ನವದೆಹಲಿ:ಗ್ವಾಲಿಯರ್​ನ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ನೂರು ರೂಪಾಯಿ ನಾಣ್ಯವನ್ನು ಸೋಮವಾರ ಬಿಡುಗಡೆ ಮಾಡಿದರು.
ಹಣಕಾಸು ಸಚಿವಾಲಯವು ಈ ವಿಶೇಷ ನಾಣ್ಯವನ್ನು ಮುದ್ರಿಸಿದ್ದು, ಇಂದು ಬೆಳಗ್ಗೆ ನಡೆದ ವರ್ಚುವಲ್​ ಸಮಾರಂಭದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಪ್ರಧಾನಿ, ರಾಜಮಾತೆ ಸಿಂಧ್ಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ಜನರ ಪ್ರತಿನಿಧಿಗಳಿಗೆ ‘ರಾಜ್ ಸತ್ತಾ’ ಅಲ್ಲ, ‘ಜನಸೇವೆ’ಯೇ ಮುಖ್ಯವೆಂದು ಸಾಬೀತುಪಡಿಸಿದರು ಎಂದು ಸ್ಮರಿಸಿದರು.
ಇದನ್ನೂ ಓದಿ:ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​
ತ್ರಿವಳಿ ತಲಾಖ್ ವಿರುದ್ಧ​ ಕಾನೂನು ಮಾಡಿರುವುದರಿಂದ ದೇಶವು ರಾಜಮಾತೆ ಸಿಂಧ್ಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನೆಡೆಸುತ್ತಿದ್ದಾರೆಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಅವರ ಜತೆಗೆ ವಿಜಯರಾಜೇ ಸಿಂಧ್ಯಾ ಅವರ ಕುಟುಂಬಸ್ಥರು, ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯಸ್ಥರು ಹಾಗೂ ಇತರ ಗಣ್ಯರು ವರ್ಚುವಲ್​ ಪ್ಲ್ಯಾಟ್​ಫಾರ್ಮ್​ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.(ಏಜೆನ್ಸೀಸ್​)
100 ರೂ. ನಾಣ್ಯ; ನಾಳೆ ಬಿಡುಗಡೆ ಮಾಡಲಿದ್ದಾರೆ ಮೋದಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 1 =
Remember me
