ಚೆನ್ನೈ:ದೇಶಾದ್ಯಂತ ಕರೊನಾ ಹಾವಳಿ ವಿಪರೀತವಾಗಿರುವ ಈ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಸವಲತ್ತು, ವೈದ್ಯರು-ವೈದ್ಯಕೀಯ ಸಿಬ್ಬಂದಿಯ ತೀರಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಅದನ್ನು ಸಾಕಾರವಾಗಿಸಿದೆ.
ಹೌದು.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದೇ ದಿನ 11 ಮೆಡಿಕಲ್ ಕಾಲೇಜುಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಚೆನ್ನೈನ ಸೆಂಟ್ರಲ್​ ಇನ್​ಸ್ಟಿಟ್ಯೂಟ್​ ಆಫ್​ ಕ್ಲಾಸಿಕಲ್ ತಮಿಳ್ ಆವರಣ ಮತ್ತು ತಮಿಳುನಾಡಿನಾದ್ಯಂತ ಒಟ್ಟು 11 ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದ್ದು, ನಾಳೆ ಪ್ರಧಾನಿ ಮೋದಿ ಈ ಎಲ್ಲ ಕಾಲೇಜುಗಳನ್ನು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಒಟ್ಟು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಪೈಕಿ 2145 ಕೋಟಿ ರೂ. ಕೇಂದ್ರ ಸರ್ಕಾರದಿಂದ ನೀಡಲಾಗಿದ್ದು, ಉಳಿದ ಮೊತ್ತವನ್ನು ತಮಿಳುನಾಡು ಸರ್ಕಾರ ಭರಿಸಿದೆ.
ಈ ಹನ್ನೊಂದು ಕಾಲೇಜುಗಳ ನಿರ್ಮಾಣದೊಂದಿಗೆ ದೇಶದಲ್ಲಿನ ಮೆಡಿಕಲ್ ಕಾಲೇಜುಗಳ ಸಂಖ್ಯೆ 596ಕ್ಕೆ ತಲುಪಿದೆ. ಕಳೆದ 7 ವರ್ಷಗಳಲ್ಲಿ ಎಂಬಿಬಿಎಸ್​ ಸೀಟ್​ ಶೇ. 79.6, ಸ್ನಾತಕೋತ್ತರ ಪದವಿ ಸೀಟ್​ ಶೇ. 80.7 ಮತ್ತು ಒಟ್ಟು ವೈದ್ಯಕೀಯ ಸೀಟ್​ಗಳ ಪ್ರಮಾಣ ಶೇ. 80ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ತರಕಾರಿ ಅಂಗಡಿಯಾಕೆಗೆ ನಾನ್​ವೆಜ್​ ಮೆಸೇಜ್​ ಕಳಿಸಿದ್ದಾತನ ಬಂಧನ..

ಇಲ್ಲಿ ಪೊಲೀಸರೇ ಕಳ್ಳರು!: ಕಳ್ಳಸಾಗಣೆದಾರರಿಂದಲೇ ರಕ್ತಚಂದನ ದೋಚುತ್ತಿದ್ದ ಪೊಲೀಸರಿಬ್ಬರ ಬಂಧನ

ಮತ್ತೊಂದು ಭೀಕರ ಅಪಘಾತ, ಜಲ್ಲಿ ತುಂಬಿದ್ದ ಟಿಪ್ಪರ್​ ಪಲ್ಟಿ: 2 ಕಾರು, 1 ಬೈಕ್ ಮೇಲೆ ಮಗುಚಿ ಬಿದ್ದು ಆರು ಮಂದಿ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
