ನವದೆಹಲಿ: ಮಿಷನ್ ಕರ್ಮಯೋಗಿ ಘೋಷಿಸಿದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಐಪಿಎಸ್ ಪ್ರೊಬೆಷನರಿ ಅಧಿಕಾರಿಗಳ ದೀಕ್ಷಾಂತ ಪರೇಡ್ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದರು. ಹೈದರಾಬಾದ್​ನ ಸರ್ದಾರ್ ವಲ್ಲಭ ಭಾಯ್​ ಪಟೇಲ್​ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಪ್ರತಿಸಲವೂ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸುವುದಕ್ಕೆ ಸಜ್ಜಾಗಿರಬೇಕು ಎಂದು ಹೊಸ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನಿ ಕಿವಿಮಾತು ಹೇಳಿದ್ರು.
ನಿಮ್ಮ ವೃತ್ತಿಯಲ್ಲಿ ನೀವು ಪ್ರತಿಸಲವೂ ಅನಿರೀಕ್ಷಿತಗಳನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಸದಾ ಜಾಗೃತಾವಸ್ಥೆಯಲ್ಲೇ ಇರಬೇಕಾಗುತ್ತದೆ. ಸ್ಟ್ರೆಸ್ ಕೂಡ ಬಹುದೊಡ್ಡ ಮಟ್ಟಿಗೇ ಇರುತ್ತದೆ. ಹೀಗಾಗಿ ನಿಮ್ಮ ಪ್ರೀತಿಪಾತ್ರರ ಜತೆಗೆ ನಿರಂತರ ಸಂಪರ್ಕದಲ್ಲಿದ್ದು ಮಾತುಕತೆ ನಡೆಸುತ್ತಲೇ ಇರಬೇಕು. ಕಾಲಕಾಲಕ್ಕೆ ಅಥವಾ ರಜಾದಿನ ಮಾರ್ಗದರ್ಶಕರಂತಹವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ. ಅವರಿಂದ ಸಲಹೆಗಳನ್ನು ಪಡೆದುಕೊಳ್ಳಿ.
ಇದನ್ನೂ ಓದಿ:ಸುಮ್ಮನೆ ನನ್ನನ್ನ ಈ ವಿಷ್ಯಕ್ಕೆ ಎಳೆಯುತ್ತೀರಾ? ಸಂಜನಾ ಪ್ರಶ್ನೆ
ಯೋಗ, ಪ್ರಾಣಾಯಾಮಗಳು ಸ್ಟ್ರೆಸ್​ನಲ್ಲಿರುವವರಿಗೆ ಉತ್ತಮ ಪರಿಹಾರವಾಗಿದ್ದು, ಅದನ್ನು ರೂಢಿಸಿಕೊಳ್ಳಿ. ಅದರ ಪ್ರಯೋಜನ ಖಚಿತವಾಗಿಯೂ ಕೆಲಸದ ಮೇಲೆ ನಿಮ್ಮ ಆರೋಗ್ಯದ ಮೇಲೂ ಆಗುತ್ತದೆ. ದೆಹಲಿಯಲ್ಲಿ ನಾನು ನಿಯತವಾಗಿ ಯುವ ಐಪಿಎಸ್​ ಆಫೀಸರ್​ಗಳ ಜತೆಗೆ ಸಂವಹನ ಮಾಡುತ್ತಿರುತ್ತೇನೆ. ಆದರೆ, ಈ ವರ್ಷ ಕರೊನಾ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ನನ್ನ ಅವಧಿಯಲ್ಲಿ ಒಂದಿಲ್ಲೊಂದು ಕಡೆ ನಿಮ್ಮನ್ನು ಖಚಿತವಾಗಿಯೂ ಭೇಟಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ರು.
ಇದನ್ನೂ ಓದಿ:ತ್ಯಾಜ್ಯ ನಿರ್ವಹಣೆ: ಬೆಂಗಳೂರಿಗೆ ಇನ್ನೊಂದು ಪ್ರಶಸ್ತಿಯ ಗರಿ
ಹೊಸ ಬ್ಯಾಚಿನಲ್ಲಿ 131 ಐಪಿಎಸ್ ಅಧಿಕಾರಿಗಳಿದ್ದು, ಈ ಪೈಕಿ 38 ಮಹಿಳಾ ಅಧಿಕಾರಿಗಳಿದ್ದಾರೆ. ಅವರು 42 ವಾರಗಳ ಮೊದಲ ಹಂತದ ಬೇಸಿಕ್ ಕೋರ್ಸ್ ಕಂಪ್ಲೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಪತ್ರಿಕಾ ವಿತರಕರಿಗೆ ಶುಭ ಹಾರೈಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 5 =
Remember me
