ನವದೆಹಲಿ:ರೈತ ಸಂಘಟನೆಗಳು ಮತ್ತು ಕಾಂಗ್ರೆಸ್​ ಪಕ್ಷ ವಿರೋಧಿಸುತ್ತಿರುವ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯವಾಗಿ ಮೌನ ತಾಳುತ್ತಾ ಬಂದಿದ್ದಾರೆ. ಇದೀಗ ಮ್ಯಾಗಜೀನ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಸರ್ಕಾರ ರೈತರನ್ನು ಸಶಕ್ತಗೊಳಿಸುವಲ್ಲಿ ಕಂಕಣಬದ್ಧವಾಗಿದೆ ಎಂದಿರುವ ಮೋದಿ, ಈವರೆಗೆ ವಿವಾದಿತ ಕೃಷಿ ಕಾನುನುಗಳಲ್ಲಿ ನಿರ್ದಿಷ್ಟವಾಗಿ ಯಾವ ಅಂಶವನ್ನು ಬದಲಿಸಬೇಕೆಂದು ಪ್ರತಿಭಟನಾನಿರತರು ಬೆಟ್ಟು ಮಾಡಿ ತೋರಿಸಿಲ್ಲ ಎಂದಿದ್ದಾರೆ. ಯಾವುದೇ ಪಕ್ಷದ ಹೆಸರು ತೆಗೆದುಕೊಳ್ಳದೆ, ರೈತಪರ ಸುಧಾರಣೆಗಳನ್ನು ವಿರೋಧಿಸುತ್ತಿರುವವರನ್ನು ನೋಡಿದರೆ ಬೌದ್ಧಿಕ ಅಪ್ರಾಮಾಣಿಕತೆ ಮತ್ತು ‘ರಾಜನೈತಿಕ ಧೋಖಾಧಡಿ’ ಎಂದರೆ ಏನೆಂದು ಗೊತ್ತಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಸಮಂತಾ-ನಾಗಚೈತನ್ಯ ದಾಂಪತ್ಯ ಅಂತ್ಯ; ಅಧಿಕೃತ ಘೋಷಣೆ ಮಾಡಿದ ತಾರಾದಂಪತಿ
ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಶೇಕಡ 100ರಷ್ಟು ಜನರಿಗೆ ಒಪ್ಪಿಗೆಯಾಗಬಲ್ಲಂಥ ನಿರ್ಧಾರವನ್ನು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಮೋದಿ, “ತಮ್ಮ ಪಕ್ಷ ಮತ್ತೆ ಗೆಲ್ಲುತ್ತದೆಯಾ ಎಂದು ನೋಡಿಕೊಂಡು ಸರ್ಕಾರ ಆಳುವ ಪ್ರತೀತಿ ಇದೆ. ಆದರೆ, ದೇಶ ಗೆಲ್ಲುವಂತೆ ಸರ್ಕಾರ ನಡೆಸುವ ಉದ್ದೇಶ ನನ್ನದು. ನನ್ನ ನಿರ್ಧಾರಗಳು ಹೇಗೆ ಅತ್ಯಂತ ಬಲಹೀನ ಅಥವಾ ಬಡ ವ್ಯಕ್ತಿಗೆ ಉಪಯುಕ್ತ ಅಥವಾ ಹಾನಿಕಾರಕವಾಗಬಲ್ಲದು ಎಂಬ ಗಾಂಧೀಜಿಯ ಮಾನದಂಡದಂತೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದಿದ್ದಾರೆ.
ಕೃಷಿ ಕಾನೂನುಗಳ ಬಗೆಗಿನ ವಿರೋಧದ ಬಗ್ಗೆ ಮಾತನಾಡಿದ ಮೋದಿ, “ನಾವು ಸಣ್ಣ ರೈತರನ್ನು ಸಶಕ್ತೀಕರಿಸಲು ಬದ್ಧರಾಗಿದ್ದೇವೆ. ಕೃಷಿ ಕಾನೂನಿನಲ್ಲಿ ಯಾವ ಅಂಶದ ಬಗ್ಗೆ ಒಪ್ಪಿಗೆ ಇಲ್ಲವೋ ಆ ವಿಚಾರಗಳನ್ನು ಕುಳಿತು ಚರ್ಚಿಸಲು ಸಿದ್ಧವಿದ್ದೇವೆ ಎಂದು ನಮ್ಮ ಸರ್ಕಾರ ಮೊದಲನೇ ದಿನದಿಂದ ಹೇಳುತ್ತಾ ಬಂದಿದೆ. ಹಲವು ಸಭೆಗಳು ನಡೆದಿವೆ. ಆದರೆ ಇಲ್ಲೀವರೆಗೆ ಯಾರೊಬ್ಬರೂ ಒಪ್ಪಿಗೆಯಿಲ್ಲದ ನಿರ್ದಿಷ್ಟ ಅಂಶದ ಬಗ್ಗೆ ತಿಳಿಸಿಲ್ಲ” ಎಂದಿದ್ದಾರೆ.(ಏಜೆನ್ಸೀಸ್)
VIDEO| ಮಹಾತ್ಮ ಗಾಂಧಿ ಚಿತ್ರ, ಸಂದೇಶಗಳೊಂದಿಗೆ ಕಂಗೊಳಿಸಿದ ಬುರ್ಜ್​ ಖಲೀಫ

ಜಂಗಲ್​ ಥೀಮ್​ನ ಬಿಗ್​ ಬಾಸ್​ ಮನೆಯ ಝಲಕ್​ ನೋಡಿ! ಸೀಸನ್ 15 ಆರಂಭ ಇಂದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 18 =
Remember me
