ನವದೆಹಲಿ:ಉತ್ತರ ಭಾರತದ ಗೋಮೂತ್ರ ರಾಜ್ಯಗಳು ಬಿಜೆಪಿಯನ್ನು ಗೆಲ್ಲಿಸುತ್ತಿವೆ ಎಂದು ಲೋಕಸಭೆ ಡಿಎಂಕೆ ಸದಸ್ಯ ಡಿಎನ್​ವಿ ಸೆಂಥಿಲ್ ಕುಮಾರ್, ಸಂಸತ್ತಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರಂಭವಾಗಿರುವ ‘ಉತ್ತರ-ದಕ್ಷಿಣ’ ಭೇದದ ಚರ್ಚೆ ಈಗ ತೀವ್ರಗೊಂಡಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಉತ್ತರ-ದಕ್ಷಿಣ ರಾಜ್ಯಗಳ ಭಿನ್ನತೆಗಳ ಕುರಿತ ಈ ಚರ್ಚೆಗಳು ಶುರುವಾಗಿವೆ. ಬಿಜೆಪಿಯ ಟೀಕಾಕಾರರು ಉತ್ತರ ಭಾರತವನ್ನು ಹಿಂದಿ ಹೃದಯಭೂಮಿ ಎಂದು ವ್ಯಾಖ್ಯಾನಿಸಿ, ಇಲ್ಲಿ ಬಿಜೆಪಿ ಸಿದ್ಧಾಂತಕ್ಕೆ ಹೆಚ್ಚಿನ ಮಾನ್ಯತೆ ಇದೆ ಎಂದು ವಾದಿಸತೊಡಗಿದ್ದಾರೆ. ದೇಶದ ದಕ್ಷಿಣ ಭಾಗ ಬಿಜೆಪಿಯನ್ನು ತಿರಸ್ಕರಿಸಿದೆ ಎನ್ನುತ್ತ, ‘ಉತ್ತರ – ದಕ್ಷಿಣ’ ಚರ್ಚೆ ಹುಟ್ಟುಹಾಕಿದ್ದಾರೆ.
ಕರ್ನಾಟಕ ಬಳಿಕ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಈ ವ್ಯಾಖ್ಯಾನಗಳನ್ನು ಕಡುವಾಗಿ ವಿರೋಧಿಸಿರುವ ಬಿಜೆಪಿ ನಾಯಕರು ಚುನಾವಣಾ ಹಿನ್ನಡೆಗಳನ್ನು ಒಪ್ಪಿಕೊಳ್ಳದ ಪ್ರತಿಸ್ಪರ್ಧಿಗಳು ಇಂಥ ಮಾತುಗಳನ್ನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಏತನ್ಮಧ್ಯೆ, ಸೆಂಥಿಲ್​ಕುಮಾರ್ ಹೇಳಿಕೆಗೆ ದೇಶಾದ್ಯಂತ ಟೀಕೆ ವ್ಯಕ್ತವಾಗಿದೆ. ಡಿಎಂಕೆ ನಾಯಕ ಸ್ಟಾಲಿನ್, ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳ ನಾಯಕರು ಹೇಳಿಕೆಯನ್ನು ಖಂಡಿಸಿದ್ದಾರೆ.
ಏಳು ದಶಕಗಳ ಅಭ್ಯಾಸ ಸುಲಭವಾಗಿ ಹೋಗದು!:ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಉತ್ತರ-ದಕ್ಷಿಣ ವಿಭಜನೆ ವಿಚಾರವನ್ನೇ ವಿಪಕ್ಷಗಳ ಗುರಿಯಾಗಿಸುವ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಅವರು ತಮ್ಮ ಅಹಂಕಾರ, ಸುಳ್ಳು, ನಿರಾಶಾವಾದ ಮತ್ತು ಅಜ್ಞಾನದಿಂದ ಸಂತೋಷವಾಗಿರಲಿ. ಆದರೆ ಅವರ ವಿಭಜನೆಯ ಕಾರ್ಯಸೂಚಿಯ ಬಗ್ಗೆ ಎಚ್ಚರದಿಂದಿರಿ. ಎಪ್ಪತ್ತು ವರ್ಷಗಳ ಹಳೆಯ ಅಭ್ಯಾಸ ಅಷ್ಟು ಸುಲಭವಾಗಿ ಹೋಗಲಾರದು. ಅಲ್ಲದೆ, ಜನರ ಇಂತಹ ವಿವೇಕಯುತ ನಿರ್ಧಾರಗಳಿಂದಾಗಿ ಮುಂದೆ ಇನ್ನೂ ತಲೆಕೆಳಗಾದ ಲೆಕ್ಕಾಚಾರ ಎದುರಿಸಲು ಅವರು ಸಿದ್ಧರಾಗಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಇಮೋಜಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮತ್ತಿತರ ವಿಪಕ್ಷಗಳನ್ನು ಲೇವಡಿ ಮಾಡಿದ್ದಾರೆ.
ಕ್ಷಮೆ ಯಾಚಿಸಿದ ಸೆಂಥಿಲ್:ವಿರೋಧ ಜಾಸ್ತಿಯಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಡಿಎಂಕೆ ಸಂಸದ ಸೆಂಥಿಲ್ ಕುಮಾರ್, ಗೋಮೂತ್ರ ರಾಜ್ಯಗಳ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಒಂದು ಪದ ಅನುಚಿತ ರೀತಿಯಲ್ಲಿ ಬಳಸಿದ್ದೇನೆ. ಆ ಪದವನ್ನು ಯಾವುದೇ ದುರುದ್ದೇಶದಿಂದ ಬಳಸಿಲ್ಲ. ತಪ್ಪು ಅರ್ಥ ರವಾನೆ ಆಗಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ದಯವಿಟ್ಟು ವಿಭಜನೆ ನಿಲ್ಲಿಸಿ:ಉತ್ತರ-ದಕ್ಷಿಣ ಎಂಬ ಆಧಾರದ ಮೇಲೆ ದೇಶ ವಿಭಜಿಸಬೇಡಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ. ಪ್ರಧಾನಿ ಯಾವಾಗಲೂ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾರೆ. ಆದರೆ ಪ್ರತಿಪಕ್ಷಗಳು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತವೆ. ದಯವಿಟ್ಟು ಈ ವಿಭಜನೆಯ ಕೆಲಸ ನಿಲ್ಲಿಸಿ ಎಂದು ವಿನಂತಿಸಿದರು.
ಪನ್ನೂನ್ ಬೆದರಿಕೆ, ಸಂಸತ್ತಿಗೆ ಭದ್ರತೆ:ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್​ಸಿಂಗ್ ಪನ್ನೂನ್ ಡಿ. 13ರಂದು ಅಥವಾ ಅದಕ್ಕೂ ಮುನ್ನ ಸಂಸತ್ತಿನ ಬುಡ ಅಲ್ಲಾಡಿಸುವುದಾಗಿ ವಿಡಿಯೋದಲ್ಲಿ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಪೊಲೀಸರು ಬುಧವಾರ ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
