ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ವಿಟರ್​ ಮಾಲೀಕ ಎಲನ್ ಮಸ್ಕ್ ಇಬ್ಬರೂ ಭೇಟಿಯಾಗಲಿರುವುದು ಕುತೂಹಲ ಕೆರಳಿಸಿದೆ. ಎಲನ್ ಮಸ್ಕ್ ಟ್ವಿಟರ್​ ಖರೀದಿ ಬಳಿಕ ಪ್ರಧಾನಿ ಮೋದಿಯನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದು, ಗಮನ ಸೆಳೆದಿದೆ.
ಸರ್ಕಾರಿ ಮೂಲಗಳ ಪ್ರಕಾರ, ಇಂದು ಯುಎಸ್​ನಲ್ಲಿ ಇರುವ ಪ್ರಧಾನಿ ಮೋದಿ ವಿವಿಧ ಕ್ಷೇತ್ರಗಳ ಹತ್ತಕ್ಕೂ ಅಧಿಕ ಚಿಂತಕ ನಾಯಕರನ್ನು ಭೇಟಿ ಮಾಡಲಿದ್ದು, ಆ ಪೈಕಿ ಎಲನ್ ಮಸ್ಕ್ ಕೂಡ ಒಬ್ಬರು ಎನ್ನಲಾಗಿದೆ. ಮೋದಿ 2015ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟರ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾಗ ಮಸ್ಕ್​ ಜತೆ ಭೇಟಿ ನಡೆದಿತ್ತು. ಆಗ ಮಸ್ಕ್ ಇನ್ನೂ ಟ್ವಿಟರ್ ಖರೀದಿಸಿರಲಿಲ್ಲ.
ಇದನ್ನೂ ಓದಿ:ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’; ಪುರುಷರಿಗೆ ಪರದಾಟ!
ಆದರೆ ಮಸ್ಕ್ ಟ್ವಿಟರ್ ಖರೀದಿ ಬಳಿಕ ಇದೇ ಮೊದಲ ಸಲ ಇಬ್ಬರ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಟೆಸ್ಲಾ ಫ್ಯಾಕ್ಟರಿಗಾಗಿ ಮಸ್ಕ್ ಭಾರತದಲ್ಲಿ ಜಾಗದ ಹುಡುಕಾಟದಲ್ಲಿರುವಾಗಲೇ ಈ ಭೇಟಿ ನಡೆಯುತ್ತಿರುವುದರಿಂದ ಇದು ಮತ್ತಷ್ಟು ಗಮನ ಸೆಳೆದಿದೆ. –ಏಜೆನ್ಸೀಸ್
ಮಹಿಳೆಯರಿಗೆ ಶಕ್ತಿ, ಮಕ್ಕಳಿಗೆ ನಿಶ್ಶಕ್ತಿ?: ವಾರಕ್ಕೆ 2 ದಿನ ನೀಡುತ್ತಿದ್ದ ಮೊಟ್ಟೆ-ಬಾಳೆಹಣ್ಣು ಇನ್ನು ಒಂದೇ ದಿನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + nine =
Remember me
