ಸುಸ್ಥಿರ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಮುಖ್ಯವಾಗಿ ಹವಾಮಾನದ ಸವಾಲುಗಳತ್ತ ಜಿ-20 ಗಂಭೀರವಾಗಿ ಗಮನ ಹರಿಸಿದೆ. ಕಳೆದ ಒಂದು ವರ್ಷದಲ್ಲಿ ಮಹಿಳಾ ಸಬಲೀಕರಣಕ್ಕೆ ಮತ್ತು ಹಸಿರು ಇಂಧನ ಬಳಕೆ ಉತ್ತೇಜಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮಹತ್ವವನ್ನು ಮನಗಾಣಿಸಲಾಗಿದೆ.
ನರೇಂದ್ರ ಮೋದಿ, ಪ್ರಧಾನಿಭಾರತ ಜಿ-20 ಅಧ್ಯಕ್ಷತೆ ವಹಿಸಿಕೊಂಡು ಇಂದಿಗೆ (ನ.30) 365 ದಿನಗಳಾಗಿವೆ. ಇದು ‘ವಸುದೈವ ಕುಟುಂಬಕಂ’, ಅಂದರೆ, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಚೈತನ್ಯವನ್ನು ಪ್ರತಿಬಿಂಬಿಸುವ, ಪುನಃ ಬದ್ಧತೆ ತೋರುವ ಮತ್ತು ಪುನರುಜ್ಜೀವನಗೊಳಿಸುವ ಕ್ಷಣವಾಗಿದೆ.
ಕಳೆದ ವರ್ಷ ನಾವು ಜವಾಬ್ದಾರಿ ವಹಿಸಿಕೊಂಡಾಗ, ಇಡೀ ಜಗತ್ತು ಬಹುಮುಖಿ ಸವಾಲುಗಳನ್ನು ಎದುರಿಸುತ್ತಿದ್ದವು. ಅವುಗಳೆಂದರೆ, ಕೋವಿಡ್-19 ಸಾಂಕ್ರಾಮಿಕದಿಂದ ಚೇತರಿಕೆ, ಹೆಚ್ಚುತ್ತಿರುವ ಹವಾಮಾನ ಅಪಾಯಗಳು, ಹಣಕಾಸು ಅಸ್ಥಿರತೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಲ ಬಿಕ್ಕಟ್ಟು, ಬಹುಪಕ್ಷೀಯತೆ ಕುಸಿತ ಸೇರಿ ಹಲವು ಸವಾಲುಗಳಿದ್ದವು. ಸಂಘರ್ಷಗಳು ಮತ್ತು ಸ್ಪರ್ಧೆಗಳ ನಡುವೆಯೇ, ಅಭಿವೃದ್ಧಿ ಸಹಕಾರಕ್ಕೆ ತೊಂದರೆಯಾಯಿತು, ಪ್ರಗತಿಗೆ ಹಿನ್ನಡೆಯಾಯಿತು.
ಜಿ-20 ಅಧ್ಯಕ್ಷತೆ ವಹಿಸಿಕೊಂಡ ನಂತರ ಭಾರತವು ಯಥಾಸ್ಥಿತಿಗೆ ಪರ್ಯಾಯವಾಗಿ ಹೊಸ ಜಗತ್ತನ್ನು ನೀಡಲು ಪ್ರಯತ್ನಿಸಿತು, ಅದು ಜಿಡಿಪಿ ಕೇಂದ್ರಿತ ಪ್ರಗತಿಯಿಂದ ಮಾನವ ಕೇಂದ್ರಿತ ಪ್ರಗತಿಯತ್ತ ಬದಲಾಗುವುದು. ಭಾರತವು, ‘ನಮ್ಮನ್ನು ವಿಭಜಿಸುವ ಬದಲು ನಮ್ಮನ್ನು ಒಗ್ಗೂಡಿಸುವುದನ್ನು’ ಜಗತ್ತಿಗೆ ನೆನಪು ಮಾಡಿಕೊಡುವ ಗುರಿಯನ್ನು ಹೊಂದಿದೆ. ಅಂತಿಮವಾಗಿ ಸಮಾಲೋಚನೆಗಳು ವಿಕಸನಗೊಳ್ಳಬೇಕಾಗಿತ್ತು. ಕೆಲವರ ಹಿತಾಸಕ್ತಿಗಳು ಹಲವರ ಆಕಾಂಕ್ಷೆಗಳಿಗೆ ದಾರಿ ಮಾಡಿಕೊಡಬೇಕಾಗಿತ್ತು. ಅದಕ್ಕಾಗಿ ಬಹುಪಕ್ಷೀಯತೆಯ ಮೂಲಭೂತ ಸುಧಾರಣೆ ಅತ್ಯಗತ್ಯವಾಗಿತ್ತು.
