ನವದೆಹಲಿ: ಶುಕ್ರವಾರ ಬೆಳಗ್ಗೆ 11:15ಕ್ಕೆ ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.ಶುಕ್ರವಾರ ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಾದ ‘ರಾಪಿಡ್‌ಎಕ್ಸ್’ಗೆ (RAPIDX) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಈ ರೈಲು ಮೊದಲ ಹಂತದಲ್ಲಿ, ಗಾಜಿಯಾಬಾದ್ ಗುಲ್ಧರ್, ದುಹೈ, ಸಾಹಿಬಾಬಾದ್, ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಅದರಲ್ಲಿ 3 ಕಾರಿಡಾರ್‌ಗಳನ್ನು ಹಂತ-1 ರಲ್ಲಿ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗಿದೆ. ಅವುಗಳೆಂದರೆ, ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್, ದೆಹಲಿ-ಗುರುಗ್ರಾಮ-ಎಸ್‌ಎನ್‌ಬಿ-ಅಲ್ವಾರ್ ಕಾರಿಡಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್.
ಗಂಟೆಗೆ ಸುಮಾರು 160 ಕಿ.ಮೀ ವೇಗವನ್ನು ಹೊಂದಿರುವ ಈ ಕಾರಿಡಾರ್ ದೆಹಲಿಯಿಂದ ಮೀರತ್‌ಗೆ ಪ್ರಯಾಣಿಸಲು 1 ಗಂಟೆ ತೆಗೆದುಕೊಳ್ಳುತ್ತದೆ. ಈ ನಡುವೆ ನಗರ ಕೇಂದ್ರಗಳಾದ ಗಾಜಿಯಾಬಾದ್, ಮುರಾದ್‌ನಗರ ಮತ್ತು ಮೋದಿನಗರದ ಮೂಲಕ ಸಾಗಲಿದೆ.
ರೈಲಿನ ವಿಶೇಷತೆ ಏನು?ಸಂಪೂರ್ಣ ಹವಾನಿಯಂತ್ರಿತ ರ‍್ಯಾಪಿಡ್‌ಎಕ್ಸ್ ರೈಲುಗಳನ್ನು ಪ್ರಾದೇಶಿಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದೆ. ಅಡ್ಡ ಆಸನಗಳು, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ಲಗೇಜ್ ರ‍್ಯಾಕ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಪಾಯಿಂಟ್​ಗಲೂ ಇವೆ.6ಕೋಚ್​​​ಗಳನ್ನ ಹೊಂದಿರುತ್ತೆ
ರ‍್ಯಾಪಿಡ್‌ಎಕ್ಸ್ ರೈಲು 6 ಕೋಚ್‌ಗಳನ್ನು ಹೊಂದಿದ್ದು, ಸುಮಾರು 1,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ಟ್ಯಾಂಡರ್ಡ್ ಕೋಚ್‌ನಲ್ಲಿ 72 ಸೀಟುಗಳು ಮತ್ತು ಪ್ರೀಮಿಯಂ ಕೋಚ್‌ನಲ್ಲಿ 62 ಸೀಟುಗಳಿವೆ. ಸ್ಟಾಂಡರ್ಡ್ ಕೋಚ್‌ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ ದರ 50 ರೂ. ಇದ್ದು, ಪ್ರೀಮಿಯಂ ಕೋಚ್‌ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಇದೆ.
ಜನರು ಅಕ್ಟೋಬರ್ 21 ರಿಂದ ರ‍್ಯಾಪಿಡ್‌ಎಕ್ಸ್ನಲ್ಲಿ ಪ್ರಯಾಣ ಮಾಡಬಹುದು. ಇದರ ಸಂಪೂರ್ಣ 82 ಕಿ.ಮೀ ನ ಕಾರಿಡಾರ್ 2025 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.ಈ ಯೋಜನೆಯನ್ನು ಅಭಿವೃದ್ಧಿಪಡಿಸಲು 30,000 ಕೋಟಿ ರೂ. ವೆಚ್ಚವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
