ನವದೆಹಲಿ:ದೇಶದ ವಿವಿಧೆಡೆ ನಡೆಯುತ್ತಿರುವ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ಪರೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ಇಂದು ಭೇಟಿ ನೀಡಲಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಅಹಮದಾಬಾದ್​ಗೆ ಬಂದಿಳಿದ ಪ್ರಧಾನಿ ಮೋದಿ ಸದ್ಯ ಚಂಗೋದೋರ್​ ಪಾರ್ಕ್​ನಲ್ಲಿರುವ ಜೈಡುಸ್ ಕ್ಯಾಡಿಲಾದ ಜೈಕೋವಿ-ಡ್ ಲಸಿಕೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
Ahmedabad: Prime Minister Narendra Modi arrives at the Zydus Biotech Park to review the development of#COVID19vaccine candidate ZyCOV-Dpic.twitter.com/8cBQNQVUrN
— ANI (@ANI)November 28, 2020

ಇದಾದ ಬಳಿಕ ಮಧ್ಯಾಹ್ನ 1:30ಕ್ಕೆ ಹೈದರಾಬಾದ್​ ತಲುಪಿ, ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಸಂಜೆ 4:30ರ ಸುಮಾರಿಗೆ ಪುಣೆಯ ಸೆರಂ ಇನ್ಸ್​ಟಿಟ್ಯೂಟ್​ಗೆ ಭೇಟಿ ನೀಡಿ ಆಸ್ಟ್ರಾಜೆನಿಕಾದ ಲಸಿಕೆಯ ಪ್ರಯೋಗಗಳು ಹಾಗೂ ಉತ್ಪಾದನೆಯನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ:ಸೋಲೊಪ್ಪುವುದು ಕಷ್ಟ ಎಂದ ಟ್ರಂಪ್
ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ಖ್ಯಾತಿ ಪಡೆದಿದೆ. ಯುಕೆ ಮೂಲದ ಅಸ್ಟ್ರಾಜೆನೆಕಾ ಕಂಪನಿ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕೋವಿಡ್​-19 ಲಸಿಕೆ ತಯಾರಿಸಿದೆ.
ಭಾರತ್ ಬಯೋಟೆಕ್ ಕಂಪನಿಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ ಪುಣೆ ಮೂಲದ ಐಸಿಎಂಆರ್​ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ನಿಂದ ಪ್ರತ್ಯೇಕಿಸಲ್ಪಟ್ಟ ವೈರಸ್ ಕಣಗಳನ್ನು ಬಳಸಿ ದೇಶ ನಿರ್ಮಿತ ಕೋವಿಡ್​-19 ಲಸಿಕೆ ಸಿದ್ಧಪಡಿಸಿದೆ.(ಏಜೆನ್ಸೀಸ್​)
ಒಂದು ಮತದಿಂದ ಗೆದ್ದರೂ ಅಂತಿಮವಾಗಿ ಅದು ಗೆಲುವೇ: ಸಿಎಂ ನಿತೀಶ್ ಕುಮಾರ್​ ತಿರುಗೇಟು​

Sign in to your account
Please enter an answer in digits:14 − nine =
Remember me