ಒಗ್ಗೂಡಿದ (ಎಲ್ಲವನ್ನೂ ಒಳಗೊಂಡ), ಮಹತ್ವಾಕಾಂಕ್ಷೆಯ, ಕ್ರಿಯೆ ಆಧಾರಿತ ಮತ್ತು ನಿರ್ಣಾಯಕ ಈ ನಾಲ್ಕು ಪದಗಳು ಜಿ-20 ಅಧ್ಯಕ್ಷರಾಗಿ ನಮ್ಮ ಕಾರ್ಯವಿಧಾನವನ್ನು ವ್ಯಾಖ್ಯಾನಿಸುತ್ತವೆ ಮತ್ತು ಎಲ್ಲ ಜಿ-20 ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ ಹೊಸದೆಹಲಿ ನಾಯಕ ಘೊಷಣೆ (ಎನ್​ಡಿಎಲ್​ಡಿ), ಈ ತತ್ವಗಳನ್ನು ಪಾಲಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ.
ಒಗ್ಗೂಡಿದ, ಅಂದರೆ ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಅಧ್ಯಕ್ಷತೆಯ ಹೃದಯಭಾಗವಾಗಿದೆ. ಆಫ್ರಿಕಾ ಒಕ್ಕೂಟವನ್ನು (ಎಯು) ಜಿ-20ರ ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದರಿಂದ ಆಫ್ರಿಕಾದ 55 ರಾಷ್ಟ್ರಗಳನ್ನು ವೇದಿಕೆಗೆ ಸಂಯೋಜಿಸಿತು, ಇದು ಜಾಗತಿಕ ಜನಸಂಖ್ಯೆಯ ಶೇಕಡ 80ರಷ್ಟು ಒಳಗೊಳ್ಳುವಂತೆ ವಿಸ್ತರಣೆ ಮಾಡಿತು. ಈ ಸಕ್ರಿಯ ನಿಲುವು ಜಾಗತಿಕ ಸವಾಲುಗಳು ಮತ್ತು ಅವಕಾಶಗಳ ಕುರಿತು ಹೆಚ್ಚು ಸಮಗ್ರ ಸಂವಾದಕ್ಕೆ ಎಡೆಮಾಡಿಕೊಟ್ಟಿದೆ.
ಭಾರತವು ಎರಡು ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್’ ಜಾಗತಿಕ ದಕ್ಷಿಣದ ದನಿಯಾಗುವ ಬಹುಪಕ್ಷೀಯತೆಯ ಹೊಸ ಉದಯಕ್ಕೆ ಕಾರಣವಾಯಿತು. ಭಾರತವು ಅಂತಾರಾಷ್ಟ್ರೀಯ ಚರ್ಚೆಯಲ್ಲಿ ಜಾಗತಿಕ ದಕ್ಷಿಣದ ಕಾಳಜಿಯನ್ನು ಮುಖ್ಯವಾಹಿನಿಗೆ ತಂದಿತು ಮತ್ತು ಜಾಗತಿಕ ನಿರೂಪಣೆಯನ್ನು ರೂಪಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವ ಯುಗಕ್ಕೆ ನಾಂದಿ ಹಾಡಿತು.
ಎಲ್ಲರನ್ನೂ ಒಳಗೊಳ್ಳುವಿಕೆ ಆಶಯವು ಜಿ-20ಕ್ಕೆ ಭಾರತದ ದೇಶೀಯ ವಿಧಾನವನ್ನು ಸಹ ಪರಿಚಯಿಸಿತು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಸೂಕ್ತವಾದ ಪೀಪಲ್ಸ್ ಪ್ರೆಸಿಡೆನ್ಸಿ ಎನಿಸಿತು. ಜನ ಭಾಗಿದಾರಿ (ಜನರ ಪಾಲ್ಗೊಳ್ಳುವಿಕೆ) ಕಾರ್ಯಕ್ರಮಗಳ ಮೂಲಕ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಾಲುದಾರರಾಗಿ ಒಳಗೊಂಡಿರುವ ಜಿ-20 1.4 ಶತಕೋಟಿ ನಾಗರಿಕರನ್ನು ತಲುಪಿದೆ ಮತ್ತು ಹಲವು ಅಂಶಗಳ ಮೇಲೆ, ಭಾರತವು ಜಿ-20ರ ಸಾಧಿಸಲೇಬೇಕಾದ ಗುರಿಗಳಿಗೆ ಹೊಂದಿಕೆಯಾಗುವ ವಿಶಾಲವಾದ ಅಭಿವೃದ್ಧಿ ಗುರಿಗಳತ್ತ ಅಂತಾರಾಷ್ಟ್ರೀಯ ಗಮನ ಸೆಳೆದಿರುವುದನ್ನು ಖಾತ್ರಿಪಡಿಸಿತು.
