1. ಕೊಚ್ಚಿನ್ ಶಿಪ್​ಯಾರ್ಡ್ ಲಿಮಿಟೆಡ್ ಈ ಮೆಟ್ರೋ ಯೋಜನೆಯನ್ನು ರೂಪಿಸಿದೆ. ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್​ಗಳ ಮೂಲಕ ಈ ಸಾರಿಗೆ ಶುರುವಾಗಲಿದೆ.
2. ಬಂದರು ನಗರವಾಗಿರುವ ಕೊಚ್ಚಿಯ ಸುತ್ತಮುತ್ತ ಲಿನ 10 ದ್ವೀಪಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.
3. ಕೊಚ್ಚಿ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂ.
4. ಈ ಕನಸಿನ ಯೋಜನೆಗೆ ಕೇರಳ ಸರ್ಕಾರ ಮತ್ತು ಜರ್ಮನ್ ಸಂಸ್ಥೆ ಕೆಎಂಡಬ್ಲ್ಯು ಹಣ ಹೂಡಿಕೆ ಮಾಡಿದೆ.
5. ಕೊಚ್ಚಿ ವಾಟರ್ ಮೆಟ್ರೋ (ಕೆಎಂಡಬ್ಲ್ಯು) ಯೋಜನೆಯಲ್ಲಿ 78 ವಿದ್ಯುತ್ ದೋಣಿಗಳಿದ್ದು, 38 ಟರ್ವಿುನಲ್​ಗಳನ್ನು ನಿರ್ವಿುಸಲಾಗಿದೆ.
6. ಇದು ಹಿನ್ನೀರಿನ ವಿಹಂಗಮ ನೋಟವನ್ನು ನೀಡುವ ವಿಶಾಲವಾದ ಕಿಟಕಿಗಳನ್ನು ಹೊಂದಿರುವ ಹವಾನಿಯಂತ್ರಿತ ದೋಣಿಗಳನ್ನು ಹೊಂದಿದೆ.
7. ಮೊದಲ ಹಂತದಲ್ಲಿ, ಕೆಎಂಡಬ್ಲ್ಯು ಸೇವೆಯು ಹೈಕೋರ್ಟ್-ವೈಪಿನ್ ಟರ್ವಿುನಲ್​ಗಳು ಮತ್ತು ವೈಟ್ಟಿಲ-ಕಾಕ್ಕನಾಡ್ ಟರ್ವಿುನಲ್​ಗಳಿಂದ ಪ್ರಾರಂಭವಾಗುತ್ತದೆ. ಕೇರಳ ಮುಖ್ಯಮಂತ್ರಿ ಪ್ರಕಾರ, ಪ್ರಯಾಣಿಕರು ಟ್ರಾಫಿಕ್​ನಲ್ಲಿ ಸಿಲುಕಿಕೊಳ್ಳದೆ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಹೈಕೋರ್ಟ್ ಟರ್ವಿುನಲ್​ನಿಂದ ವೈಪಿನ್ ಟರ್ವಿುನಲ್​ಗೆ ತಲುಪಲು ಸಾಧ್ಯವಾಗುತ್ತದೆ. ವೈಟ್ಟಿಲದಿಂದ ವಾಟರ್ ಮೆಟ್ರೋ ಮೂಲಕ 25 ನಿಮಿಷಗಳಲ್ಲಿ ಕಾಕ್ಕನಾಡ್ ತಲುಪಬಹುದು.
8. ಇದರಲ್ಲಿ ಬಳಸಲಾಗುವ ದೋಣಿಗಳು ಟೈಟಾನೈಟ್ ಸ್ಪಿನೆಲ್ ಬ್ಯಾಟರಿಗಳಿಂದ ಚಲಿಸುತ್ತವೆ. ಹೀಗಾಗಿ, ವಿದ್ಯುತ್ ಚಾಲಿತ ವಾಟರ್ ಮೆಟ್ರೋವನ್ನು ಪರಿಸರ ಸ್ನೇಹಿ ಎಂದೇ ಪರಿಗಣಿಸಲಾಗಿದೆ.
9. ಮೆಟ್ರೋದಲ್ಲಿ 15 ಮಾರ್ಗಗಳಿದ್ದು, ಇವುಗಳ ಒಟ್ಟು ಅಂತರ 76 ಕಿ.ಮೀ. ಇದೆ. 78 ದೋಣಿಗಳ ಪೈಕಿ 23 ದೋಣಿಗಳು 100 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವುಗಳಾಗಿದ್ದರೆ, ಉಳಿದವುಗಳ ಸಾಮರ್ಥ್ಯ 50 ಪ್ರಯಾಣಿಕರು.
10. ವಿಕಲಚೇತನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಇದರಲ್ಲಿ ಕಲ್ಪಿಸಲು ಆದ್ಯತೆ ನೀಡಲಾಗಿದೆ.
ಕನಿಷ್ಠ ದರ 20 ರೂ.:ಕೊಚ್ಚಿ ವಾಟರ್ ಮೆಟ್ರೋದ ದೋಣಿ ಪ್ರಯಾಣಕ್ಕೆ ಕನಿಷ್ಠ ಟಿಕೆಟ್ ದರ 20 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ಸಾಪ್ತಾಹಿಕ ಮತ್ತು ಮಾಸಿಕ ಪಾಸ್​ಗಳಿವೆ. ಕೊಚ್ಚಿ ಒನ್ ಕಾರ್ಡ್ ಬಳಸಿ ಕೊಚ್ಚಿ ಮೆಟ್ರೋ ರೈಲು ಮತ್ತು ಕೊಚ್ಚಿ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸ ಬಹುದು. ಕೊಚ್ಚಿ ಒನ್ ಆಪ್ ಮೂಲಕ ಡಿಜಿಟಲ್ ಟಿಕೆಟ್ ಬುಕ್ ಮಾಡಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
