ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ದೇಶದ ಜನತೆ ಅವರ ಅಧಿಕೃತ ಎಕ್ಸ್​( ಈ ಹಿಂದಿನ ಟ್ವಿಟರ್) ಖಾತೆ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸುತ್ತಾರೆ. ಈ ಹಿಂದಿನಿಂದಲೂ ಪ್ರಧಾನಿಗಳ ಭಾಷಣಗಳನ್ನು ಹಿಂದಿ ಭಾಷೆಯಲ್ಲೇ ಕೇಳಬೇಕಿತ್ತು. ಆದರೆ ಇದೀಗ ಮುಂದುವರೆದಿರುವ ಟೆಕ್ನಾಲಜಿಯ ಸಹಾಯದಿಂದ ದೇಶದ ಹಲವಾರು ಭಾಷೆಗಳಲ್ಲಿಯೇ ಪಿಎಂ ಅವರ ಮಾತುಗಳನ್ನು ಆಲಿಸಬಹುದಾಗಿದೆ. ಅದು ಎಐ ಶಕ್ತಿಯಿಂದ.
ಇದನ್ನೂ ಓದಿ:ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024ಕ್ಕೆ ಬೆಂಗಳೂರು ಸಜ್ಜು; ಸುರಕ್ಷತೆಗಾಗಿ ಅದ್ಭುತ ಓಟ
ಈ ಕುರಿತು ಸ್ವತಃ ಪ್ರಧಾನಿ ಅವರ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. “ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ” ಎಂದು ತಿಳಿಸಲಾಗಿದೆ.
ಇನ್ಮುಂದೆ ಪ್ರಧಾನಿಗಳ ಭಾಷಣಗಳನ್ನು ನಮ್ಮ ಕನ್ನಡ ಭಾಷೆಯಲ್ಲೇ ಕೇಳಬಹುದು. ಇದಕ್ಕಾಗಿ ನರೇಂದ್ರ ಮೋದಿ ಕನ್ನಡ ಎಂಬ ಎಕ್ಸ್ ಖಾತೆಯನ್ನು ಫಾಲೋ ಮಾಡಬೇಕಿದೆ.
ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ.https://t.co/I5CEIWSJmuhttps://t.co/gYQ6hYZ8E7
— Narendra Modi (@narendramodi)March 8, 2024

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