2030ರ ಕಾರ್ಯಸೂಚಿಯ ನಿರ್ಣಾಯಕ ಮಧ್ಯಭಾಗದಲ್ಲಿ, ಭಾರತವು ‘ಜಿ-20 2023’ ಕ್ರಿಯಾಯೋಜನೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ವೇಗಗೊಳಿಸಲು, ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಮತ್ತು ಸುಸ್ಥಿರ ಪರಿಸರ ಮತ್ತಿತರ ಅಂತರ ಸಂರ್ಪತ ಸಮಸ್ಯೆಗಳನ್ನು ದೂರಮಾಡುವ ಕ್ರಮ-ಆಧಾರಿತ ವಿಧಾನವನ್ನು ಕೈಗೊಂಡಿದೆ.
ಈ ಪ್ರಗತಿಯನ್ನು ಮುನ್ನಡೆಸುವ ಪ್ರಮುಖ ವಲಯವೆಂದರೆ ಸದೃಢ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ). ಇಲ್ಲಿ ಮೊದಲಿಗೆ ಆಧಾರ್, ಯುಪಿಐ ಮತ್ತು ಡಿಜಿಲಾಕರ್​ನಂಥ ಡಿಜಿಟಲ್ ಆವಿಷ್ಕಾರಗಳ ಕ್ರಾಂತಿಕಾರಿ ಪರಿಣಾಮವನ್ನು ನೇರವಾಗಿ ಕಂಡ ಭಾರತವು ನಿರ್ಣಾಯಕ ಶಿಫಾರಸುಗಳನ್ನು ಮಾಡಿದೆ. ಜಿ-20ರ ಮೂಲಕ ನಾವು ಡಿಜಿಟಲ್ ಪಬ್ಲಿಕ್ ಇನ್ಪ್ರಾಸ್ಟ್ರಕ್ಚರ್ ರೆಪೊಸಿಟರಿಯನ್ನು (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರ) ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ಇದು ಜಾಗತಿಕ ತಾಂತ್ರಿಕ ಸಹಯೋಗದಲ್ಲಿ ಗಮನಾರ್ಹ ದಾಪುಗಾಲಾಗಿದೆ. 16 ದೇಶಗಳಿಂದ 50ಕ್ಕೂ ಅಧಿಕ ಡಿಪಿಐಗಳನ್ನು ಒಳಗೊಂಡಿರುವ ಈ ಭಂಡಾರವು ಅಂತರ್ಗತ ಬೆಳವಣಿಗೆಯ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಲು, ಗ್ಲೋಬಲ್ ಸೌತ್ ಅನ್ನು ನಿರ್ವಿುಸಲು ಹಾಗೂ ಪಾಲನೆ ಮಾಡಲು ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧಿಸಲು ಡಿಪಿಐಯ ಶಕ್ತಿಯನ್ನು ಬಳಸಿಕೊಳ್ಳುವುದಾಗಿದೆ.
