾಗಿದೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ತಖತ್ ನಿರ್ಮಾಣವನ್ನು ನಿಯೋಜಿಸಿದರು.
#WATCH| PM Narendra Modi serves langar at Gurudwara Patna Sahib in Patna, Biharpic.twitter.com/qhj5RuHTHh
— ANI (@ANI)May 13, 2024

ರಾಜ್ಯ ರಾಜಧಾನಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಒಂದು ದಿನದ ಬಳಿಕ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ, ಬಿಹಾರದಲ್ಲಿ ರೋಡ್‌ಶೋ ನಡೆಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್‌ನಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
