ನವದೆಹಲಿ:ಕೋವಿಡ್ ಸೋಂಕಿನ ಕಾರಣಕ್ಕೆ ಪ್ರವಾಸಿ ಭಾರತೀಯ ದಿನಾಚರಣೆ ಈ ಸಲ ವರ್ಚುವಲ್ ಕಾರ್ಯಕ್ರಮವಾಗಿರಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 9ರಂದು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದು 16ನೇ ಪ್ರವಾಸಿ ಭಾರತೀಯ ದಿವಸವಾಗಿದ್ದು, ಇದಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣವನ್ನು ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್​ ಇಂದು ಲೋಕಾರ್ಪಣೆ ಮಾಡುತ್ತಿದೆ. ಅನಿವಾಸಿ ಭಾರತೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಮತ್ತು ಅವರನ್ನು ದೇಶದ ವಿಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕೆ ಇದೊಂದು ವೇದಿಕೆಯಾಗಿದ್ದು. ಈ ಶೃಂಗದಲ್ಲಿ ಭಾಗವಹಿಸುವುದಕ್ಕೆ ಆನ್​ಲೈನ್ ನೋಂದಣಿ ಕೂಡ ಆರಂಭವಾಗುತ್ತಿದೆ.
ಇದನ್ನೂ ಓದಿ:ಕೃಷಿ ಕಾನೂನು ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿದವರೇ ಪ್ರತಿಭಟನೆಯನ್ನೂ ನಡೆಸ್ತಿರೋದು !
ಈ ಸಲದ ಕಾರ್ಯಕ್ರಮದ ಥೀಮ್​ ‘ಆತ್ಮನಿರ್ಭರಕ್ಕಾಗಿ ಕೊಡುಗೆ ನೀಡುವುದು’. ಜನವರಿ 9ರಂದು ಪೂರ್ವಾಹ್ನ ಪ್ರಧಾನಿ ಮೋದಿಯವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಇದೇ ಸಂದರ್ಭದಲ್ಲಿ ಭಾರತವನ್ನು ಅರಿಯಿರಿ ಎಂಬ ರಸಪ್ರಶ್ನೆಯ ವಿಜೇತರ ಹೆಸರಗಳು ಪ್ರಕಟವಾಗಲಿದೆ. ಎರಡು ಅವಧಿಯಲ್ಲಿ ಆತ್ಮನಿರ್ಭರ ಭಾರತದಲ್ಲಿ ಅನಿವಾಸಿ ಭಾರತೀಯರ ಪಾತ್ರ ಮತ್ತು ಕೋವಿಡ್​ ನಂತರದ ಕಾಲಘಟ್ಟದಲ್ಲಿ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಎದುರಿಸುವ ಸವಾಲುಗಳ ಕುರಿತು ಗೋಷ್ಠಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಭಾರತದಲ್ಲಿ ಹೊಸ ವರ್ಷ 5ಜಿ ಕ್ರಾಂತಿ ಗ್ಯಾರೆಂಟಿ – ಖಾತರಿ ನೀಡಿದ್ರು ಮುಕೇಶ್ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