ನಮ್ಮ ‘ಒಂದು ಭೂಮಿ’ ಪರಿಕಲ್ಪನೆಗೆ, ನಾವು ತುರ್ತ, ಶಾಶ್ವತ ಮತ್ತು ಸಮಾನವಾದ ಬದಲಾವಣೆಗಳನ್ನು ತರಲು ಮಹತ್ವಾಕಾಂಕ್ಷೆಯ ಮತ್ತು ಎಲ್ಲರನ್ನೂ ಒಳಗೊಂಡ (ಅಂತರ್ಗತ) ಗುರಿಗಳನ್ನು ಪರಿಚಯಿಸಿದ್ದೇವೆ. ಹಸಿರು ಅಭಿವೃದ್ಧಿ ಒಪ್ಪಂದ ಘೊಷಣೆಯಂತೆ ಹಸಿವನ್ನು ಎದುರಿಸುವ ಮತ್ತು ಭೂಮಿಯನ್ನು ಸಂರಕ್ಷಿಸುವ ನಡುವಿನ ಆಯ್ಕೆಯ ಸವಾಲುಗಳನ್ನು ಪರಿಹರಿಸುತ್ತದೆ. ಉದ್ಯೋಗ ಮತ್ತು ಜೈವಿಕ ಪೂರಕ ವ್ಯವಸ್ಥೆಗೆ ಪೂಕರವಾಗಿ, ಹವಾಮಾನ ಬಳಕೆಯ ಪ್ರಜ್ಞೆ ಮತ್ತು ಉತ್ಪಾದನೆಯು ಭೂಸ್ನೇಹಿಯಾಗಿರುವ ಸಮಗ್ರ ನೀಲಿನಕ್ಷೆಯನ್ನು ವಿವರಿಸುತ್ತದೆ. ಜತೆಗೆ, ಜಿ-20 ಘೊಷಣೆ 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮಹತ್ವಾಕಾಂಕ್ಷೆಯ ಮೂರು ಪಟ್ಟು ಹೆಚ್ಚಳಕ್ಕೆ ಕರೆ ನೀಡುತ್ತದೆ. ಜಾಗತಿಕ ಜೈವಿಕ ಇಂಧನ ಮೈತ್ರಿ ಸ್ಥಾಪನೆ ಮತ್ತು ಹಸಿರು ಹೈಡ್ರೋಜನ್​ಗಾಗಿ ಒಂದು ಸಂಘಟಿತ ಉತ್ತೇಜನದೊಂದಿಗೆ, ಸ್ವಚ್ಛವಾದ, ಹಸಿರು ಜಗತ್ತನ್ನು ನಿರ್ವಿುಸುವ ಜಿ-20ರ ಮಹತ್ವಾಕಾಂಕ್ಷೆಗಳನ್ನು ನಿರಾಕರಿಸಲಾಗದು. ಇದು ಸದಾ ಭಾರತದ ನೀತಿಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ ಮೂಲಕ ಜಗತ್ತು ನಮ್ಮ ಹಳೆಯ ಪ್ರಾಚೀನ ಸುಸ್ಥಿರ ಸಂಪ್ರದಾಯಗಳಿಂದ ಪ್ರಯೋಜನ ಪಡೆಯಬಹುದು.
ಅಲ್ಲದೆ, ಈ ಘೊಷಣೆಯು ಹವಾಮಾನ ನ್ಯಾಯ ಮತ್ತು ಸಮಾನತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಜಾಗತಿಕ ಉತ್ತರದಿಂದ ಗಣನೀಯ ಆರ್ಥಿಕ ಮತ್ತು ತಾಂತ್ರಿಕ ನೆರವಿಗೆ ಒತ್ತಾಯಿಸುತ್ತದೆ. ಇದೇ ಮೊದಲ ಬಾರಿಗೆ, ಅಭಿವೃದ್ಧಿಯ ಹಣಕಾಸಿನ ಪ್ರಮಾಣದಲ್ಲಿ ಅಗತ್ಯವಿರುವ ಭಾರಿ ಏರಿಕೆಯನ್ನು ಗುರುತಿಸಲಾಗಿದ್ದು, ಇದು ಬಿಲಿಯನ್​ಗಳಿಂದ ಟ್ರಿಲಿಯನ್​ಗಟ್ಟಲೆ ಡಾಲರ್​ಗಳಿಗೇರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು 2030ರ ವೇಳೆಗೆ ತಮ್ಮ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (ಎನ್​ಡಿಸಿಎಸ್) ಈಡೇರಿಸಲು 5.9 ಟ್ರಿಲಿಯನ್ ಡಾಲರ್ ಅಗತ್ಯವಿದೆ ಎಂದು ಜಿ-20 ಒಪ್ಪಿಕೊಂಡಿದೆ.
ಅಗತ್ಯವಿರುವ ಮಹತ್ವದ ಸಂಪನ್ಮೂಲ ಒದಗಿಸುವ ಜತೆಗೆ ಜಿ-20 ಉತ್ತಮ, ಭಾರಿ ಮತ್ತು ಹೆಚ್ಚು ಪರಿಣಾಮಕಾರಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕಗಳ ಪ್ರಾಮುಖ್ಯವನ್ನು ಒತ್ತಿ ಹೇಳಿತು. ಏಕಕಾಲದಲ್ಲಿ, ಭಾರತವು ವಿಶ್ವಸಂಸ್ಥೆಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂಥ ಪ್ರಮುಖ ಅಂಗಗಳ ಪುನರ್ ರಚನೆಯಲ್ಲಿ, ಅದು ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.
