ನವದೆಹಲಿ/ಲಖನೌ:ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯ ರಾಮ ಮಂದಿರದ ವಿನ್ಯಾಸವನ್ನು ಮೂಲ ಕಲ್ಪನೆಗಿಂತ ಕೊಂಚ ಬದಲಿಸಲಾಗಿದ್ದು, ಮಂದಿರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ರಾಮ ಮಂದಿರದ ಮುಖ್ಯ ವಾಸ್ತುಶಿಲ್ಪಿ ನಿಖಿಲ್ ಸೋಮಪುರ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
1985-86ರಲ್ಲಿ ರಚಿಸ ಲಾಗಿದ್ದ ವಿನ್ಯಾಸವನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಬದಲಿಸಲಾಗಿದೆ. ಮಂದಿರದ ಉದ್ದ, ಎತ್ತರ ಮತ್ತು ಅಗಲವನ್ನು ಹೆಚ್ಚಿಸಲಾಗಿದೆ. ಮೂಲ ವಿನ್ಯಾಸದಲ್ಲಿದ್ದ ಎರಡು ಮಹಡಿಯನ್ನು ಈಗ ಮೂರು ಮಹಡಿಗೆ ಹೆಚ್ಚಿಸಲಾಗಿದೆ. ಮೂರು ಹೆಚ್ಚುವರಿ ಗೋಪುರಗಳನ್ನು ಸೇರಿಸಲಾಗಿದೆ. ಮಂದಿರದಲ್ಲಿ ಒಟ್ಟು 5 ಗೋಪುರಗಳು ಇರಲಿವೆ. ಮಂದಿರದ ಮೂಲ ವಿನ್ಯಾಸದಲ್ಲಿ ಎತ್ತರ 128 ಅಡಿ ಇತ್ತು. ಈಗ ಅದನ್ನು 161 ಅಡಿಗೆ ವಿಸ್ತರಿಸಲಾಗಿದೆ. ಅಗಲ 235 ಅಡಿ ಮತ್ತು ಉದ್ದ 360 ಅಡಿ ಇರಲಿದೆ. ದೇವಾಲಯದಲ್ಲಿ ಒಟ್ಟು 318 ಸ್ತಂಭಗಳು ಇರಲಿದ್ದು, ಪ್ರತಿ ಮಹಡಿಯಲ್ಲಿ 106 ಸ್ತಂಭಗಳು ಇರುತ್ತವೆ. ದೇವಾಲಯ ನೆಲದಿಂದ 17 ಅಡಿ ಎತ್ತರದಲ್ಲಿರಲಿದ್ದು, ಎರಡನೇ ಮಹಡಿಯಲ್ಲಿ ರಾಮ್ ದರ್ಬಾರ್ ಇರುತ್ತದೆ. ಅಪಾರ ಭಕ್ತರನ್ನು ನಿಯಂತ್ರಿಸುವ ಸಲುವಾಗಿ ಮಂದಿರದ ಸುತ್ತಲು ಹೆಚ್ಚು ಸ್ಥಳ ಖಾಲಿ ಬಿಡಲಾಗುತ್ತದೆ. ಭಕ್ತರಿಗಾಗಿ ಪೆವಿಲಿಯನ್ ನಿರ್ವಿುಸಲು ಉದ್ದೇಶಿಸಲಾಗಿದ್ದು, ಇದು ಸುಮಾರು 50 ಸಾವಿರ ಆಸನಗಳ ವ್ಯವಸ್ಥೆ ಹೊಂದಿರಲಿದೆ ಎಂದು ತಿಳಿದುಬಂದಿದೆ.
ಗೊಗೊಯ್ಗೆ ಆಹ್ವಾನ ಇಲ್ಲ?
ರಾಮ ಮಂದಿರ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮಕ್ಕೆ ಪ್ರಸ್ತುತ ರಾಜ್ಯಸಭಾ ಸಂಸದ, ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಆಹ್ವಾನ ನೀಡಿ ಎಂದು ಶಿವಸೇನೆ ಆಗ್ರಹಿಸಿದೆ. ಅಯೋಧ್ಯೆಯ ವಿವಾದಿತ ಭೂಮಿಯನ್ನು ಮಂದಿರ ನಿರ್ವಣಕ್ಕೆ ನೀಡಬೇಕೆಂದು ಗೊಗೊಯ್ ಐತಿಹಾಸಿಕ ತೀರ್ಪು ನೀಡಿದ್ದರು. ಹೀಗಾಗಿ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ನೀಡಿ ಎಂದು ಶಿವಸೇನೆ ಆಗ್ರಹಿಸಿದೆ.
ಪ್ರಧಾನಿ ಮೋದಿಯಿಂದ ಭೂಮಿಪೂಜೆ
ರಾಮ ಮಂದಿರ ನಿರ್ಮಾಣಕ್ಕೆ ಆ. 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. 40 ಕೆ.ಜಿ ಬೆಳ್ಳಿ ಇಟ್ಟಿಗೆಗಳಿಂದ ಭೂಮಿ ಪೂಜೆ ನೆರವೇರಿಸ ಲಾಗುತ್ತದೆ. 200 ಗಣ್ಯರಿಗೆ ಮಾತ್ರ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಪ್ರಧಾನಿ ಮೋದಿ ಆಗಸ್ಟ್ 5ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಅಯೋಧ್ಯೆಯಲ್ಲಿ ಇರಲಿದ್ದು, ಈ ವೇಳೆ ಸಂತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದು ನಿಶ್ಚಿತ: ಟ್ರಸ್ಟ್​​ನಿಂದ​ ಅಧಿಕೃತ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
