ನವದೆಹಲಿ:ಅಮೆರಿಕದ ಭೇಟಿಯಿಂದ ಉಭಯ ದೇಶಗಳ ನಡುವಿನ ಜಾಗತಿಕ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಅವಕಾಶ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯ ವೃದ್ಧಿಗೂ ನೆರವಾಗಲಿದೆ ಎಂದು ಬುಧವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಮೋದಿ ತಿಳಿಸಿದ್ದಾರೆ.
ತಮ್ಮ ಪ್ರವಾಸದ ಕೊನೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 76ನೇ ಮಹಾ ಧಿವೇಶನದಲ್ಲಿ ಮಾತನಾಡುವುದಾಗಿ ಹೇಳಿರುವ ಅವರು, ಕೋವಿಡ್-19 ಸಾಂಕ್ರಾಮಿಕತೆ ಮತ್ತು ಭಯೋತ್ಪಾದನೆ ನಿಗ್ರಹ, ತಾಪಮಾನ ಬದಲಾವಣೆ ಸಹಿತ ಹಲವು ಜಾಗತಿಕ ಸವಾಲುಗಳ ಮೇಲೆ ಭಾಷಣದಲ್ಲಿ ಹೆಚ್ಚು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಭಾರತ ಮೂಲದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಕ್ವಾಡ್ ಮುಖಂಡರೊಂದಿಗೆ ಮುಖಾಮುಖಿ ಶೃಂಗ ಸಭೆಯಲ್ಲಿ ಭಾಗವಹಿಸುವುದಾಗಿಯೂ ಪ್ರಧಾನಿ ವಿವರಿಸಿದ್ದಾರೆ. ಕರೊನಾ ಲಸಿಕೆ ಉತ್ಪಾದನೆ, ವಿನಿಮಯ ಮತ್ತಿತರ ವಿಷಯಗಳು ಅಲ್ಲಿ ಚರ್ಚೆಯಾಗಲಿದೆ.
ನಸುಕಿನ 3.30ಕ್ಕೆ ವಾಷಿಂಗ್ಟನ್​ಗೆ:ನವದೆಹಲಿಯಿಂದ ಬೆಳಗ್ಗೆ 11ಕ್ಕೆ ಹೊರಟ ಪ್ರಧಾನಿ ಮೋದಿ ವಿಮಾನ, 12 ಸಾವಿರ ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿ ವಾಷ್ಟಿಂಗ್ಟನ್​ಗೆ ಸ್ಥಳೀಯ ಕಾಲಮಾನ ಸಂಜೆ 6ಕ್ಕೆ (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 3.30ಕ್ಕೆ) ತಲುಪಲಿದೆ.
ಪಾಕ್ ವಾಯು ಪ್ರದೇಶದಿಂದ ಹಾರಾಟಪ್ರಧಾನಿ ಮೋದಿಯಿದ್ದ ವಿಮಾನ ಪಾಕಿಸ್ತಾನದ ವಾಯು ಪ್ರದೇಶದ ಮೇಲಿಂದ ಹಾದು ಹೋಯಿತು. ಇದಕ್ಕೆ ಪಾಕ್ ಸರ್ಕಾರ ಅನುಮತಿ ನೀಡಿತ್ತು. ತಾಲಿಬಾನ್ ನಿಯಂತ್ರಿತ ಪ್ರಕ್ಷುಬ್ಧ ಅಫ್ಘಾನಿಸ್ತಾನದ ವಾಯುಗಡಿಯಲ್ಲಿ ಪ್ರಯಾಣಿಸುವುದನ್ನು ನಿವಾರಿಸಲು ಪಾಕ್ ಮೂಲಕ ತೆರಳಲು ಸರ್ಕಾರ ಅನುಮತಿ ಕೋರಿತ್ತು. 2019ರಲ್ಲಿ, 370ನೇ ವಿಧಿ ತೆಗೆದು ಹಾಕಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಮೋದಿಯವರು ತನ್ನ ವಾಯು ಪ್ರದೇಶದ ಮೂಲಕ ಸಾಗಲು ಪಾಕ್ ಅನುಮತಿ ನಿರಾಕರಿಸಿತ್ತು.
ಏರ್ ಇಂಡಿಯಾ ಒನ್​ನಲ್ಲಿ ಪಯಣಏರ್ ಇಂಡಿಯಾ ಒನ್ ಎಂದು ಕರೆಯಲಾಗುವ ‘ಬೋಯಿಂಗ್ 777 ವಿವಿಐಪಿ’ ವಿಮಾನದಲ್ಲಿ ಮೋದಿ ತಮ್ಮ ತಂಡದೊಂದಿಗೆ ಅಮೆರಿಕಕ್ಕೆ ತೆರಳಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಈ ವಿಶೇಷ ವಿಮಾನವನ್ನು ಬಳಸಲಾಗುತ್ತದೆ. ರಾಷ್ಟ್ರ ಪ್ರಮುಖರ ರಕ್ಷಣೆಗೆ ಅಗತ್ಯವಾದ ವಿಶೇಷ ಭದ್ರತಾ ಕ್ರಮಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಅಂದಾಜು 8,400 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನವನ್ನು ಮಾರ್ಪಾಡು ಮಾಡಲಾಗಿದೆ.
ಪ್ರಧಾನಿ ಮೋದಿ ವೇಳಾಪಟ್ಟಿ (ಭಾರತೀಯ ಕಾಲಮಾನ ಪ್ರಕಾರ)
ಗುರುವಾರ
ಶುಕ್ರವಾರ:
ಶನಿವಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