ಲಿಂಗ ಸಮಾನತೆಯು ಘೊಷಣೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿತ್ತು, ಮುಂದಿನ ವರ್ಷ ಮಹಿಳಾ ಸಬಲೀಕರಣಕ್ಕೆ ಮೀಸಲಾದ ಕಾರ್ಯಕಾರಿ ಗುಂಪು (ರ್ವಂಗ್ ಗ್ರೂಪ್) ರಚನೆಯೊಂದಿಗೆ ಸಮಾಪನಗೊಂಡಿತು. ಭಾರತದ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗ ಸಭೆಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿಡುವ ‘ಭಾರತದ ಮಹಿಳಾ ಮೀಸಲಾತಿ ಮಸೂದೆ-2023’ ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಸಾರುತ್ತದೆ.
‘ಹೊಸ ದೆಹಲಿ ಘೊಷಣೆ’ಯು ನೀತಿ ಸುಸಂಬದ್ಧತೆ, ವಿಶ್ವಾಸಾರ್ಹ ವ್ಯಾಪಾರ ಮತ್ತು ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸುವ ಪ್ರಮುಖ ಆದ್ಯತೆಗಳಲ್ಲಿ ಸಹಯೋಗದ ನವೀಕೃತ ಮನೋಭಾವವನ್ನು ಒಳಗೊಂಡಿದೆ. ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ 87 ಫಲಿತಾಂಶಗಳನ್ನು ಮತ್ತು 118 ದಾಖಲೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಭೌಗೋಳಿಕ ರಾಜಕೀಯ ವಿಷಯಗಳು ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ಮೇಲೆ ಅವುಗಳ ಪರಿಣಾಮಗಳ ಕುರಿತು ಚರ್ಚೆಗಳನ್ನು ನಡೆಸಿತು. ಭಯೋತ್ಪಾದನೆ ಮತ್ತು ನಾಗರಿಕರ ಪ್ರಜ್ಞಾಶೂನ್ಯ ಹತ್ಯೆ ಸ್ವೀಕಾರಾರ್ಹವಲ್ಲ ಮತ್ತು ನಾವು ಅದನ್ನು ಶೂನ್ಯ-ಸಹಿಷ್ಣುತೆಯ ನೀತಿಯೊಂದಿಗೆ ಪರಿಹರಿಸಬೇಕು. ನಾವು ಹಗೆತನದ ವಿರುದ್ಧ ಮಾನವೀಯತೆಯನ್ನು ಸಾಕಾರಗೊಳಿಸಬೇಕು ಮತ್ತು ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಬೇಕು.
ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ಅಸಾಧಾರಣವಾದುದನ್ನು ಸಾಧಿಸಿದೆ ಎಂದು ನಾನು ಸಂತೋಷಪಡುತ್ತೇನೆ: ಇದು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಿತು, ಜಾಗತಿಕ ದಕ್ಷಿಣದ ದನಿಯನ್ನು ವರ್ಧಿಸಿತು, ಅಭಿವೃದ್ಧಿಯನ್ನು ಉತ್ತೇಜಿಸಿ ವೇಗ ನೀಡಿತು ಮತ್ತು ಎಲ್ಲೆಡೆ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿತು.
ಮುಂಬರುವ ವರ್ಷಗಳಲ್ಲಿ ಜನರು, ಭೂಮಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ಸಾಮೂಹಿಕ ಹೆಜ್ಜೆಗಳ ಬದ್ಧತೆ ಪ್ರತಿಧ್ವನಿಸುತ್ತವೆ ಎಂಬ ವಿಶ್ವಾಸದಿಂದ ನಾವು ಜಿ-20 ಅಧ್ಯಕ್ಷತೆಯನ್ನು ಬ್ರೆಜಿಲ್​ಗೆ ಹಸ್ತಾಂತರ ಮಾಡುತ್ತಿದ್ದೇವೆ.
ಎಮ್ಮೆ ಹಾಲು vs ಹಸು ಹಾಲು ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉತ್ತರ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 8 =
Remember me
